ಬೆಳವಣಿಗೆ ಜತೆ ಕಾಲದ ಹೆಜ್ಜೆಗಾರಿಕೆ ದಾಖಲಿಸುವ ಮ್ಯಾಗಸಿನ್
Team Udayavani, Mar 11, 2019, 1:00 AM IST
ವಿದ್ಯಾನಗರ: ಮಾಯಿಂಡಡಿ ಎಂಬುದು ಗಡಿನಾಡು ಕಾಸರಗೋಡಿನ ವಿದ್ಯಾನಗರ ಎಂಬ ಪ್ರದೇಶದ ಮೂಲನಾಮ.ಇಲ್ಲಿ ಸರಕಾರಿ ಕಾಲೇಜು ಎಂಬ ಮಹತ್ವದ ವಿದ್ಯಾಸಂಸ್ಥೆ ಸ್ಥಾಪನೆಗೊಳ್ಳುವ ಮುನ್ನ ಮಾವಿನಮರಗಳೇ ಅಧಿಕವಾಗಿದ್ದ ಪ್ರದೇಶಕ್ಕೆ ಈ ಹೆಸರಿತ್ತು. ಇಂದಿಗೂ ಇಲ್ಲಿ ಅಧಿಕವಾಗಿ ಕಂಡುಬರುವ ಫಲಭರಿತ ಮಾವಿನ ಮರಗಳು ಇದಕ್ಕೆ ಸಾಕ್ಷಿನುಡಿಯುತ್ತವೆ.
ವಿದ್ಯಾನಗರದ ಸರಕಾರಿ ಅಂಧರ ವಿದ್ಯಾಲಯ 69 ವರ್ಷ ದಾಟುತ್ತಿರುವ ಸಂದರ್ಭದಲ್ಲಿ ಶಾಲೆಯ ಇತಿಹಾಸವನ್ನು ತಿಳಿಸುವ ಸಂದರ್ಭದಲ್ಲಿ ಸಾಗಿ ಬಂದಿರುವ ಕಾಲದ ಹೆಜ್ಜೆ ಗುರುತುಗಳನ್ನೂ ದಾಖಲಿಸುವ ಪ್ರಯತ್ನವನ್ನು “ಅಂತರ್ ದೃಷ್ಟಿ’ ಯೊಂದಿಗೆ ಕಾಲದ ಗತಿಯನ್ನು ಗಮನಿಸುವವರ ಶಾಲೆಯ ಶಿಕ್ಷಕರೊಬ್ಬರು (ಇವರಿಗೆ ದೃಷ್ಟಿ ಬಲವಿದೆ(ಇವರು ಅಂಧರಲ್ಲ) ನಡೆಸಿರುವುದು ಸ್ತುತ್ಯರ್ಹವಾಗಿದೆ.ಶಾಲೆಯ ಆರಂಭ ಹಂತದ ಚಟುವಟಿಕೆಗಳು, ಹಿರಿಯ ಶಿಕ್ಷಕರೊಂದಿಗೆ ನಡೆಸಲಾದ ಸಂವಾದಗಳು, ಅಂಗವಿಕಲರಿಗಿರುವ ಕಾನೂನು ರೀತ್ಯಾ ಸಂರಕ್ಷಣೆಗಳು, ಶಿಕ್ಷಣ ವಲಯದಲ್ಲಿ ಇವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರಗಳು, ವಿದ್ಯಾರ್ಥಿಗಳ ಸಾಹಿತ್ಯ ರಚನೆಗಳು ಇತ್ಯಾದಿಗಳು ಈ ಮ್ಯಾಗಸಿನ್‌ನ ಪ್ರಧಾನ ಭೂಮಿಕೆಗಳಾಗಿವೆ.ವಿದ್ಯಾರ್ಥಿಗಳೂ, ಶಿಕ್ಷಕರೂ ಸೇರಿ 7 ಮಂದಿಯ ಸಂಪಾದಕೀಯ ಮಂಡಳಿ ಈ ಮ್ಯಾಗಸಿನ್‌ಗಾಗಿ ದುಡಿಮೆ ನಡೆಸಿದೆ. 1950ರಲ್ಲಿ ಕಾಸರಗೋಡು ರೈಲು ನಿಲ್ದಾಣ ಬಳಿಯ ಬಾಡಿಗೆ ಕಟ್ಟಡದಲ್ಲಿ ಸರಕಾರಿ ಅಂಧರ ಶಾಲೆ ಚಟುವಟಿಕೆ ಆರಂಭಿಸಿತ್ತು. 1964ರಲ್ಲಿ ವಿದ್ಯಾನಗರದಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು.
