ತಿರುವನಂತಪುರ-ಕಾಸರಗೋಡು ಸೆಮಿ ಹೈಸ್ಪೀಡ್ ಟ್ರೈನ್ ; 6,000 ಮನೆಗಳ ತೆರವು
Team Udayavani, Dec 20, 2019, 5:00 AM IST
ಕಾಸರಗೋಡು: ಕೇಂದ್ರ ರೈಲ್ವೇ ಸಚಿವಾಲಯ ಅನುಮತಿ ನೀಡಿದ ತಿರುವನಂತಪುರ – ಕಾಸರಗೋಡು ಸೆಮಿ ಹೈಸ್ಪೀಡ್ ಟ್ರೈನ್ ಯೋಜನೆಯನ್ನು ಸಾಕಾರ ಗೊಳಿಸಲು ಸುಮಾರು 6000 ಮನೆ ಗಳನ್ನು ತೆರವುಗೊಳಿಸಬೇಕಾಗಿ ಬರಲಿದೆ. ಜನವಾಸ ಕಡಿಮೆ ಇರುವ ಪ್ರದೇಶದಲ್ಲಿ ರೈಲು ಹಳಿ ಹಾದುಹೋಗುವುದಿದ್ದರೂ, ಇಷ್ಟು ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕಾಗಿ ಬರಲಿದೆ.
ಹಲವು ವರ್ಷಗಳಿಂದ ಎದುರು ನೋಡುತ್ತಿದ್ದ ಈ ಯೋಜನೆಯಲ್ಲಿ 12 ಕಿಲೋ ಮೀಟರ್ ಮೇಲ್ಸೇತುವೆ ಮತ್ತು ಎರಡೂವರೆ ಕಿಲೋ ಮೀಟರ್ ನೀಳಕ್ಕೆ ಸುರಂಗವನ್ನೂ ನಿರ್ಮಿಸಬೇಕಾಗಿ ಬರಲಿದೆ. ಸುಮಾರು 50 ಸಾವಿರ ಮಂದಿಗೆ ಉದ್ಯೋಗ ಲಭಿಸುವ ಸಾಧ್ಯತೆಯಿದ್ದು, ವಿಶ್ವ ಮಟ್ಟದ ರೈಲು ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಈ ಮೂಲಕ ಉಪಗ್ರಹಗಳೊಂದಿಗೆ ಸಂಪರ್ಕವನ್ನು ಹೊಂದಿರುವ ನಗರಗಳೂ ಸೃಷ್ಟಿಯಾಗಲಿವೆ. ರೈಲು ಹಳಿಗೆ ಇಕ್ಕಡೆಗಳಲ್ಲಿ ಸರ್ವಿಸ್ ರಸ್ತೆಗಳು ನಿರ್ಮಾಣವಾಗಲಿರುವುದರಿಂದ ಕೆಲವು ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಲಿವೆ.
ಸುಮಾರು ಐದು ವರ್ಷಗಳಲ್ಲಿ ಪೂರ್ತಿಯಾಗಲಿರುವ ಈ ಮಹತ್ವದ ಯೋಜನೆಗೆ 7720 ಕೋಟಿ ರೂ. ಅನುದಾನ ನೀಡಲು ಮತ್ತು ತಾಂತ್ರಿಕ ನೆರವು ನೀಡುವುದಾಗಿ ರೈಲ್ವೇ ಇಲಾಖೆ ಭರವಸೆ ನೀಡಿದೆ. ಈ ಯೋಜನೆ ಸಾಕಾರಗೊಳಿಸಲು ಕೇಂದ್ರ ರೈಲ್ವೇ ಇಲಾಖೆ ಶೇ.49 ಮತ್ತು ರಾಜ್ಯ ಸರಕಾರ ಶೇ.51 ಹೂಡಿಕೆಯಲ್ಲಿ ರೈಲ್ವೇ ಅಭಿವೃದ್ಧಿ ನಿಗಮ (ಕೆ.ಆರ್.ಡಿ.ಸಿ.ಎಲ್) ಜವಾಬ್ದಾರಿ ವಹಿಸಿಕೊಳ್ಳಲಿದೆ.ಹೈದರಾಬಾದ್‌ನ ಜಿಯೋನೋ ಎಂಬ ಸಂಸ್ಥೆ ಸರ್ವೆ ನಡೆಸಲಿದೆ. ಕೇವಲ ಒಂದು ವಾರದಲ್ಲಿ ಸರ್ವೆ ಪೂರ್ತಿಗೊಳಿಸಲಾಗವುದು. ಐದು ಕೇಂದ್ರಗಳಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಬೇಕಾಗುತ್ತದೆ. ಲೈಟ್ ಡಿಟೆಕ್ಷನ್ ಆ್ಯಂಡ್ ರೇಂಜಿಂಗ್(ಲೀಡಾರ್) ಎಂಬ ತಾಂತ್ರಿಕತೆಯನ್ನು ಬಳಸಿ ಹೆಲಿಕಾಪ್ಟರ್‌ನಲ್ಲಿ ಘಟಿಸಿದ ಲೇಸರ್ ಸ್ಕಾÂನರ್‌ಗಳೂ, ಸೆನ್ಸಾರ್‌ಗಳೂ ಬಳಸಿ ಸರ್ವೆ ನಡೆಯಲಿದೆ.
