ಏತಡ್ಕ ಬಸ್‌ಗಳ ಸಂಚಾರ ಅರ್ಧದಲ್ಲೇ ಮೊಟಕು
Team Udayavani, Sep 18, 2019, 5:40 AM IST
ಬದಿಯಡ್ಕ: ರಸ್ತೆಯಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಬದಿಯಡ್ಕದಿಂದ ಏತಡ್ಕಕ್ಕಿರುವ ಬಸ್‌ಗಳು ಅರ್ಧದಲ್ಲೇ ಸಂಚಾರ ಮೊಟಕುಗೊಳಿಸುತ್ತಿವೆ.
ಕಿನ್ನಿಂಗಾರ್‌ನಿಂದ ಒಂದೂವರೆ ಕಿಲೋ ಮೀ. ದೂರವಿರುವ ನೇರಪ್ಪಾಡಿಯವರೆಗೆ ಮಾತ್ರವೇ ಸಂಚಾರ ನಡೆಸುತ್ತಿವೆ. ನೇರಪ್ಪಾಡಿ ಹಾಗೂ ಕಿನ್ನಿಂಗಾರ್ ಮಧ್ಯೆ ಬೃಹತ್ ಹೊಂಡಗಳು ಸೃಷ್ಟಿಯಾಗಿರುವುದರಿಂದ ಬಸ್ ಚಲಾಯಿಸಲು ಸಾಧ್ಯವಿಲ್ಲವೆಂದು ನೌಕರರು ಹೇಳುತ್ತಿದ್ದಾರೆ.
ಈ ಹೊಂಡಗಳನ್ನು ತಾತ್ಕಾಲಿಕವಾಗಿಯಾದರೂ ಮುಚ್ಚಿದರೆ ಸರ್ವಿಸ್ ಮುಂದುವರಿಸಲು ಸಾಧ್ಯವಿತ್ತೆಂದು ಅವರು ಅಭಿಪ್ರಾಯ ಪಡುತ್ತಾರೆ. ಆದರೆ ಅಧಿಕಾರಿಗಳು ಇದುವರೆಗೂ ಇದಕ್ಕೆ ಸ್ಪಂದಿಸಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಬದಿಯಡ್ಕ-ಕಿನ್ನಿಂಗಾರು ರಸ್ತೆ ನವೀಕರಣಕ್ಕೆ 51 ಕೋ. ರೂ. ಎಸ್ಟಿಮೇಟ್ ಸಿದ್ಧವಾಗಿದ್ದರೂ ಟೆಂಡರ್ ಕ್ರಮಗಳು ಇದುವರೆಗೆ ಪೂರ್ತಿ ಯಾಗಿಲ್ಲ. ಕಿನ್ನಿಂಗಾರಿಗಿರುವ ಬಸ್ ಸಂಚಾರ ಅರ್ಧದಲ್ಲೇ ಮೊಟಕುಗೊಳ್ಳುತ್ತಿರುವುದು ಪ್ರಯಾಣಿಕರನ್ನು ಸಂಕಷ್ಟಕ್ಕೀಡು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.