97 ವರ್ಷಗಳ ಹಿಂದಿನ ಬಂಡಿ ಮಾಣಿ ಕೂರುವ ಆಚರಣೆ ಈ ಬಾರಿ ಆರಂಭ


Team Udayavani, Apr 26, 2018, 7:20 AM IST

25ksde4.jpg

ಉಪ್ಪಳ: ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಕ್ಷಕ ದೈವ ಶ್ರೀ ಮಲರಾಯ ಸನ್ನಿಧಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಇಂದಿನಿಂದ (ಎ.26) ಆರಂಭಗೊಳ್ಳಲಿದೆ.

ಐದು ದಿನಗಳ ಕಾಲ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಬಂಡಿಮಾರು ಜಾತ್ರೆ ವಿಶೇಷವಾಗಿದ್ದು, ನಡು ಬಂಡಿಉತ್ಸವ ಆಕರ್ಷಣೀಯವಾಗಿರುತ್ತದೆ. ಈ ಬಾರಿಯ ಬಂಡಿ ಉತ್ಸವದಲ್ಲಿ ಮಾನ್ಯಂತಾಯರು ಬಂಡಿ ಮೇಲೆ ಆಸೀನರಾಗಲಿದ್ದು, ನೂರು ವರ್ಷ ಹಿಂದಿನ ಆಚರಣೆಯನ್ನು ಪುನ: ಆರಂಭಿಸಲು ಕಾರಣರಾಗಲಿದ್ದಾರೆ. ಸುಮಾರು ಒಂದು ಶತಮಾನದ ಹಿಂದೆ ಚಾಲ್ತಿಯಲ್ಲಿದ್ದ ಆಚರಣೆಯೊಂದು ಪುನ: ಆರಂಭವಾಗುವ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ಹೊಸ ಚೈತನ್ಯ ಶಕ್ತಿ ಜಾಗೃತ ವಾಗುವುದರೊಂದಿಗೆ ಆಸ್ಮಿತೆಯನ್ನು ಕಂಡುಕೊಳ್ಳಲು ಕಾರಣವಾಗಿದೆ. ಪ್ರತಿ ವರ್ಷ ಬಾಯಾರು ಜಾತ್ರೆಯು ತುಳು ಮಾಸಪಗ್ಗು(ಮೇಷ)ದ ಹನ್ನೆಡನೇ ದಿನ ಆರಂಭವಾಗುತ್ತದೆ. 

ಕೊಡಿಯೇರಿದ ನಂತರ ನಾಲ್ಕು ದಿನಗಳ ಪರ್ಯಂತ ನಡೆಯುವ ಜಾತ್ರೋತ್ಸವದಲ್ಲಿ ದೈವಾರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಬಾಯಾರು ಶ್ರೀ ಪಂಚಲಿಂಗೇಶ್ವರ ಸನ್ನಿ ಧಿಯ ಸನಿಹದಲ್ಲಿರುವ ಮಲರಾಯ ದೈವದ ಗುಡಿ ಮತ್ತು ವಿಶಾಲವಾದ ಪ್ರದೇಶದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವಿದು.

ರಾಜಂದೈವ ಮಲರಾಯ ದೈವವು ಕ್ಷೇತ್ರದ ರಕ್ಷಕ ಎನ್ನುವ ನಂಬುಗೆಯು ಜನಜನಿತವಾಗಿದ್ದು, ಪಾಡªನಗಳಲ್ಲಿ ದೈವ ಆಗಮನದ ಹಿನ್ನೆಲೆ ಮತ್ತು ಕ್ಷೇತ್ರರಕ್ಷಕನಾದ ಪರಿಯನ್ನು ಹೇಳಲಾಗುತ್ತದೆ. ಮಲರಾಯ ದೈವದ ಜೊತೆಯಲ್ಲಿರುವ ಉಪದೈವಗಳಿಗೂ ವಾರ್ಷಿಕ ಜಾತ್ರೋತ್ಸವದ ಸಂದರ್ಭ ಕೋಲ ನೀಡುವುದು ವಾಡಿಕೆ. ಜಾತ್ರೋತ್ಸವದ ಕೊನೆ ದಿನದಂದು ನಡೆಯುವ ಬಾಯಾರು ಬಂಡಿ ಇಲ್ಲಿನ ವಿಶೇಷತೆಗಳಲ್ಲೊಂದು. ಕೃಷಿ  ಸಹಜೀವನದೊಂದಿಗೆ ಜಾನಪದ ವೈದಿಕ ಆಚರಣೆಗಳ ಸಂಗಮವನ್ನು ಆಚರಣೆತೋರ್ಪಡಿಸುತ್ತದೆ.

