ಶ್ಯಾಂರಾಜ್ ಕುಟುಂಬಕ್ಕೆ ಒಲಿದ ವಸತಿ ಭಾಗ್ಯ
Team Udayavani, Feb 10, 2019, 12:30 AM IST
ಕಾಸರಗೋಡು: ರಾಜ್ಯ ಸರಕಾರ ಸ್ಪಂದಿಸಿದ ಪರಿಣಾಮ ಶ್ಯಾಮರಾಜ್ ಅವರ ಕುಟುಂಬಕ್ಕೆ ಸ್ವಂತ ನಿವಾಸವೊಂದು ನಿರ್ಮಾಣವಾಗಿದ್ದು, ನಿನ್ನೆ ಗೃಹಪ್ರವೇಶ ನಡೆದಿದೆ. ಸರಕಾರದ ಸಹಸಂಸ್ಥೆಗಳಾದ ಲೈಫ್ ಮಿಷನ್ ಮತ್ತು ಕುಟುಂಬಶ್ರೀ ಹೆಗಲು ನೀಡಿದ ಕಾರಣ ಈ ಬಡಕುಟುಂಬದ ಕನಸು ನನಸಾಗಿದೆ.
ಎರಡೆರಡು ಆಘಾತಗಳು
15 ವರ್ಷಗಳ ಹಿಂದೆ ಕಣ್ಣೂರಿನಿಂದ ಇರುವುದೆಲ್ಲವನ್ನೂ ಮಾರಾಟ ಮಾಡಬೇಕಾದ ಸ್ಥಿತಿಯಲ್ಲಿ ಬರಿಗೈಯಲ್ಲಿ ನಿಲ್ಲಬೇಕಾದ ಸ್ಥಿತಿ ಶ್ಯಾಂರಾಜ್ ಅವರ ಬದುಕಿನಲ್ಲಿ ಎರಡು ಬಾರಿ ಬಂದಿತ್ತು. ಈ ನಿಟ್ಟಿನಲ್ಲಿ ಪ್ರಥಮ ಬಾರಿ ಇರುವ ಎಲ್ಲವನ್ನೂ ಬಿಟ್ಟು ಕಾಸರಗೋಡಿಗೆ ಬಂದಿದ್ದ ಶ್ಯಾಂರಾಜ್ ಮತ್ತು ಅವರ ತಾಯಿ, ಪತ್ನಿ ಸಹಿತ 5 ಮಂದಿಯ ಕುಟುಂಬ ಜೊತೆಗೆ ಮಲೆನಾಡು ಪ್ರದೇಶ ವೆಳ್ಳರಿಕುಂಡ್‌ನಲ್ಲಿ ಆಸರೆ ಪಡೆದಿತ್ತು. ಸ್ವಂತದೊಂದು ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಸಹಜ ಮತ್ತು ಅತೀವ ನಿರೀಕ್ಷೆಯೊಂದಿಗೆ ಅವರು ಇಲ್ಲಿಗೆ ಬಂದಿದ್ದರು.
ಪುಟ್ಟ ನೌಕರಿಯೊಂದಿಗೆ ಪುನರಾರಂಭ
ಇಲ್ಲಿನ ಸಣ್ಣ ಇಗರ್ಜಿಯೊಂದರಲ್ಲಿ ಪುಟ್ಟ ನೌಕರಿಪಡೆದ ಅವರಿಗೆ ಸಿಗುವ ಅಲ್ಪ ಸಂಬಳದಲ್ಲಿ ಇವರ ಕುಟುಂಬ ಕಾಲಕಳೆಯಬೇಕಾಗಿ ಬಂದಿತ್ತು. ಅಷ್ಟರಲ್ಲಿ ಇವರ ತಾಯಿ ಶ್ಯಾಮಲಾ ಅವರು ಅಸೌಖ್ಯದಿಂದ ಹಾಸುಗೆ ಹಿಡಿಯುವ ಪರಿಸ್ಥಿತಿ ಬಂದಿತ್ತು. ಪರಿಣತ ತಪಾಸಣೆಯಲ್ಲಿ ಶ್ಯಾಮಲಾ ಅವರಿಗೆ ಕ್ಯಾನ್ಸರ್ ತಗುಲಿರುವುದು