ಸರ್ವೆಗಾಗಿ ಗ್ರೌಂಡ್ ಪಾಯಿಂಟ್‌ಗಳನ್ನೂ, ಸೆಂಟರ್‌ಗಳನ್ನೂ ಈ ಹಿಂದೆಯೇ ಗುರುತಿಸಲಾಗಿತ್ತು. ಸರ್ವೆ ನಡೆಸಿದ ಬಳಿಕ ಅಲೈನ್‌ಮೆಂಟ್ ಪರಿಶೋಧಿಸಿ ತೀರ್ಮಾನ ತೆಗೆದುಕೊಂಡ ಅನಂತರ ಸರಕಾರದ ಅಂಗೀಕಾರದೊಂದಿಗೆ ಇಕ್ಕೆಡೆಗಳಲ್ಲಿ ಗಡಿಗಳನ್ನು ಗುರುತಿಸಲಾಗುವುದು.
ಸರ್ವೆಗೆ ಹೆಲಿಕಾಪ್ಟರ್
ಕಾಸರಗೋಡು-ತಿರುವನಂತಪುರ ಸೆಮಿ ಹೈಸ್ಪೀಡ್ ರೈಲು ಹಳಿಯಾಗಿರುವ “ಸಿಲ್ವರ್ ಲೈನ್’ಗಾಗಿ ಹೆಲಿಕಾಪ್ಟರ್ ಬಳಸಿ ಸರ್ವೆ ಡಿಸೆಂಬರ ತಿಂಗಳಾಂತ್ಯದಲ್ಲಿ ನಡೆಯ ಲಿದೆ. ಹೆಲ್ಲಿಕಾಪ್ಟರ್‌ನ ಪರಿಶೋ ಧನೆ ಡಿ.20 ರಂದು ದೆಹಲಿಯಲ್ಲಿ ನಡೆಯಲಿದೆ. ರಕ್ಷಣಾ ಸಚಿವಾಲಯದ ಮತ್ತು ನಾಗರಿಕ ವ್ಯೋಮಯಾನ ಡೈರೆಕ್ಟರೇಟ್‌ನ ಅಧಿಕಾರಿಗಳು ಹೆಲಿಕಾಪ್ಟರ್‌ನ ಪರಿಶೋಧನೆ ನಡೆಸುವರು. ಆ ಬಳಿಕವಷ್ಟೇ ಹೆಲಿಕಾಪ್ಟರ್‌ನ್ನು ಕೇರಳಕ್ಕೆ ಕಳುಹಿಸಿಕೊಡಲಾಗುವುದು. ನಂತರ ಆಗಸದಲ್ಲಿ ಸರ್ವೆ ನಡೆಯುವುದು. ಇದಕ್ಕಾಗಿ ಈಗಾಗಲೇ ರಕ್ಷಣಾ ಸಚಿವಾಲಯದ ಮತ್ತು ನಾಗರಿಕ ವ್ಯೋಮಯಾನ ಡೈರೆಕ್ಟರೇಟ್‌ನ ಅನುಮತಿಯು ಯೋಜನೆ ಜಾರಿಗೊಳಿಸುವ ಕೇರಳ ರೈಲ್ವೇ ಅಭಿವೃದ್ಧಿ ಕಾರ್ಪೊರೇಶನ್ ಲಿಮಿಟೆಡ್(ಕೆಆರ್‌ಡಿಸಿಎಲ್)ಗೆ ಕಳೆದ ಅಕ್ಟೋಬರ್ ತಿಂಗಳಲ್ಲೇ ಲಭಿಸಿದೆ. ಆದರೆ ದಿಲ್ಲಿಯಲ್ಲಿ ಹವಾಮಾನ ಹಾಗೂ ತಾಂತ್ರಿಕ ಅಡಚಣೆಯಿಂದಾಗಿ ಮುಂದಿನ ಪ್ರಕ್ರಿಯೆ ವಿಳಂಬವಾಗಲು ಕಾರಣವಾಯಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.