ದೇವರ ಸಾನ್ನಿಧ್ಯಕ್ಕೆ ಕ್ಷಯವಿಲ್ಲ: ವಿದ್ವಾನ್‌ ಹಿರಣ್ಯ ಭಟ್‌


Team Udayavani, Apr 4, 2019, 6:30 AM IST

devarasanidya

ಕುಂಬಳೆ: ಒಂದು ಗ್ರಾಮ, ಊರು, ಮಾಗಣೆಯಲ್ಲಿ ಪ್ರಧಾನವಾದ ಮೂರು ಆಲಯಗಳಿರಬೇಕು. ದೇವಾಲಯ, ವಿದ್ಯಾಲಯ ಮತ್ತು ಔಷಧಾಲಯಗಳು. ಉತ್ತಮ ಸಮಾಜಕ್ಕೆ ಅಗತ್ಯ ಈ ಮೂರೂ ಆಲಯಗಳಿಲ್ಲದಲ್ಲಿ ಬದುಕಲೇ ಬಾರದು ಎಂದು ಶಾಸ್ತ್ರ ಹೇಳುತ್ತದೆ ಎಂದು ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್‌ ಹೇಳಿದರು.

ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮತ್ತು ಉಳ್ಳಾಕ್ಲು, ಧೂಮಾ ವತಿ, ರಕ್ತೇಶ್ವರಿ ದೆ„ವಸಾನ್ನಿಧ್ಯಗಳ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಥಮ ದಿನ ದಂದು ಜರಗಿದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.

ದೇವಾಲಯದಲ್ಲಿ ಆರಾಧನೆ ನಿಲ್ಲುವುದು ದೊಡ್ಡ ದೋಷ. ಆದರೆ ಭಗವಂತನ ಸಾನ್ನಿಧ್ಯವು ಎಂದಿಗೂ ಕ್ಷಯವಾಗುವುದಿಲ್ಲ, ಭಜಕರಿಗೆ ದೊರಕುವ ಅನುಗ್ರಹ ಮಾತ್ರ ಕಡಿಮೆಯಾಗುತ್ತದೆ. ದೇಹದ ಚಟುವಟಿಕೆಗೆ ಜೀರ್ಣವಾಗುವುದು ಅಗತ್ಯ. ಆದರೆ ದೇವಾಲಯಗಳು ಜೀರ್ಣವಾಗಬಾರದು. ಆಚಾರ್ಯರ ತಪಸ್ಸು, ಆಮ್ನಾಯ ಜಪ, ಉತ್ಸವ, ಅನ್ನದಾನ ಮತ್ತು ನಿಯಮಗಳ ಅನುಸರಣೆ ಇವುಗಳು ಕ್ಷೇತ್ರದ ಅಭಿವೃದ್ಧಿಗೆ ಕಾರಣಗಳು. ಇವುಗಳನ್ನು ಅನುಸರಿಸುವುದು ನಾವು ದೇವರ ಅನುಗ್ರಹಕ್ಕೆ ಪಾತ್ರರಾಗಲು ಅರ್ಹರು ಎಂಬುದನ್ನು ತೋರಿಸಿಕೊಡುತ್ತದೆ ಎಂದು ಅವರು ಹೇಳಿದರು.

ಶ್ರೀ ಕ್ಷೇತ್ರ ಮಲ್ಲದ ಧರ್ಮ ದರ್ಶಿ ಆನೆಮಜಲು ವಿಷ್ಣು ಭಟ್ಟರು ಅಧ್ಯಕ್ಷತೆ ವಹಿಸಿದರು. ಭಗವದ್ಗೀತೆಯಲ್ಲಿ ವಿಶ್ವಮಾನವತಾ ವಾದದ ಕುರಿತಾಗಿ ಸುಗುಣಾ ಬಾಲಕೃಷ್ಣ ತಂತ್ರಿಯವರು ಬರೆದ “ಅಶೋಚ್ಯಾನ್‌ ಅನ್ವಶೋಚಸ್ತ$Ìಮ್‌ ಪುಸ್ತಕವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು. ಪುತ್ತಿಗೆ ಗ್ರಾಮ ಪಂಚಾಯತ್‌ ಸದಸ್ಯರಾದ ವರಪ್ರಸಾದ್‌ ಪೆರ್ಣೆ, ಚಂದ್ರ ಎಂ, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಎಚ್‌. ಶಿವರಾಮ ಭಟ್‌ ಶುಭಾಶಂಸನೆಗೆ„ದರು. ಬ್ರಹ್ಮ ಕಲಶೋತ್ಸವ ಸಮಿತಿಯ ಪದಾಧಿಕಾರಿ ಗಳಾದ ಬಿ. ವಸಂತ ಪೈ ಬದಿಯಡ್ಕ, ಡಿ. ಕೃಷ್ಣ ಭಟ್ಟ ದೊಡ್ಡಮಾಣಿ ಮತ್ತು ಪ್ರವೀಣ ದೊಡ್ಡಮಾಣಿ ಉಪಸ್ಥಿತರಿದ್ದರು.

ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ್‌ ಕೆ.ಎಚ್‌. ಸ್ವಾಗತಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿಯ ಜತೆ ಕಾರ್ಯ ದರ್ಶಿ ಸೂರ್ಯನಾರಾಯಣ ಹೊಸಮನೆ ವಂದಿಸಿದರು. ನೀನಾಸಂ ಕಲಾವಿದ ಮಂಜುನಾಥ ಹೊಸಮನೆ ನಿರೂಪಿಸಿದರು.