ಪತ್ತೆಯಾದಾಗ ಶ್ಯಾಂರಾಜ್ ಅವರು ಅಕ್ಷರಶಃ ಕಂಗೆಟ್ಟಿದ್ದರು. ಚಿಕಿತ್ಸೆಗೆ ಈ ನೌಕರಿ ಸಾಲದೇ ಹೋದಾಗ ವೆಳ್ಳರಿಕುಂಡಿನಲ್ಲಿ ಸ್ವಂತವಾಗಿ ಗಳಿಸಿದ್ದ ಮನೆ, ಹಿತ್ತಿಲು ಮಾರಾಟ ಮಾಡಬೇಕಾಗಿ ಬಂದಿತ್ತು. ಈ ಮೂಲಕ ಎರಡನೇ ಬಾರಿಗೆ ಎಲ್ಲವನ್ನೂ ಮಾರಾಟ ಮಾಡಬೇಕಾಗಿ ಬಂದು ಅನಂತರ ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್‌ನ ಎಲಿಕೋಡ್ ಪೊಯಿಲಿಲ್‌ನ ಕರ್ಗಲ್ಲ ಪ್ರದೇಶದಲ್ಲಿ ಹತ್ತು ಸೆಂಟ್ಸ್ ಜಾಗ ಖರೀದಿಸಿ, ತೆಂಗಿನ ಗರಿಯ ಪುಟ್ಟ, ಒಂದೇ ಕೊಠಡಿಯ ಗುಡಿಸಲೊಂದನ್ನು ನಿರ್ಮಿಸಿ 5 ಮಂದಿ ಬದುಕಲು ತೊಡಗಿದ್ದರು. ಮುಂದೆ 8 ವರ್ಷ ಇದೇ ರೀತಿ ಬದುಕುತ್ತಾ ಬಂದರು.
ಶ್ಯಾಂರಾಜ್‌ಗೂ ಕಾಡಿದ ಅಸೌಖ್ಯ
ನಂತರ 4 ವರ್ಷಗಳ ಹಿಂದೆ ಯಾವುದೋ ಕಾರಣಕ್ಕೆ ಇವರ ತಾಯಿ ಶ್ಯಾಮಲಾ ಅವರು ಈ ಮನೆ ಬಿಟ್ಟು ತೆರಳಿದ್ದರು. ಈ ನಡುವೆ ಶ್ಯಾಂರಾಜ್ ಅವರಿಗೆ ಶ್ವಾಸಕೋಶ ಸಂಬಂಧ ಅಸೌಖ್ಯ ಬಾಧಿಸತೊಡಗಿತ್ತು. ಅನೇಕ ಬಾರಿ ನೌಕರಿಗೂ ತೆರಳಲಾಗದಷ್ಟು ಕಾಯಿಲೆ ಇವರನ್ನು ಕಾಡತೊಡಗಿತ್ತು. ಬಹಳ ಕಷ್ಟದಿಂದ ಇವರ ಜೀವನ ಸಾಗತೊಡಗಿತ್ತು.
ತೆರೆದ ಅದೃಷ್ಟದ ಬಾಗಿಲು
ಈ ವೇಳೆ ರಾಜ್ಯ ಸರಕಾರದ ಲೈಫ್ ಮಿಷನ್ ಯೋಜನೆಯ ಮೊದಲ ಹಂತದ ಪಟ್ಟಿಯಲ್ಲಿ ಶ್ಯಾಂರಾಜ್ ಅವರ ಹೆಸರು ಸೇರ್ಪಡೆಯಾದುದು ಇವರ ಬದುಕಿಗೊಂದು ನಿರೀಕ್ಷೆ ಮೂಡಿಸಿತು.
ಈ ಮೂಲಕ 4 ಲಕ್ಷ ರೂ. ಮನೆ ನಿರ್ಮಾಣಕ್ಕೆ ಮಂಜೂರಾಗಿತ್ತು. ಆದರೆ ಮನೆ ನಿರ್ಮಾಣಕ್ಕೆ ಕಾರ್ಮಿಕರ ಕೂಲಿ ನೀಡುವ ಬಗೆ ಕಾಣದೆ ಮತ್ತೆ ಕಂಗೆಡಬೇಕಾದ ಸ್ಥಿತಿ ಇವರದಾಗಿತ್ತು.
