ಕವಿಗೆ ಕಾಲಕ್ಕೆ ತಕ್ಕಂತೆ ಮುನ್ನಡೆಯುವ ಶಕ್ತಿಯಿದೆ: ವೆಂಕಟ್ ಭಟ್ ಎಡನೀರು
Team Udayavani, Jul 16, 2019, 5:38 AM IST
ಉಪ್ಪಳ: ಕಲೆ, ಸಾಹಿತ್ಯ ಪ್ರಕಾರಗಳು ಕಾಲಘಟ್ಟದ ಜನಜೀವನದ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ. ಕಲೆ, ಸಾಹಿತ್ಯಗಳ ಆಸಕ್ತಿಯಿಲ್ಲದವರ ಬದುಕು ಆಪ್ಯಾಯ ಮಾನವಾಗಿರಲಾರದು. ಆಸಕ್ತಿಯಿ ರುವವರು ಎಲ್ಲಿದ್ದರೂ ಸಾಹಿತ್ಯ ಸೇವೆಯ ಮೂಲಕ ಖುಷಿ ಕಾಣುವರು ಎಂದು ಪ್ರಸಿದ್ಧ ವ್ಯಂಗ್ಯಚಿತ್ರ ಕಲಾವಿದ, ಸಾಹಿತಿ ವೆಂಕಟ್ ಭಟ್ ಎಡನೀರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮತ್ತು ಪೆರ್ಲದ ಸವಿ ಹೃದಯದ ಕವಿ ಮಿತ್ರರು ಸಂಘಟನೆಗಳ ಜಂಟಿ ಆಶ್ರಯದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುಟುಕು ಸಂಭ್ರಮ-2019 ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬದುಕು ಎಣಿಸಿದಷ್ಟು ಸವ್ಯವಾಗಿ ಎಲ್ಲಾ ಸಂದರ್ಭದಲ್ಲೂ ಇರಲಾರದು. ಆದರೆ ಕವಿ-ಕಲಾವಿದ ಕಾಲಕ್ಕೆ ತಕ್ಕಂತೆ ಬದುಕನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದವನಾಗಿದ್ದು, ಸಾಮಾಜಿಕ ಕಳಕಳಿಯಲ್ಲಿ ಎಲ್ಲರೊಡನೆ ಒಂದಾಗಿ ಯೋಗಿಯಂತೆ ತ್ಯಾಗಿಯಾಗುತ್ತಾನೆ ಎಂದು ಅವರು ಈ ಸಂದರ್ಭ ತಿಳಿಸಿದರು. ಪ್ರಸ್ತುತ ವ್ಯಂಗ್ಯಚಿತ್ರಗಳ ಸ್ಥಾನವನ್ನು ಚುಟುಕು ಸಾಹಿತ್ಯ ಪ್ರಕಾರ ಆವರಿಸಿಕೊಂಡಿದೆ. ಒಂದೇ ನೊಗದ ಜೋಡಿ ಹಸುಗಳಂತೆ ವ್ಯವಸ್ಥೆಯನ್ನು ತೀಡಿ-ತಿದ್ದುವ ಉತ್ತಮ ರಚನೆಗಳು ಯುವ ಹೃದಯಗಳಲ್ಲಿ ಹುಟ್ಟಿ ಸಾರಸ್ವತ ಲೋಕಕ್ಕೆ ಕೊಡುಗೆಯಾಗಬೇಕು ಎಂದು ಕರೆ ನೀಡಿದರು. ಶಶಿಕಲಾ ಕುಂಬಳೆ, ಶ್ಯಾಮಲಾ ರವಿರಾಜ್ ಕುಂಬಳೆ, ಗೋಪಾಲಕೃಷ್ಣ ಭಟ್ ಗೋಳಿತ್ತಡ್ಕ, ಗುಣಾಜೆ ರಾಮಚಂದ್ರ ಭಟ್, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ಕೆ.ನರಸಿಂಹ ಭಟ್ ಏತಡ್ಕ, ಪುಷ್ಪಾ ಕೆ., ಅಭಿಲಾಷ್ ಪೆರ್ಲ, ರಿತೇಶ್ ಕಿರಣ್ ಕಾಟುಕುಕ್ಕೆ, ನಿರ್ಮಲಾ ಶೇಸಪ್ಪ ಖಂಡಿಗೆ,, ಮೌನೇಶ್ ಆಚಾರ್ಯ, ಜ್ಯೋತ್ಸಾ$° ಎಂ.