ದೇಶದ ಜನರು ಬಿಜೆಪಿಯತ್ತ: ರಮೇಶ್
Team Udayavani, Mar 31, 2017, 2:02 PM IST
ಕುಂಬಳೆ: ದೇಶಾದ್ಯಂತ ಜನರು ಉಳಿದ ಪಕ್ಷಗಳನ್ನು ತಿರಸ್ಕರಿಸಿ ಬಿಜೆಪಿಯತ್ತ ಆಕರ್ಷಿಸಲ್ಪಡುತ್ತಿದ್ದಾರೆ.ಮುಂದಿನ ದಿನಗಳು ಬಿಜೆಪಿಯದ್ದಾಗಿದ್ದು ಮುಂದೆ ಕೆಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಭೂತಪೂರ್ವ ಜಯ ಗಳಿಸಲಿದೆ ಎಂದು ಪಕ್ಷದ ಕೇರಳ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ಹೇಳಿದರು.
ಕುಂಬಳೆ ಸಿಟಿ ಹಾಲ್‌ನಲ್ಲಿ ನಡೆದ ಮಂಜೇಶ್ವರ ಮಂಡಲ ಬಿಜೆಪಿ ಕಾರ್ಯಕರ್ತರ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಮೇಶ್, ಕೇಂದ್ರ ಸರಕಾರ ನರೇಂದ್ರ ಮೋದಿಯವರ ದಕ್ಷ ಆಡಳಿತವನ್ನು ದೇಶಾದ್ಯಂತ ಜನಸಾಮಾನ್ಯರ ಸಹಿತ ವಿಪಕ್ಷಗಳ ನಾಯಕರು ಕೂಡಾ ಒಪ್ಪಿರುವರು. ಇದಕ್ಕೆ ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಿರುವುದು ಸಾಕ್ಷಿಯಾಗಿದೆ. ಅಲ್ಲದೆ ಅಲ್ಪಸಂಖ್ಯಾಕರು ಕೂಡಾ ವಿಶ್ವಾಸದಿಂದ ಬಿಜೆಪಿಗೆ ಮತ ನೀಡುತ್ತಿರುವರು.
ಕೇರಳದ ಎಡ-ಬಲರಂಗಗಳು ಪ್ರಧಾನಿಯವರ ಮೇಲೆ ಸದಾ ಆರೋಪ ಹೊರಿಸುವುದರೊಂದಿಗೆ ಕೇಂದ್ರ ಸರಕಾರದ ನಿಧಿಯನ್ನು ತಮ್ಮದೆಂದು ಅಭಿವೃದ್ಧಿಗೆ ಬಳಸುತ್ತಿದೆ ಎಂಬುದಾಗಿ ಆರೋಪಿಸಿದರು.
ಎ. 20ರಿಂದ ಮೇ 20ರ ತನಕ ನಡೆಯಲಿರುವ ಕೇಂದ್ರ ಸರಕಾರದ ಜನಪರ ಆಡಳಿತೆಯನ್ನು ಮನೆ ಮನೆಗಳಿಗೆ ತಿಳಿಸುವ ಮತ್ತು ಪಕ್ಷದ ನಿಧಿ ಸಂಗ್ರಹ ಅಭಿಯಾನವನ್ನು ಕಾರ್ಯಕರ್ತರು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಮಂಡಲ ಬಿಜೆಪಿ ಸಮಿತಿ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದರು. ರಾಜ್ಯಸಮಿತಿ ಸದಸ್ಯರಾದ ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ ಮತ್ತು ಪಿ. ಸುರೇಶ್ ಕುಮಾರ್ ಶೆಟ್ಟಿ, ರಾಷ್ಟ್ರೀಯ ಪರಿಷತ್ ಸದಸ್ಯೆ ಸರೋಜಾ ಆರ್. ಬಲ್ಲಾಳ್, ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್, ಜಿಲ್ಲಾ ಉಪಾಧ್ಯಕ್ಷ ಬ್ಲಾಕ್ ಪಂ. ಸದಸ್ಯ ಎಚ್. ಸತಸ್ಯಶಂಕರ ಭಟ್, ಪ್ರಧಾನ ಕಾರ್ಯದರ್ಶಿ ವೇಲಾಯುಧನ್, ಕಾರ್ಯದರ್ಶಿ ಚಂಚಲಾಕ್ಷಿ ಕಡಪ್ಪುರ, ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ, ಜಿ.ಪಂ. ಸದಸ್ಯೆ ಪುಷ್ಪಾ ಅಮ್ಮೆಕ್ಕಳ, ಪರಿಶಿಷ್ಟ ಜಾತಿ ವರ್ಗ ಜಿಲ್ಲಾಧ್ಯಕ್ಷ ಎ.ಕೆ. ಕಯ್ನಾರ್ ಉಪಸ್ಥಿತರಿದ್ದರು. ಪಕ್ಷದ ಅಗಲಿದ ಕಾರ್ಯಕರ್ತ ಸೀತಾರಾಮ ಬಂಗೇರ ಜೋಡುಕಲ್ಲು, ರಾಜೇಶ್ ಪೂಜಾರಿ ತೋಟ ಪುತ್ತಿಗೆ, ಕಿಶನ್ ಶೆಟ್ಟಿ ಮುಗು ಪುತ್ತಿಗೆ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುರಳೀಧರ ಯಾದವ್ ಸ್ವಾಗತಿಸಿದರು.ಆದರ್ಶ್ ಬಿ.ಎಂ. ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.