ದೋಣಿ ಮಗುಚಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಶವ ಬೇಕಲ್ ಕೋಟೆ ಬಳಿ ಪತ್ತೆ
Team Udayavani, Jul 5, 2021, 9:44 AM IST
ಕಾಸರಗೋಡು: ಕಾಸರಗೋಡು ತಳಂಗರೆ ಸಮೀಪದ ಕಸಬಾ ಕಡಪ್ಪುರ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ರವಿವಾರ ಬೆಳಗ್ಗೆ ಮಗುಚಿ ಬಿದ್ದ ಘಟನೆಯಲ್ಲಿ ನಾಪತ್ತೆಯಾಗಿದ್ದ ಮೂವರ ಶವ ಇಂದು ಪತ್ತೆಯಾಗಿದೆ.
ನಾಪತ್ತೆಯಾಗಿದ್ದ ಕಡಪ್ಪುರ ನಿವಾಸಿಗಳಾದ ಸಂದೀಪ್ (33 ವ), ರತೀಶನ್ (30 ವ) ಮತ್ತು ಕಾರ್ತಿಕ್ (29 ವ) ಅವರ ಶವ ಬೇಕಲ ಕೋಟೆಯ ಪತ್ತೆಯಾಗಿದೆ.
ಇದನ್ನೂಓದಿ:ಹೆಂಡತಿಯಾಗಿದ್ದವಳು ಮಲತಾಯಿಯಾಗಿ ಬಂದಾಗ…! ಬದೌನ್ ನಲ್ಲಿ ನಡೆದ ಪ್ರಸಂಗ
ರವಿವಾರ ಬೆಳಗ್ಗೆ ಕಾಸರಗೋಡು ಕಸಬಾ ಕಡಪ್ಪುರದಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿ ಅಳಿವೆ ಬಾಗಿಲಿನಲ್ಲಿ ಮಗುಚಿ ಬಿದ್ದಿತ್ತು. ಈ ವೇಳೆ ಮೂವರು ನಾಪತ್ತೆಯಾಗಿದ್ದರೆ, ನಾಲ್ವರು ಈಜಿ ದಡ ಸೇರಿ ಅಪಾಯದಿಂದ ಪಾರಾಗಿದ್ದರು.
ಸಮುದ್ರದಲ್ಲಿ ಪ್ರಬಲವಾದ ಗಾಳಿ ಬೀಸಿದ್ದರಿಂದ ನಿಯಂತ್ರಣ ತಪ್ಪಿದ ದೋಣಿಯು ಮಗುಚಿ ಬಿದ್ದಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.