ಪುಸ್ತಕ ಕೊಂಡು ಓದುವವರ ಸಂಖ್ಯೆ ಇಳಿಮುಖ
ಸಾಮಾಜಿಕ ಜಾಲ ತಾಣಗಳತ್ತ ಒಲವು
Team Udayavani, Nov 24, 2019, 5:08 AM IST
ಪೆರ್ಲ: ಓದುವ ಹವ್ಯಾಸ ಅಗತ್ಯ. ಯಾವುದೇ ಜಾತ್ರೆ, ಉತ್ಸವ,ಸಮ್ಮೇಳನಗಳಲ್ಲಿ ಸಾಹಿತ್ಯ,ಕಥೆ,ಕವಿತೆ,ಪುರಾಣ ಇತ್ಯಾದಿ ಪುಸ್ತಕ ಮಾರಾಟ ಮಳಿಗೆಗಳನ್ನು ಕಾಣುತ್ತೇವೆ.ಬೃಹತ್ ಸಮ್ಮೇಳನಗಳಲ್ಲಂತೂ ಪುಸ್ತಕಗಳ ದೊಡ್ಡ ಮಾರಾಟ ಕೇಂದ್ರಗಳನ್ನೇ ನೋಡುತ್ತೇವೆ.ಆದರೆ ಪುಸ್ತಕಗಳನ್ನು ಖರೀದಿಸುವವರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿದೆ.ಇದಕ್ಕೆ ಮುಖ್ಯ ಕಾರಣ ಮೊಬೈಲ್ ಫೋನ್,ಸಾಮಾಜಿಕ ಜಾಲ ತಾಣಗಳು. ಜನರಿಗೆ ಬೇಕಾದ ಮಾಹಿತಿಗಳು ಜಾಲತಾಣಗಳಿಂದ ಕ್ಷಣಾರ್ಧದಲ್ಲಿ ಲಭ್ಯವಾಗುತ್ತಿವೆ.
ಆದ್ದರಿಂದ ಪುಸ್ತಕ ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸುಮಾರು ಎಂಟು ವರ್ಷಗಳಿಂದ ಪುಸ್ತಕ ಮಾರಾಟ ವೃತ್ತಿ ಮಾಡುವ ಚಂದ್ರ ಶೇಖರ ಮೊರತ್ತಣೆ ಹೇಳುತ್ತಾರೆ.ದೂರದ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪುಸ್ತಕಗಳನ್ನು ಬಾಡಿಗೆ ವಾಹನಗಳಲ್ಲಿ ತೆಗೆದು ಕೊಂಡು ಹೋದರೆ ಬಾಡಿಗೆ ಹಣವೇ ಆಗುವುದಿಲ್ಲ ಎಂದು ಹೇಳುತ್ತಾರೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಗಾಗಿ ಕೆಲವು ಪುಸ್ತಕಗಳನ್ನು ಓದುತ್ತಾರೆ.ಆದರೆ ಇದು ಹವ್ಯಾಸವಾಗಿ ಮಾಡುವವರು ಬೆರಳೆಣಿಕೆ ಮಾಂದಿ ಮಾತ್ರ.ಸಾಹಿತ್ಯ ಅಭ್ಯಸಿಸುವ ವಿದ್ಯಾರ್ಥಿಗಳು ಸ್ವಲ್ಪ ಮಟ್ಟಿಗೆ ಪುಸ್ತಕ ಓದುವುದನ್ನು ಅಭ್ಯಾಸ ಮಾಡಿರುತ್ತಾರೆ.ನಮ್ಮಲ್ಲಿ ಶ್ರೇಷ್ಠ ಲೇಖಕರು,ಸಾಹಿತಿಗಳು,ಕವಿಗಳು ಬಹಳಷ್ಟು ಇದ್ದಾರೆ.ಆದರೆ ಅವರ ಕೃತಿಗಳನ್ನು ಎಷ್ಟು ಓದುಗರು ಖರೀದಿಸುತ್ತಾರೆ ಎನ್ನುವುದು ಪ್ರಶ್ನೆ .
ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿ,ನವ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್,ಫೇಸ್‌ಬುಕ್,ಇನ್‌ಸ್ಟಾಗ್ರಾಂ,ಟ್ವಿಟ್ಟರ್‌ಗಳನ್ನು ಬಳಸುವವರು,ಅದರಲ್ಲೇ ಸಮಯ ವ್ಯರ್ಥ ಮಾಡುವವರು ಇದ್ದಾರೆ.ಪೇಟೆಯಲ್ಲಿ ,ಬಸ್ಟೇಂಡಿನಲ್ಲಿ ,ರಸ್ತೆಯಲ್ಲಿ ಅಥವಾ ಸಭೆ ಸಮಾರಂಭವೇ ಇರಲಿ, ಕಿವಿಗೆ ಇಯರ್ ಫೋನ್ ತಗಲಿಸಿ ಹೋಗುವವರೇ ಇಂದು ಜಾಸ್ತಿ. ಪತ್ರಿಕೆಯನ್ನೋ,ಪುಸ್ತಕವನ್ನೋ ಓದುವವರನ್ನು ಕಾಣಲು ಸಾಧ್ಯವಿಲ್ಲ.
