ಸಂವಿಧಾನ ಮೌಲ್ಯ ಸಂರಕ್ಷಕರೇ ನಿಜವಾದ ದೇಶಭಕ್ತರು: ಚಂದ್ರಶೇಖರನ್
Team Udayavani, Jan 27, 2019, 12:50 AM IST
ಕಾಸರಗೋಡು: ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸುವವರೇ ನಿಜವಾದ ದೇಶಭಕ್ತರು ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು.
ಗಣರಾಜ್ಯೋತ್ಸವ ಅಂಗವಾಗಿ ಶನಿವಾರ ವಿದ್ಯಾನಗರದ ನಗರಸಭೆ ಕ್ರೀಡಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಿ, ಪಥಸಂಚಲನದ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮೊಂದಿಗೆ ಸ್ವಾತಂತ್ರ್ಯ ಪಡೆದ ಅನೇಕ ದೇಶಗಳು ಆಡಳಿತದಲ್ಲಿ ಪರಾಜಯ ಗೊಂಡಿದೆ. ಆದರೆ ಭಾರತ ಪ್ರಜಾಪ್ರಭುತ್ವ ನೀತಿಯ ಸದ್ಬಳಕೆ ಮತ್ತು ಸಂವಿಧಾನ ಮೌಲ್ಯ ಗಳ ಅನುಷ್ಠಾನದಿಂದ ಸಫಲವಾಗಿದೆ ಎಂದವರು ಹೇಳಿದರು.
ಸಂವಿಧಾನದ ಮೌಲ್ಯಗಳನ್ನು ದುರ್ಬಲ ಗೊಳಿಸಲು ಯತ್ನ ನಡೆಸಲು ಕೆಲವು ಶಕ್ತಿ ಗಳು ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದು ಅದನ್ನು ವಿರೋಧಿಸಿ, ಯಾವುದೇ ಬೆಲೆತೆತ್ತು ಮೌಲ್ಯ ಗಳನ್ನು ಸಂರಕ್ಷಿಸಲು ನಾವು ಕಟಿಬದ್ಧರು. ದೇಶಪ್ರೇಮಿಗಳಾದ ಯುವಜನತೆ ಮತ್ತು ವಿದ್ಯಾರ್ಥಿಗಳು ಇದರ ನೇತೃತ್ವ ವಹಿಸಬೇಕು ಎಂದು ಅವರು ಆಗ್ರಹಿಸಿದರು. ಸುಕ್ಷೇಮ ರಾಷ್ಟ್ರ ನಿರ್ಮಾಣದ ಕನಸು ನನಸು ಮಾಡುವಲ್ಲಿ ನಮ್ಮ ಯತ್ನದ ಪ್ರಯಾಣವನ್ನು ತ್ವರಿತಗೊಳಿಸಬೇಕಾದ ಅಗತ್ಯವಿದೆ. ವಿಭಜನೆ ಮತ್ತು ಅವೈಜ್ಞಾನಿಕ ಕುರುಡುತನವನ್ನು ಬದಲಿಸಿ ಪ್ರಗತಿಪರ ಚಿಂತನೆ ಮತ್ತು ತಂತ್ರಜ್ಞಾನ ವನ್ನು ಅಭಿವೃದ್ಧಿಗಿರುವ ಇಂಧನವನ್ನಾಗಿ ಬೆಳಕಿನತ್ತ ಸಾಗಬೇಕಾದ ಅಗತ್ಯವಿದೆ ಎಂದವರು ಹೇಳಿದರು.
ರಾಜ್ಯ ಅನುಭವಿಸಿದ ಅತೀ ಭೀಕರ ಜಲ ದುರಂತದ ವೇಳೆ ಕೋಮು ಭಾವನೆಗೂ ಮೀರಿ ಪ್ರಕಟಗೊಂಡ ಮಾನವೀಯತೆ ಸಾಮಾಜಿಕ ಬದ್ಧತೆಯ ಸಂಕೇತವಾಗಿದೆ. ತಂತ್ರಜ್ಞಾನವನ್ನು ನಾಡಿನ ಪ್ರಗತಿಗಾಗಿ ಬಳಸಿದ ಯುವಜನತೆ ದೇಶಕ್ಕೆ ನಿರೀಕ್ಷೆಯನ್ನು ಮೂಡಿಸಿದೆ ಎಂದರು.
ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ಬಾಬು, ಪೊಲೀಸ್ ವರಿಷ್ಠಾಧಿಕಾರಿ ಡಾ|ಎಸ್.ಶ್ರೀನಿ ವಾಸ್ ವಂದನೆ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!
Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.