ಇಂದು ಮತದಾರರು ಮತಗಟ್ಟೆಗೆ: ಜಿಲ್ಲೆಯಲ್ಲಿ ಸಕಲ ಸಿದ್ಧತೆ
Team Udayavani, Apr 23, 2019, 6:30 AM IST
ಕಾಸರಗೋಡು: ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಪೂರ್ಣಗೊಂಡಿದ್ದು, ಎ. 23ರಂದು ಮತದಾನ ನಡೆಯಲಿದೆ. ಕಾಸರಗೋಡು ಲೋಕಸಭೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 13,63,937 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅವಕಾಶ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,317 ಮತಗಟ್ಟೆಗಳಿದ್ದು, ಇದರಲ್ಲಿ 43 ಮತಗಟ್ಟೆಗಳು ಅತೀ ಸೂಕ್ಷ್ಮ ಸಂವೇದಿ ಮತಗಟ್ಟೆಗಳಾಗಿವೆ.
ಅಂಗವಿಕಲರಿಗೆ ವೀಲ್‌ಚೇರ್
ಮತದಾನಕ್ಕೆ ಆಗಮಿಸುವ ಅಂಗವಿಕಲರಿಗೆ ಹಾಗೂ ವಯೋವೃದ್ಧರಿಗೆ ಸೌಕರ್ಯ ಒದಗಿಸುವ ಸಲುವಾಗಿ ಮತಗಟ್ಟೆಗಳಿಗೆ ವೀಲ್ ಚೇರ್‌ಗಳನ್ನು ನೀಡಲಾಗಿದೆ. ಮಾತ್ರವಲ್ಲದೆ ರ್‍ಯಾಂಪ್ ಸೌಲಭ್ಯವನ್ನು ಏರ್ಪಡಿಸಲಾಗಿದೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರಿರುವ ಕ್ಷೇತ್ರ ಮಂಜೇಶ್ವರ. ಇಲ್ಲಿ ಒಟ್ಟು 2,12,108 ಮತದಾರರಿದ್ದಾರೆ, ಇದೇ ವೇಳೆ ಅತೀ ಕಡಿಮೆ ಮತದಾರರಿರುವ ವಿಧಾನಸಭಾ ಕ್ಷೇತ್ರ ಕಲ್ಯಾಶೆÏàರಿ. ಇಲ್ಲಿ ಒಟ್ಟು 1,75,316 ಮತದಾರರಿದ್ದಾರೆ.
ಪ್ರಿಸೈಡಿಂಗ್ ಆಫೀಸರ್, ಪ್ರಥಮ, ದ್ವಿತೀಯ, ತೃತೀಯ ಪೋಲಿಂಗ್ ಆಫೀಸರು ಗಳು ಸೇರಿದಂತೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 3,872 ಮಂದಿ ಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಆಹಾರ, ನೀರು
ಚುನಾವಣ ಕರ್ತವ್ಯಕ್ಕಿರುವ ಸಿಬಂದಿಗೆ ಕುಡಿಯುವ ನೀರು, ಆಹಾರ ವಿತರಣೆ ಇತ್ಯಾದಿಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಸಾಮಗ್ರಿ ಒದಗಿಸುವ ವೇಳೆ ಅವರಿಗೆ ಸುಮಾರು 20 ಲೀಟರ್‌ನಷ್ಟು ಕುಡಿಯುವ ನೀರಿನ ಬಾಟಲಿಯನ್ನು ವಿತರಿಸಲಾಗಿದೆ. ವೆಬ್‌ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣೆಯ ದಿನದಂದು ಜಿಲ್ಲೆಯಲ್ಲಿ ಮೈಕ್ರೋ ಅಬ್ಸರ್ವರ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ವೀಡಿಯೋ ಕೆಮರಾಗಳನ್ನು ಅಳವಡಿಸಲಾಗಿದೆ.
ಮತದಾನ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ನಿಷೇಧ
ಪ್ರಿಸೈಡಿಂಗ್ ಆಫೀಸರ್, ಸುರಕ್ಷಾ ಅಧಿಕಾರಿಗಳಿಗೆ ಮಾತ್ರ ಮತದಾನ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಬಳಸಲು ಅನುಮತಿ ಇದೆ. ಇವರನ್ನು ಹೊರತುಪಡಿಸಿ ಬೇರೆ ಯಾರೂ ಮೊಬೈಲ್ ಬಳಸಲು ಅನುಮತಿ ಇಲ್ಲ. ಅಲ್ಲದೆ ಮತದಾನದಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತದಾರರನ್ನು ಮತದಾನ ಕೇಂದ್ರಗಳಿಗೆ ವಾಹನಗಳಲ್ಲಿ ಕರೆತರಲು ಅನುಮತಿ ಇಲ್ಲ.