ಮಾನ್ಯಂತಾಯರು ನಿರ್ಣಯ 
ಹಲವು ವರ್ಷಗಳ ಹಿಂದೆ ನಿಂತು ಹೋಗಿದ್ದ ಬಂಡಿ ಮೇಲೆ ಕುಳಿತುಕೊಳ್ಳುವ ಅನುವಂಶಿಕ ಗೌರವವನ್ನು ಪುನ: ಪಡೆದುಕೊಂಡು ಮುಂದುವರಿಸಲು ಸಿದ್ಧರಾದವರು ಬಾಯಾರು ಶ್ರೀ ಪಂಚಲಿಂಗೇಶ್ವರ ಮತ್ತು ಮಲರಾಯ ದೈವಂಗಳ ಗುರಿಕಾರರಾದ ಸುದೆಂಬಳ ಮನೆತನದ ಮಾನ್ಯಂತಾಯ ಶ್ರೀನಿವಾಸ ಭಟ್ಟರು. ಬಂಡಿಯಲ್ಲಿ ಕೂರುವವನ ದೇಹ, ಮನಸ್ಸಿನ ಜೊತೆಯಲ್ಲಿ ಆತ್ಮಶುದ್ಧಿಯು ಇರಬೇಕು. 

ಶತಮಾನಗಳ ಹಿಂದಿನ ಆಚರಣೆಯನ್ನು ಮುಂದುವರಿಸುವ ದೊಡ್ಡ ಜವಾಬ್ದಾರಿ ತನ್ನ ಮೇಲಿದೆ. ದೈವಜ್ಞ ಚಿಂತನೆಯಲ್ಲಿ ಕಂಡು ಬಂದಂತೆ, ಕುಟುಂಬ ವರ್ಗದವರ ಆಶಯ ಮತ್ತು ದೈವದ ದೇವಸ್ಥಾನದ ಸಮಿತಿ, ಸಮಾಜದ ಕಳಕಳಿಯ ವಿನಂತಿಯ ಮೇರೆಗೆ ಈ ಜವಾಬ್ದಾರಿ ಮತ್ತುಗೌರವವನ್ನು ತಾನು ಸ್ವೀಕರಿಸುತ್ತಿರುವುದುದಾಗಿ ಮಾನ್ಯಂತಾಯ ಶ್ರೀನಿವಾಸ ಭಟ್ಟರು ಹೇಳಿದ್ದಾರೆ.

