ಕಾಸರಗೋಡಿನ ಜನತೆಯ ಹೃದಯ ಶ್ರೀಮಂತಿಕೆ ಮರೆಯಲಾಗದ್ದು
Team Udayavani, Mar 3, 2020, 6:30 AM IST
ಕಾಸರಗೋಡು: ಮನುಷ್ಯ ಹೃದಯಗಳು ಇಂದು ಒಣಗಿಹೋಗಿವೆ. ಪ್ರೀತಿ ವಿಶ್ವಾಸಗಳು ಸಿಗಬೇಕಾದರೆ ಇಂದು ಹೃದಯದ ಆಳಕ್ಕೆ ರಿಂಗ್ ಹಾಕುವಂತಹ ಸಂದರ್ಭ ಬಂದೊದಗಿದೆ. ಅಂತಹ ಸಂದರ್ಭದಲ್ಲಿ ಹೃದಯ ಶ್ರೀಮಂತಿಕೆಯಿಂದ ಕೂಡಿದ ಕಾಸರಗೋಡಿನ ಜನತೆಯ ಅಭಿನಂದನೆ ಮರೆಯಲಾಗದ ಒಂದು ಕ್ಷಣವನ್ನು ಒದಗಿಸಿಕೊಟ್ಟಿದೆ ಎಂದು ಡಾ| ಹಂಪನಾ ಅವರು ಹೇಳಿದರು.
ಚಾಲದ ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಪ್ರಾಯೋಜಕತ್ವ ದಲ್ಲಿ ಅಪೂರ್ವ ಕಲಾವಿದರು ಕಾಸರ ಗೋಡು ನೇತೃತ್ವದಲ್ಲಿ ಚಾಲದ ಕಣ್ಣೂರು ವಿಶ್ವವಿದ್ಯಾನಿಲಯ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ “ಕನ್ನಡ ಚಿಂತನೆ’ ತಿಂಗಳ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಮಾನ ಮನಸ್ಕರು, ಸಮಾನ ವಯ ಸ್ಕರು, ಸಮಾನ ವಿದ್ಯಾ ಸಂಸ್ಕಾರವುಳ್ಳಂತಹ ವರನ್ನು ಒಳಗೊಂಡಿರುವಂಥದ್ದೇ ಗೋಷ್ಠಿ. ಆ ನೆಲೆಯಿಂದಲೂ ಈ ಕಾರ್ಯಕ್ರಮ ಸಂಪನ್ನಗೊಂಡಿದೆ ಎಂದ ಅವರು ಭಿನ್ನಾಭಿ ಪ್ರಾಯ ಬಂದಾಗ ಒಂದು ಕ್ಷಣ ಅದನ್ನು ದಾಟಿ ಬಿಡಬೇಕು. ಹಾಗಾ ದಾಗ ಸಂಬಂಧ ಗಳು ಯಾವತ್ತೂ ಹೊಸತಾಗಿಯೇ ಉಳಿದುಕೊಳ್ಳುತ್ತವೆ ಎಂದರು.
ಡಾ| ಕಮಲಾ ಹಂಪನಾ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ ಕಾಸರಗೋಡಿನವರ ಪ್ರೀತಿಯ ಮುಂದೆ ಮಾತು ಹುದುಗಿ ಹೋಗಿದೆ ಎಂದ ಅವರು ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿದ್ದರೂ ನಾನದನ್ನು ಅನ್ಯವಾಗಿ ಕಂಡಿಲ್ಲ. ಕರ್ನಾಟಕದ ಭಾಗವಾಗಿಯೇ ಕಂಡಿದ್ದೇನೆ. ಇಲ್ಲಿನ ಕನ್ನಡಿಗರೂ ಹಾಗೆಯೇ ಭಾವಿಸಿಕೊಂಡಿದ್ದಾರೆ. ಇಲ್ಲಿನ ಭಾಷಾ ಸಾಮರಸ್ಯಕ್ಕೆ ಬಾಂಧವ್ಯಕ್ಕೆ ಬೆರಗಾಗಿದ್ದೇನೆ ಎಂದ ಅವರು ಹಲವು ಭಾಷೆಗಳ ಜನರು ಇಲ್ಲಿ ಪ್ರೀತಿಯಿಂದ, ಸೌಹೃದಯತೆಯಿಂದ ಒಬ್ಬರು ಮತ್ತೂಬ್ಬರನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಬದುಕುತ್ತಿದ್ದಾರೆ. ಕಾಸರಗೋಡಿಗೆ ಬಂದ ಬಳಿಕ ಡಾ| ರತ್ನಾಕರ ಮಲ್ಲಮೂಲೆಯವರು ಅವರ ಜತೆಗೆ ಇದ್ದಷ್ಟು ಹೊತ್ತೂ ಇಲ್ಲಿನ ಜನರ ಸಾಹಿತ್ಯಕ-ಸಾಂಸ್ಕೃತಿಕ ಜೀವನವನ್ನು ಸ್ಥಳೀಯ ಪರಿಚಯವನ್ನು ಮಾಡುವಾಗ ನಾನು ಬೆರಗಾದೆ. ಅವರ ಮುಂದೆ ವಿದ್ಯಾರ್ಥಿಯಾದೆ. ಇದು ನಿಮ್ಮೆಲ್ಲರ ಪ್ರತಿಬಿಂಬ. ಅವರ ವಿದ್ಯಾರ್ಥಿಗಳೂ ನಾಳೆ ಹೀಗೆಯೇ ಬೆಳೆಯಬೇಕು, ಬೆಳೆಯಬಲ್ಲರು ಎಂದ ಅವರು ಮನುಷ್ಯ ಎಷ್ಟೇ ಸಾಧನೆಯನ್ನು ಮಾಡಲಿ, ಆತ ವಿನಯವಂತನಾಗಿರಬೇಕು ಎಂಬುದನ್ನು ನುಡಿದ ಮಲ್ಲಮೂಲೆಯವರ ಮಾತಿಗೆ ಅವರ ಮನೆಯೇ ಉದಾಹರಣೆ ಎಂದರು. ಊಟದ ಸಂದರ್ಭದಲ್ಲಿ ಮನೆಯಲ್ಲಿದ್ದ ಹದಿನೈದಕ್ಕೂ ಹೆಚ್ಚು ಮಂದಿ ಆಥಿತ್ಯದಲ್ಲಿ ನಾ ಮುಂದು ತಾ ಮುಂದು ಎಂದು ಮುಂದೆ ಬರುತ್ತಿದ್ದ ಸಂದರ್ಭವಂತೂ ನನಗೆ ಭರತೇಶ ವೈಭವದ ಅಡುಗೆ ಮನೆ ಸೌಂದರ್ಯ ಸೊಗಸನ್ನು ನೆನಪಿಸಿತು ಎಂದು ಭಾವುಕರಾಗಿ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.