ಜೂ. 30: “ಮಲಬಾರ್‌ ರಿವರ್‌ ಕ್ರೂಸ್‌’ ಯೋಜನೆ ಉದ್ಘಾಟನೆ


Team Udayavani, Jun 21, 2018, 6:35 AM IST

20ksde3.jpg

ಕಾಸರಗೋಡು: ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳ ಏಳು ನದಿಗಳನ್ನು ಸಂಯೋಜಿಸಿಕೊಂಡು ನದಿಗಳ ಮತ್ತು ಹಿನ್ನೀರುಗಳ ಮೂಲಕ ವಿಹಾರ ನೌಕಾಯಾನ ಪ್ರವಾಸೋದ್ಯಮ (ರಿವರ್‌ ಕ್ರೂಸ್‌ ಟೂರಿಸಂ) ರೂಪಿಸಲಾಗಿದ್ದು, ಜೂ. 30 ರಂದು ಪರಶ್ಶಿನಕಡವಿನಲ್ಲಿ ಮುಖ್ಯಮಂತ್ರಿ ಉದ್ಘಾಟಿಸುವರು.

ಮಲಬಾರ್‌ ರಿವರ್‌ ಕ್ರೂಸ್‌ ಟೂರಿಸಂ ಯೋಜನೆಯು ಜಾರಿಯಾಗುವುದ ರೊಂದಿಗೆ ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ವಲಯದಲ್ಲಿ ಮತ್ತೂಂದು ಸಾಧನೆಯಾಗಲಿದೆ. ಜಿಲ್ಲೆಯ ಚಂದ್ರಗಿರಿ ನದಿಯಿಂದ ಆರಂಭಿಸಿ ಕವಾಯಿ ನದಿ ತನಕ ಕಾರ್ಯಗತಗೊಳಿಸುವ ನೂತನ ಯೋಜನೆಗಳು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಾಗಿವೆ.

ಎಲ್ಲೆಲ್ಲಿ ಏನೇನು?
ಜಿಲ್ಲೆಯಲ್ಲಿ  ಹರಿಯುವ ಚಂದ್ರಗಿರಿ ನದಿಯಲ್ಲಿ  ಯಕ್ಷಗಾನ ಕ್ರೂಸ್‌ನಿಂದ ಆರಂಭಿಸಿ ಪೆರುಂಬಾ ನದಿಯಲ್ಲಿ  ಮ್ಯೂಸಿಕ್‌ ಕ್ರೂಸ್‌, ಕವಾಯಿ ಹಾಗೂ ವಲಿಯಪರಂಬ ಹಿನ್ನೀರುಗಳಲ್ಲಿ  ಹ್ಯಾಂಡೂÉಮ್‌ ಆ್ಯಂಡ್‌ ಹ್ಯಾಂಡಿಕ್ರಾಫ್ಟ್‌  ಕ್ರೂಸ್‌, ತೇಜಸ್ವಿನಿ ನದಿ ಯಲ್ಲಿ  ವಾಟರ್‌ ನ್ಪೋರ್ಟ್ಸ್ ಆ್ಯಂಡ್‌ ರಿವರ್‌ ಬಾತಿಂಗ್‌ ಕ್ರೂಸ್‌, ವಲಯಪರಂಬ ಹಿನ್ನೀರಿನಲ್ಲಿ  ಮಾದರಿ ರೆಸ್ಪಾನ್ಸಿಬಲ್‌ ಗ್ರಾಮ ಎಂಬ ಯೋಜನೆಗಳನ್ನು  ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಉತ್ತರ ಕೇರಳ ಅಭಿವೃದ್ಧಿ ಗುರಿ
ಮಲಬಾರ್‌ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ  ಸಮಗ್ರ ಅಭಿವೃದ್ಧಿಯ ಉದ್ದೇಶ ದೊಂದಿಗೆ ಕೇರಳ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯು ಅನುಷ್ಠಾನಕ್ಕೆ ತರುವ ಮಲಬಾರ್‌ ರಿವರ್‌ ಕ್ರೂಸ್‌ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಯೋಜನೆಯು ಜಾರಿಯಾಗುವುದರೊಂದಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ  ಉತ್ತರ ಕೇರಳ ಅಭಿವೃದ್ಧಿ ಹೊಂದಲಿದೆ.