ಬ್ರಹ್ಮಕಲಶೋತ್ಸವದ ದ್ವಿತೀಯ ದಿನವಾದ ಬುಧವಾರ ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ವಿವಿಧ ಭಜನೆ ತಂಡಗಳಿಂದ ಭಜನೆ, ಭಕ್ತಿಗಾನ ಸುಧಾ, ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.

ಅಪರಾಹ್ನ ಯಕ್ಷಭಾರತಿ ನೀರ್ಚಾಲು ಇವರಿಂದ “ಸುಧನ್ವ ಮೋಕ್ಷ’ ಯಕ್ಷಗಾನ ತಾಳಮದ್ಧಳೆ, ಸಂಜೆ ಭಜನೆ, ಹರಿದಾಸ ಶ್ರೀ ಜಯಾನಂದ ಕುಮಾರ್‌ ಹೊಸದುರ್ಗ ಇವರಿಂದ ಮಹಾರಥಿ ಕರ್ಣ ಹರಿಕಥೆ, ರಾತ್ರಿ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ ನಡೆಯಿತು. ಸಂಜೆ ಕುಂಡ ಶುದ್ಧಿ, ಅಂಕುರ ಪೂಜೆಯ ಬಳಿಕ ರಾತ್ರಿ ಪೂಜೆ ಜರಗಿತು.

ಇಂದಿನ ಕಾರ್ಯಕ್ರಮ
ಎ. 4ರಂದು ಬೆಳಗ್ಗೆ 6.30ರಿಂದ ವೈದಿಕ ಕಾರ್ಯಕ್ರಮಗಳು, 8ರಿಂದ 10.30ರ ತನಕ ವಿವಿಧ ಭಜನಾ ತಂಡಗಳಿಂದ ಭಜನೆ, 10.30ರಿಂದ ರೂಪಾ ಕನಕಪ್ಪಾಡಿ ಅವರಿಂದ ಸಂಗೀತ ಕಛೇರಿ. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ರಿಂದ ಭಜನೆ, ವೈದಿಕ ಕಾರ್ಯಕ್ರಮಗಳು, ಸಂಜೆ 6.30ರಿಂದ ವಿಭಾಶ್ರೀ ಬೆಳ್ಳಾರೆ ಅವರಿಂದ ಸಂಗೀತ ಕಛೇರಿ, ರಾತ್ರಿ 8ರಿಂದ ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ ಅವರ ಶಿಷ್ಯರಿಂದ ನೃತ್ಯಸಂಭ್ರಮ ಕಾರ್ಯಕ್ರಮಗಳು ಜರಗಲಿವೆೆ.

ಟಾಪ್ ನ್ಯೂಸ್

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

MS Dhoni Sends ‘shocking’ Message To Chennai Super Kings

IPL 2025: ಸಿಎಸ್‌ ಕೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಎಂ.ಎಸ್.ಧೋನಿ

9

Actor Suriya: ತಾಯಿ ಮಾಡಿದ 25 ಸಾವಿರ ರೂ. ಸಾಲ ತೀರಿಸಲು ಸಿನಿಮಾ ರಂಗಕ್ಕೆ ಬಂದ ಸೂರ್ಯ

ಕಾನೂನು ಸಮರದಲ್ಲಿ ಪವಾರ್‌ ಗೆ ಕೈ ಕೊಟ್ಟ “ಗಡಿಯಾರ”, ಸುಪ್ರೀಂನಲ್ಲಿ ಅಜಿತ್‌ ಬಣಕ್ಕೆ ಮೇಲುಗೈ

ಕಾನೂನು ಸಮರದಲ್ಲಿ ಪವಾರ್‌ ಗೆ ಕೈ ಕೊಟ್ಟ “ಗಡಿಯಾರ”, ಸುಪ್ರೀಂನಲ್ಲಿ ಅಜಿತ್‌ ಬಣಕ್ಕೆ ಮೇಲುಗೈ

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

INDvsNZ: New Zealand caught in Washington’s spin web; All out for 259 run

INDvsNZ:  ವಾಷಿಂಗ್ಟನ್‌ ಸ್ಪಿನ್‌ ಜಾಲಕ್ಕೆ ಸಿಲುಕಿದ ಕಿವೀಸ್‌; 259 ರನ್‌ ಗೆ ಆಲೌಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

8

KSRTC ನಿಲ್ದಾಣ-ಲಾಲ್‌ಭಾಗ್‌ ರಸ್ತೆ ಫುಟ್‌ಪಾತ್‌ ಇಲ್ಲದೆ ಪಾದಚಾರಿಗಳ ಪರದಾಟ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

MS Dhoni Sends ‘shocking’ Message To Chennai Super Kings

IPL 2025: ಸಿಎಸ್‌ ಕೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಎಂ.ಎಸ್.ಧೋನಿ

7

Thekkatte: ಹೆದ್ದಾರಿ ಹೊಡೆತದಿಂದ ತೆಕ್ಕಟ್ಟೆ ಕನ್ನಡ ಶಾಲೆ ಉಳಿಸಿ

9

Actor Suriya: ತಾಯಿ ಮಾಡಿದ 25 ಸಾವಿರ ರೂ. ಸಾಲ ತೀರಿಸಲು ಸಿನಿಮಾ ರಂಗಕ್ಕೆ ಬಂದ ಸೂರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.