ಸುದೆಂಬಳ ಮನೆತನದವರು ಮಾನ್ಯಂತಾಯರು 
ಆಡು ಭಾಷೆಯಲ್ಲಿ ಮಾಣಿಎಂದು ಕರೆಸಿಕೊಂಡು, ದೈವ  ಭಾಷೆಯಲ್ಲಿ ತೇಜಿ ಎಂದು ಕರೆಸಿಕೊಳ್ಳುವ ಮಾನ್ಯಂತಾಯರು 97 ವರ್ಷಗಳ ನಂತರ ಮೊದಲ ಬಾರಿಗೆ ಬಂಡಿಯ ಮೇಲೆ ಕುಳಿತುಕೊಳ್ಳುವ ಮೂಲಕ ವಿಶೇಷ ಗೌರವಕ್ಕೆ ಭಾಜನರಾಗಲಿದ್ದಾರೆ. ಈ ಬಾರಿಯ ಬಂಡಿಮಾರು ಜಾತ್ರಾ ಮಹೋತ್ಸವದಲ್ಲಿ ಶತಮಾನ ಹಿಂದಿನ ವಿಶೇಷ ಆಚರಣೆಯು ಪುನರಾರಂಭಗೊಳ್ಳಲಿದ್ದು ಸುದೆಂಬಳ ಮಾನ್ಯಂತಾಯ ಶ್ರೀನಿವಾಸ ಭಟ್ಟರು ವಿಶೇಷ ಗೌರವ ಸ್ವೀಕರಿಸಲಿದ್ದಾರೆ. ಮಾನ್ಯಂತಾಯ ಎಂದರೆ ಮಾನ್ಯತೆ ಉಳ್ಳವ ಎಂದೂ, ತೇಜಿ ಎಂದರೆ ಗೌರವ ಉಳ್ಳವ ಎಂದರ್ಥ. 

1921 ರಲ್ಲಿ ತಮ್ಮ ಪೂರ್ವಜರಾದ ಸುದೆಂಬಳ ಕೃಷ್ಣ ಭಟ್ಟರು ಈ ಗೌರವಕ್ಕೆ ಭಾಜನರಾದ ಕೊನೆಯವರು. ಅನಂತರ ಆಚರಣೆ ನಿಂತಿತು ಎಂದು ಮಾನ್ಯಂತಾಯ ಶ್ರೀನಿವಾಸ ಭಟ್ಟರು ಹೇಳುತ್ತಾರೆ.

ಬಹಳ ಹಿಂದೆ ಮಲರಾಯ ದೈವದ ಭಂಡಾರ ಸಹಿತ ಉತ್ಸವಾದಿಗಳನ್ನು ನಡೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಸುದೆಂಬಳ ಮನೆಯವರಿಗಿತ್ತು. ಸುದೆಂಬಳ ಮನೆಯಲ್ಲೂ ಮಲರಾಯ ದೈವ‌ದ ದೈವಸ್ಥಾನ ಮತ್ತು ಮೂಲಸ್ಥಾನವಿದ್ದು, ಪರ್ವ ದಿನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ಸಹಿತ ತಂಬಿಲ ಸೇವೆಗಳು ನಡೆಯುತ್ತವೆ. ಬಾಯಾರು ಶ್ರೀ ಪಂಚಲಿಂಗೇಶ್ವರ ದೇವರು ಮತ್ತು ದೈವಸ್ಥಾನಕ್ಕೆ ಒಟ್ಟು 36 ಮಂದಿ ಗುರಿಕ್ಕಾರರಿದ್ದು ಎಲ್ಲರ ಸಮ್ಮುಖದಲ್ಲಿ ಕ್ಷೇತ್ರದ ಕಾರ್ಯಚಟುವಟಿಕೆಗಳು ಮುಂದುವರಿಯುತ್ತಿವೆ. ಬಹಳ ಹಿಂದಿನಿಂದಲೂ ವಿಟ್ಲ ಮಾಗಣೆಯ ಭಾಗವಾಗಿದ್ದ ಬಾಯಾರು ದೇವಸ್ಥಾನ ಮತ್ತು ದೈವಸ್ಥಾನವು ಬಾಯಾರು ಗ್ರಾಮಕ್ಕೆ ಒಳಪಟ್ಟಿದ್ದು ಒಟ್ಟು ಆರು ಉಪಗ್ರಾಮಗಳಿವೆ. ಹಳೆ ದಾಖಲೆಗಳಲ್ಲಿ ಬಾಯಾರು ಕಸಬಾ ಎಂದು ಉಲ್ಲೇಖೀಸಲ್ಪಟ್ಟಿದೆ.

