ಇತಿಹಾಸದಲ್ಲಿ ಜಾಗ ಪಡೆದ ಜಿಲ್ಲೆಯ ಮತದಾರರ ಪಟ್ಟಿಯ ಏಕೈಕ ಟ್ರಾನ್ಸ್ ಜೆಂಡರ್
Team Udayavani, Apr 24, 2019, 6:19 AM IST
ಕಾಸರಗೋಡು: ಮತದಾನ ನಡೆಸುವ ಮೂಲಕ ಇಷಾ ಇತಿಹಾಸದಲ್ಲಿ ಸ್ಥಳಾವಕಾಶ ಪಡೆದಿದ್ದಾರೆ.
ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಟ್ರಾನ್ಸ್‌ಜೆಂಡರ್ ಆಗಿರುವ ಇಷಾ ಕಿಶೋರ್ ಲೋಕಸಭೆ ಚುನಾವಣೆ ಅಂಗವಾಗಿ ಕಾಂಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ 135ನೇ ನಂಬ್ರದ ಮತಗಟ್ಟೆಯಲ್ಲಿ ಐತಿಹಾಸಿಕ ಕ್ಷಣ ನಿರ್ಮಿಸಿದ್ದಾರೆ.
ಮತದಾನ ನನ್ನ ಅಧಿಕಾರ
ಮತದಾನ ನಡೆಸಿರುವ ಮೂಲಕ ನನ್ನ ಅಧಿಕಾರ, ನನ್ನ ಹಕ್ಕು ನಾನು ವಿನಿಯೋಗಿಸಿದೇªನೆ. ಈ ಮೂಲಕ ನನ್ನ ಅಸ್ತಿತ್ವ ತೋರಿದ್ದೇನೆ ಎಂದವರು ಈ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಜನತೆಯ ಸಮಸ್ಯೆ ಅರಿತುಕೊಳ್ಳಬಲ್ಲ, ನಾಡಿನ ಅಭಿವೃದ್ಧಿಗಾಗಿ ದುಡಿಯಬಲ್ಲ, ಜನತೆಯ ಸಂರಕ್ಷಣೆ ಖಚಿತಪಡಿಸಬಲ್ಲ, ಅಭ್ಯರ್ಥಿ ಸಂಸದರಾಗಿ ಗೆದ್ದುಬರಬೇಕು. ಈ ನಿಟ್ಟಿನಲ್ಲಿ ಜನತೆಯ ಮತದಾನ ಮಹತ್ವದ ಪಾತ್ರ ವಹಿಸುತ್ತದೆ ಎಂದವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅನೇಕ ಮಂದಿ ಟ್ರಾನ್ಸ್‌ಜೆಂಡರ್ ಗಳಿದ್ದರೂ, ಅವರು ಅಸ್ತಿತ್ವ ತೋರಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ.
ಸಮಾಜದ ದೃಷ್ಟಿಕೋನ ಬದಲಾಗದೆ ಇರುವುದು ಈ ನಿಟ್ಟಿನಲ್ಲಿ ಒಂದು ಹಂತದ ವರೆಗೆ ಕಾರಣವಾಗುತ್ತಿದೆ. ಹೆಚ್ಚುವರಿ ಟ್ರಾನ್ಸ್ ಜೆಂಡರ್‌ಗಳು ಮತದಾನ ನಡೆಸುವ ಮೂಲಕ ಸಮಾಜದ ದೃಷ್ಟಿಕೋನ ಬದಲಾಗುವ ಸಾಧ್ಯತೆಗಳಿವೆ ಎಂದವರು ಅಭಿಪ್ರಾಯಪಡುತ್ತಾರೆ.
ಕಾಂಞಂಗಾಡ್ ನಿವಾಸಿಯಾಗಿರುವ ಇಷಾ ಅವರು ಸ್ಥಳೀಯ ಸುದ್ದಿವಾಹಿನಿಯೊಂದರ ವಾರ್ತಾವಾಚಕಿಯಾಗಿದ್ದಾರೆ. ಮಾಡೆಲಿಂಗ್, ನೃತ್ಯ ಸಹಿತ ಕಲಾವಲಯದಲ್ಲಿ ಅವರು ಈಗಾಗಲೇ ಛಾಪು ಒತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.