ಸ್ಥಳೀಯರ ನೇತೃತ್ವ
ಈ ವೇಳೆ ಇವರಿಗೆ ಸ್ಪಂದಿಸಿದ್ದು ಸ್ವಸಹಾಯ ಸಂಘಟನೆ ಕುಟುಂಬಶ್ರೀ. ಈ ಸಂಘಟನೆಯ ಜಿಲ್ಲಾ ಮಿಷನ್‌ನ ಸಹಾಯದೊಂದಿಗೆ ಮನೆ ನಿರ್ಮಾಣಕ್ಕೆ ಹಾದಿ ತೆರೆದಿತ್ತು. ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್, ಡಿ.ಪಿ.ಎಂ.ಟಿ.ಪಿ.ಹರಿಪ್ರಸಾದ್,ಕಯ್ಯೂರು-ಚೀಮೇನಿ ಸಿ.ಡಿ.ಎಸ್.ಅಧ್ಯಕ್ಷೆ ಶ್ರೀಲತಾ ಅವರ ನೇತೃತ್ವದಲ್ಲಿ ಮನೆ ನಿರ್ಮಾಣಕ್ಕೆ ಕಾರ್ಮಿಕರ ಪೂರೈಕೆ ನಡೆದಿತ್ತು. ಸ್ಥಳೀಯ ಸಹೃದಯರೂ ಈ ಕಾಯಕಕ್ಕೆ ಹೆಗಲು ನೀಡಿದ್ದರು.
ಇದರ ಅಂಗವಾಗಿ ವಿವಿಧ ನೆರೆಕೂಟದಿಂದ 13 ಸದಸ್ಯರಿರುವ ಕಾರ್ಮಿಕರ ತಂಡ ಈ ಕಾಯಕಕ್ಕೆ ಸಿದ್ಧವಾಗಿತ್ತು. ಮೇಸ್ತ್ರಿ ಶ್ರೀಧರನ್ ಇವರಿಗೆ ನೇತೃತ್ವ ವಹಿಸಿದ್ದರು. ಇದು ತ್ವರಿತ ರೂಪದಲ್ಲಿ ಮನೆನಿರ್ಮಾಣ ನಡೆಸಲು ಪೂರಕವಾಗಿತ್ತು. 200 ರೂ. ದಿನಕೂಲಿ ಮತ್ತು ಆಹಾರ, ಯಾತ್ರಾ ಭತ್ಯೆ ಇತ್ಯಾದಿಯಾಗಿ 100 ರೂ. ಇವರಿಗೆ ಕುಟುಂಬಶ್ರೀ ಜಿಲ್ಲಾ ಮಿಷನ್ ಒದಗಿಸಿತ್ತು.
ಒಟ್ಟು 6 ಲಕ್ಷ ರೂ.ವೆಚ್ಚ
ಈ ಮೂಲಕ 6 ಲಕ್ಷ ರೂ. ಮನೆ ಪೂರ್ತಿಗೊಂಡ ವೇಳೆ ವೆಚ್ಚವಾಗಿದೆ. ಲೈಫ್ ಮಿಷನ್ ಮಂಜೂರು ಮಾಡಿದ 4 ಲಕ್ಷ ರೂ. ಅಲ್ಲದೆ ಉಳಿದ 2 ಲಕ್ಷ ರೂ. ಕುಟುಂಬಶ್ರೀ ಮತ್ತು ಇತರ ಸಹೃದಯರ ಮೂಲಕ ಲಭಿಸಿತ್ತು. ಇದು ಈ ಬಡಕುಟುಂಬದ ಕಷ್ಟಗಳ ಸರಮಾಲೆಗಳ ನಡುವೆ ಸಾಂತ್ವನದ ಸ್ಪರ್ಶವಾಗಿ ಬದುಕಿಗೊಂದು ಹೊಸ ನಿರೀಕ್ಷೆ ಮೂಡಿಸಿದೆ.
ಕೀಲಿಕೈ ಹಸ್ತಾಂತರ
ಶ್ಯಾಂರಾಜ್ ಅವರ ಕುಟುಂಬಕ್ಕಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶೋತ್ಸವ ಫೆ.9ರಂದು ನಡೆದಿದೆ. ಸಂಜೆ ಈ ಸಂಬಂಧ ನಡೆಯುವ ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಮನೆಯ ಕೀಲಿಕೈ ಹಸ್ತಾಂತರಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.