ರೇಶನ್ ಅಕ್ಕಿಯನ್ನು ರಾಜ್ಯ ಸರಕಾರ ಬಡವರಿಗೆ ನೀಡದೆ ವಂಚಿಸಿದೆ’
Team Udayavani, Feb 24, 2017, 11:54 AM IST
ಕುಂಬಳೆ: ಕೇಂದ್ರ ಸರಕಾರ ನೀಡಿದ ರೇಶನ್ ಅಕ್ಕಿಯನ್ನು ರಾಜ್ಯ ಸರಕಾರ ಬಡವರಿಗೆ ವಿತರಿಸದೆ ಗೋಡಾನಿನಲ್ಲಿರಿಸಿ ವಂಚಿಸುತ್ತಿದೆ. ಕೇಂದ್ರ ಸರಕಾರ ಅಕ್ಕಿ ನೀಡಿಲ್ಲವೆಂಬುದಾಗಿ ಎಡರಂಗ ಸರಕಾರ ವೃಥಾ ಆರೋಪಿಸುತ್ತಿದೆ ಎಂಬುದಾಗಿ ಭಾರತೀಯ ಯುವಮೋರ್ಚಾ ಜಿಲ್ಲಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಆರೋಪಿಸಿದರು.
ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಕುಂಜತ್ತೂರಿನಲ್ಲಿ ನಡೆದ ಕೇಂದ್ರ ಸರಕಾರ ನೀಡಿದ ಅಕ್ಕಿ ಎಲ್ಲಿ ಸಿಎಂ? ಎಂಬ ಎಂಬ ಪ್ರಶ್ನೆಯೊಂದಿಗೆ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿ ರಾಜ್ಯ ಸರಕಾರ ಜನಪರ ಆಡಳಿತೆಯನ್ನು ಮರೆತು ಹಿಂಸಾ ರಾಜಕೀಯದಲ್ಲಿ ನಿರತವಾಗಿರುವುದಾಗಿ ಆರೋಪಿಸಿದರು. ತಾರಾನಾಥ ಹೊಸಂಗಡಿ ಅಧ್ಯಕ್ಷತೆ ವಹಿಸಿದರು.ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿಎಂ ಕೇರಳದಲ್ಲಿ ಎಡರಂಗ ಮತ್ತು ಐಕ್ಯರಂಗಗಳು ಹೊಂದಾಣಿಕೆಯ ರಾಜಕೀಯದಲ್ಲಿ ನಿರತವಾಗಿದೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ರಾಜ್ಯ ಸರಕಾರ ತಮ್ಮದೆಂದು ಬಿಂಬಿಸಿ ಜನರನ್ನು ವಂಚಿಸುವುದಾಗಿ ಆರೋಪಿಸಿದರು.ಪಕ್ಷದ ನಾಯಕರಾದ ಹರಿಶ್ಚಂದ್ರ ಮಂಜೇಶ್ವರ,ಪದ್ಮನಾಭ ಕಡಪ್ಪುರ,ಯಾದವ ಬಡಾಜೆ ಭಾಗವಹಿಸಿ ಮಾತನಾಡಿದರು.ಚಂದ್ರಹಾಸ ಸುವರ್ಣ ಸ್ವಾಗತಿಸಿದರು. ಬಾಬು ಮಾಸ್ಟರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.