ಕಾನೂನಿನ ಅಜ್ಞಾನ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಕಾರಣ : ಜೋಸ್‌ಫೈನ್
Team Udayavani, Jun 14, 2019, 5:52 AM IST
ಕಾಸರಗೋಡು: ಕಾನೂನಿನ ಬಗ್ಗೆ ಸರಿಯಾದ ಜ್ಞಾನ ಇಲ್ಲದಿರುವುದು, ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರಧಾನ ಕಾರಣವಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ. ಜೋಸ್‌ಫೈನ್ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಆಯೋಗದ ಮೆಗಾ ಅದಾಲತ್‌ನ ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.,
ಬಟ್ಟೆ ಬದಲಿಸಿದಂತೆ ಪತ್ನಿಯರನ್ನು ಬದಲಿಸುವ ಮನೋಧರ್ಮ ಕೆಲವು ಕಡೆ ಕಂಡುಬರುತ್ತಿದೆ. ಇದು ಕಾನೂನಿನ ಬಗೆಗಿನ ಅಜ್ಞಾನದ ಫಲ. ವಿಚ್ಛೇದನೆ ನಡೆಸದೇ ಮತ್ತೂಬ್ಬರನ್ನು ವಿವಾಹವಾಗಕೂಡದು ಎಂಬುದು ಕಾನೂನಿನ ಸ್ಪಷ್ಟ ಆದೇಶ ಎಂದವರು ತಿಳಿಸಿದರು. ಅದಾಲತ್‌ನಲ್ಲಿ ಪರಿಶೀಲಿಸಿದ ಪ್ರಕರಣವೊಂದರ ಬಗ್ಗೆ ಮಾತನಾಡಿದ ಅವರು 18 ವರ್ಷದಲ್ಲಿ ವಿವಾಹಿತೆಯಾದ ಮಹಿಳೆಯೊಬ್ಬರು ಅನಂತರ ಪತಿಯಿಂದ ಬೇರ್ಪಟ್ಟಿದ್ದು, ಕಾನೂನು ರೀತಿಯ ವಿಚ್ಚೇದನ ನೀಡದೆ ಪತಿ ಮತ್ತೂಬ್ಬ ಮಹಿಳೆಯನ್ನು ವಿವಾಹವಾಗಿ, ವಿದೇಶದಲ್ಲಿ ನೆಲೆಸಿದ್ದಾರೆ. ಮೂವರು ಮಕ್ಕಳ ಸಹಿತ ತಾವು ಅನಾಥೆಯಾಗಿದ್ದು, ಜೀವನಾಂಶ ನೀಡುವಂತೆ ನ್ಯಾಯಾಲಯಕ್ಕೆ ದೂರು ಸಲಿಸಿದರು. ನ್ಯಾಯಾಲಯ ತಿಂಗಳಿಗೆ 4 ಸಾವಿರ ರೂ. ಜೀವನಾಂಶ ನೀಡುವಂತೆ ತೀರ್ಪು ನೀಡಿದ್ದು, ಅದರ ವಿರುದ್ಧ ಮಹಿಳೆ ಮಹಿಳಾ ಆಯೋಗಕ್ಕೆ ಅಹವಾಲು ಸಲ್ಲಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.
ವಿವಾಹಿತಳ ಆಭರಣ ಹಕ್ಕು
ವಿವಾಹ ವೇಳೆ ತಾಯಿ ಮನೆಯಿಂದ ನೀಡಲಾಗುವ ಬಂಗಾರದ ಆಭರಣ ಮತ್ತು ನಗದು ಅನಂತರ ಪತಿ ಹಾಗೂ ಮನೆಮಂದಿ ಬಳಸುವ ಕ್ರಮ ವ್ಯಾಪಕವಾಗಿ ಕಂಡುಬರುತ್ತಿದೆ. ಈ ಸೊತ್ತುಗಳ ಪೂರ್ಣ ಹಕ್ಕು ಮಹಿಳೆಯರಿಗೆ ಲಭಿಸುವಂತಾಗಬೇಕು. ಇದಕ್ಕೆ ರಾಜ್ಯ ಮಹಿಳಾ ಆಯೋಗ ಯತ್ನಿಸುತ್ತಿದೆ ಎಂದವರು ಹೇಳಿದರು.
ಸೈಬರ್ ಆಕ್ರಮಣಕ್ಕೆ ಮಹಿಳೆಯರು ವ್ಯಾಪಕವಾಗಿ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದ ಅವರು ಸಾವಿರಾರು ಮಹಿಳೆಯರು ಇದರಿಂದ ಬಳಲುತ್ತಿದ್ದಾರೆ. ದೇಶದ ಇಂದಿನ ಸೈಬರ್ ಕಾಯಿದೆ ದುರ್ಬಲವಾಗಿರುವುದು ಇದಕ್ಕೆ ಪ್ರಧಾನ ಕಾರಣ ಎಂದ ಅವರು 120 ಪೊಲೀಸ್ ಕಾಯಿದೆ ಈ ನಿಟ್ಟಿನಲ್ಲಿ ಸಾಲದು, ಹೊಸ ಸಬಲ ಕಾಯಿದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ವೈದ್ಯೆ ದೂರು
ದೂರವಾಣಿ ಮೂಲಕ ಕರೆಮಾಡಿ ಕಿರುಕುಳ ನೀಡುತ್ತಿರುವ ಸಹವರ್ತಿಯೊಬ್ಬರ ವಿರುದ್ಧ ವೈದ್ಯೆಯೊಬ್ಬರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿದ್ದರೂ ಅದು ದುರ್ಬಲವಾಗಿದೆ. ಈ ಬಗ್ಗೆ 350 ಕಾಯಿದೆ ಪ್ರಕಾರ ದೂರು ದಾಖಲಿಸುವಂತೆ ಆಯೋಗ ಆದೇಶಿಸಿದ್ದು, ವಿಚಾರಣೆ ನಡೆಯುತ್ತಿದೆ. ಇಂಥಾ ಪ್ರಕರಣಗಳು ಎಲ್ಲೆಡೆ ಹೆಚ್ಚುತ್ತಿದ್ದು, ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಮಹಿಳೆಯರು ಈ ನಿಟ್ಟಿನಲ್ಲಿ ಅ ಧಿಕ ಸಂಖ್ಯೆಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದರು.
