ರಂಗಭೂಮಿ ಸಮಾಜದ ಕನ್ನಡಿ, ಕಲಾವಿದನಿಗೆ ಗೌರವ: ಒಡಿಯೂರು ಶ್ರೀ
ಉತ್ತರ ಕೊರ್ಲೆ, ಗಿರಿಗಿಟ್ ಗಿರಿಧರೆ ನಾಟಕಗಳ ಮುಹೂರ್ತ
Team Udayavani, Jun 28, 2019, 5:55 AM IST
ಮಂಜೇಶ್ವರ: ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಮತ್ತು ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ತಂಡದ ನೂತನ ನಾಟಕಗಳ ಶುಭ ಮುಹೂರ್ತವು ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪೂಜೆ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ರಂಗಭೂಮಿಯು ಸಮಾಜದ ಕನ್ನಡಿ. ಹಾಸ್ಯವೇ ನಾಟಕವಲ್ಲ, ನಾಟಕವೇ ಹಾಸ್ಯವಲ್ಲ. ಸಂದೇಶ ಸಾರುವ ಕಥಾವಸ್ತು ಹಾಸ್ಯದೊಂದಿಗೆ ಬೆರೆತು ನಾಟಕ ಪ್ರದರ್ಶಿಸಿದರೆ ಸಮಾಜಕ್ಕೆ ಒಳಿತಾಗಬಹುದು. ಕಲೆಗೆ ಆರಾಧನ ಶಕ್ತಿ ಉಂಟು. ಅದನ್ನು ನಂಬಿ ನಡೆದರೆ ಕಲಾವಿದರು ಉನ್ನತ ಮಟ್ಟಕ್ಕೆ ಮುಟ್ಟಬಹುದು. ಅದಕ್ಕೆ ಶಾರದಾ ಐಸಿರಿ ತಂಡವೇ ಸಾಕ್ಷಿ ಎಂದರು.
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ, ಅಂದು ಸಮಾಜದಲ್ಲಿ ನಾಟಕದವ, ಆಟದವ ಎಂಬ ತಾತ್ಸಾರ ಭಾವನೆ ಇತ್ತು. ಇಂದು ಕಲಾವಿದರಿಗೆ ರಾಜ ಮರ್ಯಾದೆ ಸಿಗುತ್ತದೆ. ರಂಗಭೂಮಿಯಿಂದ ಎಷ್ಟೋ ಕಲಾವಿದರ ಸಂಸಾರ ಸಾಗುತ್ತಿದೆ. ಸಮಾಜವು ಇನ್ನಷ್ಟು ಪ್ರೋತ್ಸಾಹಿಸಿದರೆ ಕಲಾವಿದರ ಬದುಕು ಅಭಿವೃದ್ಧಿ ಹೊಂದಬಹುದು ಎಂದು ನುಡಿದರು.
ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ಆಶೀರ್ವಚನ ನೀಡಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಸರಗೋಡು ಚಿನ್ನಾ ತುಳು ರಂಗಭೂಮಿಯ ಖಾತ್ಯ ಕಲಾವಿದ, ಚಲನಚಿತ್ರ ನಟ, ಐಸಿರಿ ತಂಡದ ನಿರ್ದೇಶಕ ಕುಸಲ್ದರಸೆ ನವೀನ್ ಡಿ. ಪಡೀಲ್ ಅವರನ್ನು ಸಮ್ಮಾನಿಸಲಾಯಿತು. ಸಮಾರಂಭದಲ್ಲಿ ತಿಮ್ಮಪ್ಪ ಕಾಂಜರು, ಕೋಳಾರು ಸತೀಶ್ಚಂದ್ರ ಭಂಡಾರಿ, ಪಾವಳ ಶ್ರೀ ಉದಯ ಗುರುಸ್ವಾಮಿ, ಎಸ್.ಎನ್ ಕಡಂಬಾರು, ಪದ್ಮನಾಭ ಕಡಪ್ಪರ, ನ್ಯಾಯವಾದಿ ನವೀನ್ ರಾಜ್ ಕೆ.ಜೆ., ಶಶಿಧರ ಪೊಯ್ಯತ್ತಬೈಲು, ಸಂಕಬೈಲು ಮಂಜುನಾಥ ಅಡಪ್ಪ, ಹರೀಶ್ ಶೆಟ್ಟಿ ಮಾಡ ಶುಭಹಾರೈಸಿದರು.
ನಾಟಕಗಳ ಪ್ರಥಮ ಪ್ರದರ್ಶನ ಜುಲೈ 28 ಮತ್ತು ಆಗಸ್ಟ್ 3ರಂದು ಶ್ರೀ ಧಾಮ ಮಾಣಿಲದಲ್ಲಿ ಕಾಣಲಿದೆ. ಪ್ರಕಾಶ್ ಕೆ.ತೂಮಿನಾಡು ಸ್ವಾಗತಿಸಿದರು. ಸುಂದರ್ ರೈ ಮಂದಾರ ವಂದಿಸಿದರು. ಸೋಮನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಎಲ್ಲರನ್ನೂ ಒಪ್ಪಿಕೊಳ್ಳಬೇಕು ನಾನು ಅನ್ನುವುದು ಬಿಟ್ಟು ನಾವು ಎಂಬ ಆತ್ಮಶುದ್ಧಿಯಿಂದ ರಂಗಭೂಮಿಯಲ್ಲಿ ಕಲಾವಿದನಾಗಿ ಸಾಗಿ ಇನ್ನೊಬ್ಬರ ಪ್ರತಿಭೆಯನ್ನು ಒಪ್ಪಿಕೊಂಡು ಕಲಾಸೇವೆ ಮಾಡಿದರೆ ಕಲಾ ಸರಸ್ವತಿ ಒಲಿಯುವಳು.
– ಕಾಸರಗೋಡು ಚಿನ್ನಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.