ಇಂದು ಸಾಹಿತ್ಯ ಕೃತಿಗಳಿಗೆ ಮಾತ್ರವಲ್ಲದೆ ದಿನ ಪತ್ರಿಕೆಗಳನ್ನು ಓದುವವರ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ.ಓದುಗರು ಇಲ್ಲದೇ ಕೆಲವು ರಾಷ್ಟ್ರೀಯ ಹಾಗೂ ಕೆಲವು ಸ್ಥಳೀಯ ಪತ್ರಿಕೆಗಳು,ಮುದ್ರಣ ಸಂಸ್ಥೆಯನ್ನು ಮುಚ್ಚಿದ್ದು ತುಂಬಾ ಇವೆ.ಇಂದು ಕೆಲವು ಪತ್ರಿಕೆಗಳು ಹಾಗೂ ಹೀಗೂ ಸಾಗುತ್ತಿದ್ದರೂ,ಪ್ರಸಾರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ.ಸುಮಾರು ಹದಿನೈದು ವರ್ಷಗಳ ಹಿಂದೆ ಮಕ್ಕಳಿಗಾಗಿಯೇ ಹಾಲವಾರು ಮಾಸ ಪತ್ರಿಕೆಗಳು,ಪಾಕ್ಷಿಕಗಳು ಪ್ರಕಟವಾಗುತ್ತಿದ್ದವು.ಇಂದು ಕೇವಲ ಒಂದೆರಡು ಮಾತ್ರ ಉಳಿದಿವೆ.ಹಿರಿಯರು ಮಾತ್ರವಲ್ಲದೆ ಮಕ್ಕಳಿಗೆ ಕೂಡ ಪುಸ್ತಕ ಓದುವಿಕೆಯಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ ಎಂದು ಇದರಿಂದ ತಿಳಿಯುತ್ತದೆ.
ಇಂದಿನ ದುಬಾರಿ ಜೀವನದಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ ಪರಿಸ್ಥಿತಿಯಲ್ಲಿ ಮಕ್ಕಳ ಕಡೆಗೆ ಗಮನ ನೀಡಲು ಸಾಧ್ಯವಾಗದೆ ಬೇಬಿ ಸಿಟ್ಟಿಂಗ್,ನರ್ಸರಿ ಮೊದಲಾದ ಕಡೆಗಳಲ್ಲಿ ಬಿಟ್ಟು ಹೋಗುತ್ತಾರೆ.ಮನೆಗೆ ತಲುಪಿದರೂ ಅಪ್ಪ ಅಮ್ಮ ತಮ್ಮ ಪಾಡಿಗೆ ಇರುತ್ತಾರೆ.
ಮಕ್ಕಳು ಫೋನ್ ಹಿಡಿದು ತನ್ನ ಕೋಣೆಯಲ್ಲಿ ಪಬ್ಜಿಯೋ ಇನ್ನೇನೊ ನೋಡುತ್ತಾ ಇರುತ್ತಾರೆ. ರಾಮಾಯಣ,ಮಹಾಭಾರತ,ಇತರ ಧಾರ್ಮಿಕ ಸಾಧು ಸಂತರ ಕಥೆ ಹೇಳಿ ಕೊಡಬೇಕಾದ ರಕ್ಷಕರು ಟಿವಿ ಧಾರಾವಾಹಿಗಳಲ್ಲಿ ಮಗ್ನರಾಗಿರುತ್ತಾರೆ.ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿ ಓದಿನೆಡೆಗೆ ಪ್ರೋತ್ಸಾಹ ನೀಡ ಬೇಕಾದುದು ಹೆತ್ತವರ ಕರ್ತವ್ಯ ಎಂದು ಸಾಹಿತಿಅಪ್ಪಯ್ಯ ಯಾದವ್ ನುಡಿಯುತ್ತಾರೆ.
ಗಟ್ಟಿ ಓದು,ಮೆಲ್ಲ ಓದು,ಮೌನ ಓದು, ಹೇಗೆಯೇ ಓದಿ ಆದರೆ ಓದನ್ನು ಬಿಡಬೇಡಿ. ಜ್ಞಾನಾರ್ಜನೆಗಾಗಿ ದೇಶ ಸುತ್ತು ಇಲ್ಲವೇ ಕೋಶ ಓದು ಎಂಬ ಮಾತಿನಂತೆ ಕಲಿಕೆಗೆ ಹೇಗೆ ವಯಸ್ಸು ಅಡ್ಡಿಯಲ್ಲವೋ ಹಾಗೆಯೇ ಓದುವಿಕೆಗೂ ವಯಸ್ಸಿನ ಅಂತವಿಲ್ಲ .
“ಓದುವ ಹವ್ಯಾಸ ಬೆಳೆಸ ಬೇಕು’
ಮಕ್ಕಳಿಗೆ ಎಳವೆಯಿಂದಲೇ ಓದುವ ಹವ್ಯಾಸ ಬೆಳೆಸ ಬೇಕು.ಮಕ್ಕಳ ಹೆತ್ತವರು,ರಕ್ಷಕರು ಮಕ್ಕಳಿಗೆ ಓದುವುದಕ್ಕೆ ಪ್ರೋತ್ಸಾಹ ನೀಡ ಬೇಕು.ಪೋಷಕರು ಕೆಲವು ಕಥೆಗಳನ್ನು,ಕವಿತೆಗಳನ್ನು ಮಕ್ಕಳಿಗೆ ಹೇಳಿ,ಪುಸ್ತಕಗಳನ್ನು ನೀಡಿದರೆ ಓದುವ ಅಭ್ಯಾಸ ಬೆಳೆಸಲು ಸಾಧ್ಯವಾಗುತ್ತದೆ ಎಂದು ತಮ್ಮ ಮನೆಯಲ್ಲೇ ಚಿಕ್ಕ ಗ್ರಂಥಾಲಯವನ್ನು ಮಾಡಿದ ರಾಧಾಕೃಷ್ಣ ಭಂಡಾರದಮನೆ ಅವರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.