ಆಯಂಕಡವು ಸೇತುವೆ ಇಂದು ಉದ್ಘಾಟನೆ
ಜಿಲ್ಲೆಯಲ್ಲೇ ಅತ್ಯಂತ ಎತ್ತರದ ಖ್ಯಾತಿಯ
Team Udayavani, Dec 8, 2019, 4:55 AM IST
ಕಾಸರಗೋಡು: ಜಿಲ್ಲೆಯಲ್ಲೇ ಅತ್ಯಂತ ಎತ್ತರದ ಎಂಬ ಖ್ಯಾತಿಗೆ ಪಾತ್ರವಾದ ಆಯಂಕಡವು ಸೇತುವೆ ಡಿ. 8 ರಂದು ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಪುಲ್ಲೂರು- ಪೆರಿಯ- ಬೇಡಡ್ಕ ಪಂಚಾಯತ್‌ಗಳನ್ನು ಪರಸ್ಪರ ಸಂಪರ್ಕಿಸುವ ಆಯಂಕಡವು ಸೇತುವೆಗೆ 14 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
ಎತ್ತರ 24 ಮೀಟರ್ : ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಸೇತುವೆ ಮತ್ತು ರಸ್ತೆಗಾಗಿ 14 ಕೋಟಿ ರೂ. ವೆಚ್ಚ ನೀಳದಲ್ಲಿದೆ ಸೇತುವೆ. ಪೆರ್ಲಡ್ಕದಿಂದ ಸೇತುವೆ ವರೆಗಿನ 3.800 ಕಿ.ಮೀ. ಅಪ್ರೋಚ್ ರೋಡ್ ಮೆಕಾಡಂ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರಿಂದ ಸೇತುವೆಗೆ 2.500 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಬಾಕಿಯಿದೆ. ಇದಕ್ಕಾಗಿ 2019-20 ನೇ ಹಣಕಾಸು ವರ್ಷದ ಕೆ.ಡಿ.ಪಿ. ಪ್ಯಾಕೇಜ್‌ನಲ್ಲಿ ಸೇರ್ಪಡೆಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಸೇತುವೆ ಕಾಸರಗೋಡು ಜಿಲ್ಲೆಯಲ್ಲೇ ಅತ್ಯಂತ ಎತ್ತರದಲ್ಲಿರುವ ಸೇತುವೆ ಎಂದು ಖ್ಯಾತಿಗೆ ಪಾತ್ರವಾಗಿದೆ.
2016 ರಲ್ಲಿ ಶಿಲಾನ್ಯಾಸ
ಸೇತುವೆಯ ನಿರ್ಮಾಣ ಕಾಮಗಾರಿಗೆ 2016 ಜನವರಿ ತಿಂಗಳಲ್ಲಿ ಅಂದಿನ ಸಚಿವ ರಾಗಿದ್ದ ಇಬ್ರಾಹಿಂ ಕುಂಞಿ ಶಿಲಾನ್ಯಾಸ ಮಾಡಿದ್ದರು. 2015 ಅಕ್ಟೋಬರ್ 1 ರಂದು ಸೇತುವೆ ನಿರ್ಮಾಣಕ್ಕೆ ತಾಂತ್ರಿಕ ಅನುಮತಿ ಲಭಿಸಿತ್ತು. ಮೊದಲು ಸೇತು ವೆಯ ಡಿಸೈನ್‌ನಲ್ಲಿ ಕೆಲವೊಂದು ಕುಂದು ಕೊರತೆಗಳಿದ್ದುದರಿಂದ ಸೇತುವೆ ಕಾಮ ಗಾರಿ ವಿಳಂಬವಾಯಿತು. ಈ ಹಿನ್ನೆಲೆಯಲ್ಲಿ ಎನ್.ಐ.ಟಿ.ಯ ತಜ್ಞ ಡಾ|ಅರವಿಂದಾಕ್ಷನ್ ಅವರ ನೆರವನ್ನು ಪಡೆಯಲಾಯಿತು.
ಬಯಲು ರಂಗ ಮಂದಿರ
ಸೇತುವೆಯ ಎತ್ತರದಿಂದಾಗಿ ಪ್ರಕೃತಿ ಸೌಂದರ್ಯವನ್ನು ಆಶ್ವಾದಿಸಲು ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಯೋಜಿಸಲಾಗಿದೆ. ಇದರಂಗವಾಗಿ ಸೇತುವೆಯ ಅಡಿಭಾಗದಲ್ಲಿ ಬಯಲು ರಂಗ ಮಂದಿರ, ಆಹಾರ ತಯಾರಿ ಕೇಂದ್ರ, ಶೌಚಾಲಯ ಬ್ಲಾಕ್ ಮೊದಲಾದವುಗಳನ್ನು ನಿರ್ಮಿಸಲು ಪ್ರಥಮ ಹಂತದಲ್ಲಿ ಯೋಜಿಸಲಾಗಿದೆ.ಪ್ರಕೃತಿ ಸೌಂದರ್ಯದ ನೆಲೆಬೀಡಾಗಿ ರುವ ಈ ಸೇತುವೆ ಪರಿಸರದಲ್ಲಿ ಹೊಳೆಯ ಸೌಂದರ್ಯವನ್ನು ಆಸ್ವಾದಿಸಲು ಗ್ಲಾಸ್ ಬ್ರಿಡ್ಜ್ ನಿರ್ಮಿಸಲು ಡಿ.ಪಿ.ಆರ್. ಪ್ರವಾಸೋದ್ಯಮ ಇಲಾಖೆಗೂ ಜಿಲ್ಲಾ ಟೂರಿಸಂ ಪ್ರಮೋಶನ್ ಕೌನ್ಸಿಲ್‌ಗೂ ಹಸ್ತಾಂತರಿಸಲಾಗಿದೆ ಎಂದು ಶಾಸಕ ಕೆ.ಕುಂಞಿರಾಮನ್ ತಿಳಿಸಿದ್ದಾರೆ.ಮಡಿಕೇರಿ, ಸುಳ್ಯ, ಸುಬ್ರಹ್ಮಣ್ಯ, ದೇಲಂಪಾಡಿ, ಕಾರಡ್ಕ, ಮುಳ್ಳೇರಿಯ, ಬೆಳ್ಳೂರು ಪಂಚಾಯತ್‌ಗಳಿಂದ, ಬೇಕಲ ಕೋಟೆ, ಕೇಂದ್ರೀಯ ವಿಶ್ವವಿದ್ಯಾಲಯ, ಕಾಂಞಂಗಾಡ್ ನಗರದಲ್ಲಿರುವವರಿಗೆ ಚೆರ್ಕಳ ದಾರಿಯಾಗಿ ತಲುಪಬಹುದು.
ಇಂದು ಉದ್ಘಾಟನೆ
ರವಿವಾರ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಪ್ರತಿನಿಧಿಗಳು ಭಾಗವಹಿಸುವರು. ಇದೇ ಸಂದರ್ಭದಲ್ಲಿ ಅಪ್ರೋಚ್ ರೋಡ್ ನಿರ್ಮಾಣಕ್ಕೆ ಉಚಿತವಾಗಿ ಸ್ಥಳ ನೀಡಿದವರನ್ನು ಗೌರವಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.