ಆಸ್ತಿ ತಗಾದೆ ಪ್ರಕರಣವೊಂದಕ್ಕೆ ಸಂಬಂ ಧಿಸಿ ಮಹಿಳೆಯೊಬ್ಬರೊಂದಿಗೆ ಯುವಕನೊಬ್ಬ ಅಸಭ್ಯವಾಗಿ ಮಾತನಾಡಿದ ಸಂಬಂಧ ದೂರು ಸಲ್ಲಿಕೆಯಾಗಿದೆ. ಈ ಸಂಬಂಧ ಇಲಾಖೆಗಳಿಂದ ವರದಿ ಯಾಚಿಸಲಾಗಿದೆ ಎಂದು ಅವರು ನುಡಿದರು. ಪ್ರಕರಣವೊಂದಕ್ಕೆ ಸಂಬಂ ಧಿಸಿ ತಂತಿ ಬೇಲಿಯಲ್ಲಿ ಸೋಲಾರ್ ವಿದ್ಯುತ್ ಹರಿಸಿದ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸುವಂತೆ ಆಯೋಗ ಸಂಬಂಧಪಟ್ಟವರಿಗೆ ಆದೇಶಿಸಿದೆ. ಸೋಲಾರ್ ಇರಲಿ, ಯಾವುದೇ ರೀತಿಯ ವಿದ್ಯುತ್ ಇರಲಿ. ಅದನ್ನು ಗಂಭೀರವಾಗಿ ಪರಿಶೀಲಿಸುವಂತೆ ಆಯೋಗ ಆದೇಶಿಸಿದೆ ಎಂದರು.
ಬೇರೊಂದು ಜಿಲ್ಲೆಯ ಪ್ರಕರಣವೊಂದಕ್ಕೆ ಸಂಬಂ ಧಿಸಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ಸಿದ್ಧರಾಗದ ಅವರು ಆಯಾ ಜಿಲ್ಲೆಗಳ ಮಹಿಳೆಯರ ಸಮಸ್ಯೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ಅವರಿಗೆ ನ್ಯಾಯ ಒದಗಿಸುವ ಪ್ರಯತ್ನ ಆಯೋಗದ್ದು ಎಂದು ಸ್ಪಷ್ಟನೆ ನೀಡಿದರು.
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡು ಜಿಲ್ಲೆಯಲ್ಲಿ ಮಹಿಳಾ ಆಯೋಗಕ್ಕೆ ಲಭಿಸಿದ ದೂರುಗಳ ಸಂಖ್ಯೆ ಕಡಿಮೆ ಎಂದು ತಿಳಿಸಿದರು. ಉಳಿದ ಜಿಲ್ಲೆಗಳಲ್ಲಿ 100ಕ್ಕಿಂತ ಅಧಿ ಕ ದೂರುಗಳು ಸಲ್ಲಿಕೆಯಾದರೆ, ಕಾಸರಗೋಡು ಜಿಲ್ಲೆಯಲ್ಲಿ 40 ದೂರುಗಳು ಮಾತ್ರ ಲಭಿಸಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಪ್ರತಿನಿ ಧಿಗಳಾದ ಡಾ.ಶಾಹಿದಾ ಕಮಾಲ್, ಪಿ.ಎಂ.ರಾಧಾ, ನ್ಯಾಯವಾದಿ ಷಿಜಿ ಮೊದಲಾದವರು ಉಪಸ್ಥಿತರಿದ್ದರು.
ಮಕ್ಕಳ ಮೇಲೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ಇದರ ವಿರುದ್ಧ ಕಾನೂನು ಜಾಗೃತಿ ಮೂಡಿಸುವ ಯತ್ನ ರಾಜ್ಯ ಮಹಿಳಾ ಆಯೋಗದಿಂದ ನಡೆಸಲಾಗುತ್ತಿದೆ. ಇದರ ಅಂಗವಾಗಿ ಪೋಕೊÕà ಕಾಯಿದೆ ಕುರಿತು ರಾಜ್ಯಾದ್ಯಂತ ಮಹಿಳೆಯರಿಗಾಗಿ ತರಗತಿ ನಡೆಸಲಾಗುತ್ತಿದೆ.ತರಗತಿಯ ಪೂರ್ಣ ವೆಚ್ಚವನ್ನು ಆಯೋಗವೇ ವಹಿಸುತ್ತಿದೆ. ರಾಜ್ಯ ಮಹಿಳಾ ಆಯೋಗ ಒಂದು ಅರ್ಧ ನ್ಯಾಯಾಂಗ ವ್ಯವಸ್ಥೆ. ಆದರೂ ರಾಜ್ಯದ ಮಹಿಳೆಯರಿಗೆ ಪೂರ್ಣ ರೂಪದಲ್ಲಿ ನ್ಯಾಯ ಒದಗಿಸುವ ಯತ್ನ ನಡೆಸುತ್ತಿದೆ. ರಾಜಕೀಯೇತರವಾಗಿ ಅದು ತನ್ನ ಕಾರ್ಯವೈಖರಿ ನಡೆಸುತ್ತಿದೆ ಎಂದು ಜೋಸ್‌ಫೈನ್ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ
Daily Horoscope; ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ…
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.