ಜೌಷಧೋಪಚಾರದಲ್ಲಿ ಸಿದ್ಧ ಹಸ್ತರು  ವಿಟ್ಲ ಅರಸರ ಆಸ್ಥಾನ ವೈದ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದ ಸುದೆಂಬಳ ಮನೆತನದ ಮಾನ್ಯಂತಾಯರು ಆಯುರ್ವೆದ ಜೌಷದೋಪಚಾರದಲ್ಲೂ ಎತ್ತಿದ ಕೈ. ಹಾವು ಕಚ್ಚಿ ಸತ್ತನೆಂದು ಕಬರಸ್ಥಾನಕ್ಕೆ ಕರೆದೊಯ್ಯುತ್ತಿದ್ದ ಮಾಪಿಳ್ಳ ಸಮುದಾ ಯದ ಯುವಕನನ್ನು ಬದುಕಿಸಿದ ಓರ್ವ ಮಾನ್ಯಂತಾಯರ ಕೀರ್ತಿ ಜನಜಿನಿತವಾಗಿವೆ. ಇದೇ ಕಾರಣಕ್ಕೆ ಸುದೆಂಬಳ ಮನೆತನದ ವೈದ್ಯರಿಗೆ ಮಾಪಿಳ್ಳ ಸಮುದಾಯದ ವ್ಯಕ್ತಿ ಯೋರ್ವ ವಿಟ್ಲ ಮಾಗಣೆಗೆ ಮಾನ್ಯಂತಾಯರು ಬರುವ ಸಂದರ್ಭ ತಂಗಲು ಅನುಕೂಲವಾಗುವಂತೆ ಚಾವಡಿಯ‌ು° ಕಟ್ಟಿಸಿದ್ದ ಎನ್ನಲಾಗಿದೆ.

ಇಂದಿನಿಂದ ಬಾಯಾರು ಜಾತ್ರೆ
ಬಾಯಾರು ಜಾತ್ರೆ ‌ ಎ.26 ರಿಂದ ಆರಂಭವಾಗಲಿದೆ. 26 ರಂದು ರಾತ್ರಿ ಭಂಡಾರ ಇಳಿದು ಧ್ವಜಾರೋಹಣ ನಡೆಯಲಿದೆ. 27 ರಂದು ಕೊಟ್ಯದಾಯನ, 28 ರಂದು ಅಪರಾಹ್ನ 4 ಗಂಟೆಗೆ ಅಯ್ಯರ ಬಂಟ ನೇಮ ಮತ್ತು ಪ್ರಥಮ ಬಂಡಿ ಉತ್ಸವ. 29 ರಂದು ಆದಿತ್ಯವಾರ ಮಲರಾಯ ನೇಮ ನಡು ಬಂಡಿಉತ್ಸವ ನಡೆಯಲಿದ್ದು, ಎ.30 ರಂದು ಅಪರಾಹ್ನ ಪಿಲಿಚಾಮುಂಡಿ ನೇಮ, ಕಡೇ ಬಂಡಿಉತ್ಸವ, ವಾಲಸರಿ ಧ್ವಜಾರೋಹಣ ಏರ್ಪಡಲಿದೆ. ಎ.30 ರಂದು ನಡೆಯುವ ಕಡೇ ಬಂಡಿ ಉತ್ಸವದಲ್ಲಿ ಮಾನ್ಯಂತಾಯರು 97 ವರ್ಷಗಳ ನಂತರ ಬಂಡಿಏರಲಿದ್ದು, ಇತಿಹಾಸ ಮರುಕಳಿಸಲಿದೆ. ಮೇ 2 ರಂದು ಬಂಡಿಮಾರು ಕೊರತಿ ಗುಳಿಗ ನೇಮ ನಡೆಯಲಿದೆ.