ಮಲೆನಾಡು ಮಲಬಾರ್‌ ಕ್ರೂಸ್‌ ಪ್ರವಾಸೋದ್ಯಮ ಯೋಜನೆಯು ಪ್ರವಾಸೋದ್ಯಮ ವಲಯದಲ್ಲಿ  ವಿಭಿನ್ನವಾದ ಟೂರಿಸಂ ಬ್ರಾÂಂಡ್‌ ಆಗಲಿದೆ. ಪರಿಸರ ಸ್ನೇಹಿ ಪ್ರವಾಸೋದ್ಯಮ ಯೋಜನೆಯನ್ನು  ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಗ್ರೀನ್‌ ಆರ್ಕಿಟೆಕ್ಚ‌ರ್‌ ವಿನ್ಯಾಸ ಅನುಸಾರ ನಿರ್ಮಾಣ ಕಾಮಗಾರಿಗಳನ್ನು  ಯೋಜನೆಯಲ್ಲಿ ಒಳಪಡಿಸಲಾಗಿದೆ. ತ್ಯಾಜ್ಯ ನಿರ್ಮೂಲನಾ ವಿಧಾನಗಳನ್ನು  ಅವಲಂಬಿಸಿ ಮಾಲಿನ್ಯ ಮುಕ್ತ  ಪ್ರವಾಸೋದ್ಯಮ ಯೋಜನೆಯನ್ನು  ಕಾರ್ಯರೂಪಕ್ಕೆ ತರಲಾಗುವುದು.ಸ್ವೀವೇಜ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌, ಬಯೋ ಟಾಯ್ಲೆಟ್‌ಗಳು, ಪ್ಲಾಸ್ಟಿಕ್‌ ತ್ಯಾಜ್ಯ ಸಂಸ್ಕರಣೆ ಇತ್ಯಾದಿಗಳನ್ನು  ಖಾತರಿಪಡಿಸಿ ಯೋಜನೆಯನ್ನು  ಜಾರಿಗೊಳಿಸಲಾಗು ವುದು. ಉತ್ತರ ಕೇರಳದ ನದಿಗಳಲ್ಲಿ  ನೌಕಾ ವಿಹಾರದೊಂದಿಗೆ ಅದಕ್ಕೆ ಹೊಂದಿಕೊಂಡು ಆಯಾ ಪ್ರದೇಶಗಳ ಇತಿಹಾಸ, ಸಂಸ್ಕೃತಿ, ಕಲೆಗಳು,  ಸಂಗೀತ, ಆಚಾರ, ಅನುಷ್ಠಾನ ಗಳು, ಆರಾಧನಾ ಕೇಂದ್ರಗಳು, ಕರಕುಶಲ, ನೈಸರ್ಗಿಕ ಸೌಂದರ್ಯ, ಆಹಾರ ಮತ್ತು  ಮಲಬಾರ್‌ನ ಎಲ್ಲ ಪ್ರವಾಸಿ ಆಕರ್ಷಣೆ ಗಳನ್ನು  ಇದರಲ್ಲಿ ಒಳಪಡಿಸಿ ಮಲಬಾರ್‌ ಕ್ರೂಸ್‌ ಟೂರಿಸಂ ರಚಿಸಲಾಗಿದೆ.

ಕಣ್ಣೂರಿನಲ್ಲಿ ಅಂ.ರಾ. ವಿಮಾನ ನಿಲ್ದಾಣ
ಕಣ್ಣೂರಿನಲ್ಲಿ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೀಘ್ರ ಕಾರ್ಯಾರಂಭ ಗೊಳ್ಳುವುದರೊಂದಿಗೆ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ. ಮಾತ್ರವಲ್ಲದೆ ಈ ಯೋಜನೆಗಳ ಅನುಷ್ಠಾನದ ಮೂಲಕ ಮಲಬಾರಿನ ಅಸಂಖ್ಯಾತ ಮಂದಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವೂ ದೊರಕಲಿದೆ.

ಮಲಬಾರಿನ ಸಾಂಸ್ಕೃತಿಕ ಕಲಾರೂಪಕ 
ಪ್ರವಾಸೋದ್ಯಮದೊಂದಿಗೆ ಪರಂಪರಾಗತ ನೌಕರಿ ವಲಯಗಳಾದ ಮೀನುಗಾರಿಕೆ, ಭತ್ತ ಕೃಷಿ, ಕೈಮಗ್ಗ, ಕಂಚು – ಮಣ್ಣಿನ ಪಾತ್ರೆಗಳು ಮುಂತಾದವುಗಳನ್ನು  ಪ್ರವಾಸೋದ್ಯಮ ಯೋಜನೆಯ ಅಂಗವಾಗಿಸಿ ಅವುಗಳ ನಿರ್ಮಾಣ ಹಾಗೂ ಮಾರಾಟವನ್ನು  ಇದರ ಅಂಗವಾಗಿ ಅನುಷ್ಠಾನಕ್ಕೆ ತರಲಾಗುವುದು. ಅಡುಗೆ ವಿಧಾನಗಳು, ಮಲಬಾರಿನ ವಿಶೇಷ ಖಾದ್ಯಗಳು, ಸ್ಥಳೀಯ ಖಾದ್ಯಗಳನ್ನು  ಪ್ರವಾಸಿಗರಿಗೆ ಒದಗಿಸಲು ಮತ್ತು  ಪರಿಚಯಿಸಲು ತೀರ್ಮಾನಿಸಲಾಗಿದೆ. 

ಜಲ ಸಾರಿಗೆಯನ್ನು ಇದರ ಮೂಲಕ ಪ್ರಚಾರಕ್ಕೆ ತರಲು ಉದ್ದೇಶಿಸಲಾಗಿದೆ. ಮಲಬಾರಿನ ಸಾಂಸ್ಕೃತಿಕ ಕಲಾರೂಪಕಗಳಾದ ತೈಯ್ಯಂ, ಒಪ್ಪನ, ಕೋಲ್ಕಳಿ, ಪೂರಕಳಿ, ಯಕ್ಷಗಾನ ಮೊದಲಾದವುಗಳನ್ನು  ಯೋಜನೆಯಲ್ಲಿ ಸೇರಿಸಲಾಗಿದೆ. ಈ ಯೋಜನೆಗೆ ರಾಜ್ಯ ಸರಕಾರವು 50 ಕೋಟಿ ರೂ. ಒದಗಿಸಿದೆ. 100 ಕೋಟಿ ರೂ.ಕೇಂದ್ರ ಸರಕಾರದಿಂದ ಧನಸಹಾಯವಾಗಿ ನಿರೀಕ್ಷಿಸಲಾಗಿದೆ.ಯೋಜನೆಯು ಪೂರ್ಣಗೊಳ್ಳಲು 325 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Suside-Boy

Kasaragodu: ರೈಲಿನಿಂದ ಬಿದ್ದು ವ್ಯಕ್ತಿ ಸಾವು

14

Kasaragod: ಕೇರಳದಿಂದ ಕರ್ನಾಟಕಕ್ಕೆ ಪಲಾಯನಗೊಂಡಿದ್ದ ನಕ್ಸಲರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.