ಗ್ರಾಮೀಣ ಪ್ರದೇಶದಲ್ಲಿ 200 ಮೀಟರ್ ದೂರದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ 100 ಮೀಟರ್ ದೂರದಲ್ಲಿ ಮಾತ್ರ ರಾಜಕೀಯ ಪಕ್ಷಗಳ ತಾತ್ಕಾಲಿಕ ಕೇಂದ್ರ ಸ್ಥಾಪಿಸಬಹುದಾಗಿದೆ. ಇಂತಹ ಕೇಂದ್ರ ಅಥವಾ ಬೂತ್‌ಗಳಲ್ಲಿ ಇಬ್ಬರು ಕುಳಿತುಕೊಳ್ಳಬಹುದು.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 682 ಕೇಂದ್ರಗಳಲ್ಲಾಗಿ 1,317 ಮತಗಟ್ಟೆಗಳಿವೆ. ಸೂಕ್ಷ್ಮ ಸಂವೇದಿ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯ ಬಗ್ಗೆ ನಿಗಾಯಿರಿಸಲು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಸಿದ್ಧಪಡಿಸಲಾಗಿದೆ. ಜಿಲ್ಲಾಧಿಕಾರಿ ಡಾ| ಸಜಿತ್ ಬಾಬು ನೇತೃತ್ವದ ತಂಡ ಕಂಟ್ರೋಲ್ ರೂಂನಿಂದ ವೆಬ್‌ಕಾಸ್ಟಿಂಗ್ ಮುಖಾಂತರ ಸೂಕ್ಷ¾ ಸಂವೇದಿ ಮತಗಟ್ಟೆಗಳ ಪ್ರಕ್ರಿಯೆಯನ್ನು ನಿರೀಕ್ಷಿಸುವರು.
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 2,12,108, ಕಾಸರಗೋಡು -1,93,016, ಉದುಮ-2,03,810, ಕಾಂಞಂಗಾಡ್-2,09,572, ತೃಕ್ಕರಿಪುರ – 1,94,025, ಪಯ್ಯನ್ನೂರು – 1,76,090, ಕಲ್ಯಾಶೆÏàರಿ-1,76,090 ಮತದಾರರಿದ್ದಾರೆ. ಈ ಪೈಕಿ 7,04,482 ಮಹಿಳಾ ಮತದಾರರು. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಾಸರಗೋಡು ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ನೇತೃತ್ವದಲ್ಲಿ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ. 682 ಮತಗಟ್ಟೆ ಕೇಂದ್ರಗಳಲ್ಲಿ ಪೊಲೀಸರನ್ನು ನೇಮಿಸಲಾಗಿದೆ.
ಅಲ್ಲದೆ ಬೂತ್‌ಗಳಲ್ಲೂ ಬಿಗು ಪೊಲೀಸ್ ವ್ಯವಸ್ಥೆಗೊಳಿಸಲಾಗಿದೆ. ಪೊಲೀಸ್ ಪೆಟ್ರೋಲಿಂಗ್ ತಂಡವೂ ಕಾರ್ಯಾಚರಿಸಲಿದೆ.
ಇಂದು ಖಾಸಗಿ ವಲಯಕ್ಕೆ ರಜೆ
ಮತದಾನದ ನಿಮಿತ್ತ ಎ. 23ರಂದು ಖಾಸಗಿ ವಲಯದ ಕಾರ್ಮಿಕರಿಗೆ ಮತ ಚಲಾಯಿಸುವ ಸಲುವಾಗಿ ವೇತನ ಸಹಿತ ರಜೆ ಘೋಷಿಸಿ ರಾಜ್ಯ ಲೇಬರ್ ಇಲಾಖೆಯ ಆದೇಶ ಹೊರಡಿಸಿದೆ. 1960ರ ಕೇರಳ ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಶ್‌ಮೆಂಟ್ ಆ್ಯಕ್ಟ್ ವ್ಯಾಪ್ತಿಯಲ್ಲಿರುವ ಸಂಸ್ಥೆಗಳ ಮಾಲಕರು ತಮ್ಮ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು. ಈ ಆದೇಶ ಉಲ್ಲಂಘಿಸಿದಲ್ಲಿ ಅಂತಹ ಮಾಲಕರ ವಿರುದ್ಧ ಕಠಿನ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ರಾಜ್ಯ ಲೇಬರ್ ಆಫೀಸರ್‌ಗಳಿಗೆ ಇಲಾಖೆಯ ರಾಜ್ಯ ಕಮಿಷನರ್ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.