ಎ.29 ರಂದು ಸಂಜೆ 5.30 ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಯುವ ವಾಗ್ಮಿ ಕುಮಾರಿ ಅಕ್ಷತಾ ಬಜ್ಪೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕ್ಯಾಂಪ್ಕೋ ನಿರ್ದೇಶಕ ಬಾನೊಟ್ಟು ಬಾಲಕೃಷ್ಣ ರೈ  ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. 930 ರಂದು ಸಾಯಂಕಾಲ 5.30 ಕ್ಕೆ ವೈಷ್ಣವಿ ನಾಟ್ಯ ನಿಲಯ ಪುತ್ತೂರು ಇವರಿಂದ ಭರತನಾಟ್ಯ. ರಾತ್ರಿ 10.30 ಕ್ಕೆ ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ಪನಿಯರೆ ಆವಂದಿನ ನಾಟಕ ಪ್ರದರ್ಶನಗೊಳ್ಳಲಿದೆ. 28 ರಂದು ರಾತ್ರಿ 8 ಗಂಟೆಗೆ ಶ್ರೀ ಕೃಷ್ಣ ಲೀಲಾಮೃತಂ ಯಕ್ಷಗಾನ, 29 ರಂದುರಾತ್ರಿ 8 ಗಂಟೆಗೆ ನೃತ್ಯ ಪ್ರದರ್ಶನ ಏರ್ಪಡಲಿದೆ.

ಪ್ರತಿಷ್ಠೆಯ ಸಂಕೇತ; ರಾಜಮರ್ಯಾದೆ
ನಮ್ಮ ಹಿರಿಯರು ಬಾಯಾರು ಬಂಡಿಯ ಮೇಲೆ ಕೂರುತ್ತಿದ್ದರು. ಅದು ಒಂದು ಗೌರವ ಮತ್ತು ಪ್ರತಿಷ್ಠೆಯ ಸಂಕೇತದೊಂದಿಗೆ ರಾಜಮರ್ಯಾದೆಯು ಹೌದು. ಬಾಯಾರು ಬಂಡಿಮಾರು ಜಾತ್ರೆಯು ಗ್ರಾಮೀಣಧಾರ್ಮಿಕ ಸಂಸ್ಕೃತಿಯಲ್ಲಿ ಜಾತಿ ಮತ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ದೈವ ಶಕ್ತಿಯ ಆಶೀರ್ವಾದವನ್ನು ಪಡೆದು ಆನಂದಿಸಿ ಸಂಭ್ರಮಿಸುವ ಮಹೋತ್ಸವವಿದು.

– ಸುದೆಂಬಳ ಶ್ರೀನಿವಾಸ ಭಟ್‌

ಟಾಪ್ ನ್ಯೂಸ್

5-bantwala

Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?

Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?

IPL 2025: My preference is a team that gives freedom: KL Rahul

IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್‌.ರಾಹುಲ್‌

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ

Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ

ಬಾಬಾ ಸಿದ್ದೀಕಿ ಸಾವು ದೃಢೀಕರಿಸಲು ಆಸ್ಪತ್ರೆ ಬಳಿ 30 ನಿಮಿಷ ಕಾದು ಕುಳಿತಿದ್ದ ಶೂಟರ್

Mumbai: ಬಾಬಾ ಸಿದ್ದೀಕಿ ಸಾವು ದೃಢೀಕರಿಸಲು ಆಸ್ಪತ್ರೆ ಬಳಿ 30 ನಿಮಿಷ ಕಾದು ಕುಳಿತಿದ್ದ ಹಂತಕ

INDvsSA: Arshadeep Singh breaks Bhuvneshwar Kumar’s T20I record

INDvsSA: ಭುವನೇಶ್ವರ್‌ ಕುಮಾರ್‌ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್‌ ಸಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

POlice

Kumbla: ಪ್ರಾಣ ಲೆಕ್ಕಿಸದೆ ಹೊಳೆಗೆ ಹಾರಿ ಆರೋಪಿಯನ್ನು ಬಂಧಿಸಿದ ಪೊಲೀಸರು

MUST WATCH

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

ಹೊಸ ಸೇರ್ಪಡೆ

5-bantwala

Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?

Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?

IPL 2025: My preference is a team that gives freedom: KL Rahul

IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್‌.ರಾಹುಲ್‌

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

ಮಂತ್ರಾಲಯ ಶ್ರೀಗಳಿಂದ ತುಂಗಭದ್ರ ನದಿಯಲ್ಲಿ ದಂಡೋದಕ ಸ್ನಾನ

Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.