ರಾಜ್ಯದಲ್ಲೇ ಎರಡನೇ ಅಂಧರ ಶಿಕ್ಷಣಾಲಯ ಎಂಬ ವಿಶೇಷತೆಗೂ ಈ ಸಂಸ್ಥೆ ಪಾತ್ರವಾಗಿದೆ. ಏಕಾಧ್ಯಾಪಕ ಶಾಲೆಯಾಗಿ ಆರಂಭಗೊಂಡಿದ್ದರೂ, ಈಗ 12 ಮಂದಿ ಶಿಕ್ಷಕರು ಇಲ್ಲಿ ಅಧ್ಯಾಪನ ನಡೆಸುತ್ತಾರೆ. ಒಂದರಿಂದ 7 ನೇ ತರಗತಿ ವರೆಗೆ 14 ಮಂದಿ ಮಕ್ಕಳು ಇಲ್ಲಿ ಕಲಿಕೆಯಲ್ಲಿದ್ದಾರೆ. ಜೊತೆಗೆ ಶಿಕ್ಷಕರಾದ ಎಂ.ಪಿ.ಅಬೂಬಕ್ಕರ್, ನಾರಾಯಣನ್, ಉಮೇಶನ್ ಈ ಶಾಲೆಯ ವಿದ್ಯಾರ್ಥಿಗಳಾಗಿದ್ದವರೇ. ಈ ವರೆಗೆ 40 ಮಂದಿ ಇಲ್ಲಿ ಶಿಕ್ಷಣ ಪೂರೈಸಿ ತೆರಳಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಸರಕಾರಿ ನೌಕರಿಯಲ್ಲಿದ್ದಾರೆ.
ಎಂಡೋಸಲಾ #ನ್ ಸಂತ್ರಸ್ತರ ಹೋರಾಟಗಾರಮೂನೀಸಾ, ಕಲೋತ್ಸವಗಳಲ್ಲಿ ಮಿಂಚುತ್ತಿರುವ ಪ್ರತಿಭೆಗಳಾದ ಜೀವನ್ ರಾಜ್, ಕೃಷ್ಣ ಪ್ರಿಯ ಕೂಡ ಈ ಶಾಲೆಯ ವಿದ್ಯಾರ್ಥಿ ಗಳಾಗಿದ್ದವರೇ. ಪಾಲಾ^ಟ್‌ನ ಮೂಲ ನಿವಾಸಿ, ಈ ಶಾಲೆಯ ಶಿಕ್ಷಕ ಎಂ.ರಾಜೇಶ್ ಈ ಮ್ಯಾಗಸಿನ್ ಪ್ರಕಟಿಸಿದ್ದಾರೆ. ಈ ಕೃತಿ ಪ್ರಕಟಿಸುವ ಮುನ್ನವೇ ವಿಭಿನ್ನವಾದ ಹೆಸರು ಇರಿಸಬೇಕು ಎಂಬ ಉತ್ಕಟ ಆಕಾಂಕ್ಷೆ ತಿಂಗಳುಗಟ್ಟಲೆ ತಲೆಕೆಡಿಸುವಂತೆ ಮಾಡಿತ್ತು ಎಂದು ರಾಜೇಶ್ ಮಾಸ್ಟರ್ ತಿಳಿಸಿದ್ದಾ ಈ ಮಂಥನದಲ್ಲಿ ಉದಿಸಿ ಬಂದ ಹೆಸರೇ “ಚುಂಡಪ್ಪ್’. ಮಾ.29ರಂದು ಈ ಮ್ಯಾಗಸಿನ್ ಬಿಡುಗಡೆಯಾಗಲಿದೆ.
ರಾಜ್ಯ ಮಟ್ಟದ ಅಂಗವಿಕಲರ ಕಲೋತ್ಸವಗಳಲ್ಲಿ ಸತತ 4 ಬಾರಿ ಸವಾಂìಗೀಣ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆ ಈ ವಿದ್ಯಾಲಯದ್ದು. ಶಿಕ್ಷಣಾಲಯಗಳಲ್ಲಿ ಸಂಗೀತ, ಕ್ರಾಫ್ಟ್, ವಾದನ ಉಪಕರಣ ಇತ್ಯಾದಿ ತರಬೇತಿಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.