ಕಡಂದೇಲು, ಎನ್.ಸುಬ್ರಾಯ ಭಟ್, ಕೆ.ಎಸ್.ದೇವರಾಜ್ ಆಚಾರ್ಯ ಕುಂಬಳೆ, ಜುನೈದ್ ಕೊಡಗು, ಶಾಂತಾ ಪುತ್ತೂರು, ಪ್ರಭಾವತಿ ಕೆದಿಲಾಯ ಪುಂಡೂರು, ಜಯಾನಂದ ಪೆರಾಜೆ, ಸುಶೀಲಾ ಕೆ.ಪದ್ಯಾಣ, ರಾಮ ವೈ.ಬಿ.ಏದಾರ್, ಸುರೇಖಾ ಎಳವಾರ, ಸ್ವರಚಿತ ಕವನಗಳನ್ನು ವಾಚಿಸಿದರು. ಕವಿಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ತಾರಾನಾಥ ಬೋಳಾರ್, ಪ್ರಧಾನ ಕಾರ್ಯದರ್ಶಿ ಹರೀಶ್ ಸುಲಾಯ ಒಡ್ಡಂಬೆಟ್ಟು ನಿಕಟಪೂರ್ವ ಅಧ್ಯಕ್ಷ ಇರಾ ನೇಮು ಪೂಜಾರಿ, ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ, ರವಿಶಂಕರ ಜಿ.ಕೆ.ಕೆದಂಬಾಡಿ, ಹರೀಶ್ ಪೆರ್ಲ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಉಪಸ್ಥಿತರಿದ್ದರು. ಪುರುಷೋತ್ತಮ ಭಟ್ ಕೆ.ಸ್ವಾಗತಿಸಿ, ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.
“ಸಾಹಿತ್ಯ ವಲಯವೂ ಪ್ರಭಾವಶಾಲಿ’
ಚುಟುಕು ಸಾಹಿತ್ಯ ಸಂಭ್ರಮದ ಅಂತಿಮ ಭಾಗದಲ್ಲಿ ನಡೆದ ಚುಟುಕು ಗೋಷ್ಠಿಯನ್ನು ಮಂಗಳೂರು ತಾಲೂಕು ಚುಸಾಪ ಅಧ್ಯಕ್ಷ ಡಾ| ಸುರೇಶ ನೆಗಳಗುಳಿ ಉದ್ಘಾಟಿಸಿ ಚಾಲನೆ ನೀಡಿದರು. ಅವರು ಈ ಸಂದರ್ಭ ಮಾತನಾಡಿ, ಭೌಗೋಳಿಕರಣದ ಭಾಗವಾಗಿ ಸ್ಥಿತ್ಯಂತರಗೊಳ್ಳುತ್ತಿರುವ ಇಂದು ಸಾಹಿತ್ಯ ವಲಯವೂ ಪ್ರಭಾವಶಾಲಿಯಾಗಿ ವಿವಿಧ ವಿಭಾಗ ಗಳಲ್ಲಿ ಹರಡುತ್ತಿದೆ. ಇತರ ಭಾಷೆಗಳ ಗಾಢ ಪ್ರಭಾವ ಕನ್ನಡದ ಮೇಲೂ ಉಂಟಾಗಿದ್ದು, ಬೆಳವಣಿಗೆ ಪಡೆಯುತ್ತಿರುವ ಗಝಲ್‌ಕಾವ್ಯ ಪ್ರಕಾರ ಜನಪ್ರಿಯವಾಗುತ್ತಿದೆ ಎಂದು ತಿಳಿಸಿದರು. ಸರಳ-ಸುಂದರ ರಚಿಸಲ್ಪಡುವ ಗಜಲ ಕಾವ್ಯ ಪ್ರಕಾರ ಕವಿತೆಗಳ ಆಸ್ವಾದಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದ್ದು, ಸಾಹಿತ್ಯ ಸಂಭ್ರಮ ದಂತಹ ಕಾರ್ಯಕ್ರಮಗಳಿಂದ ಕ್ರಿಯಾಶೀಲ ವಾಗಿರಲಿ ಎಂದು ಡಾ| ನೆಗಳಗುಳಿ ವರು ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.