ಸ್ಟ್ರಾಂಗ್ ರೂಂಗೆ ವಿವಿಪ್ಯಾಟ್ ಸಹಿತ ಮತಯಂತ್ರಗಳ ರವಾನೆ
Team Udayavani, Apr 26, 2019, 6:08 AM IST
ಕಾಸರಗೋಡು: ಕಾಸರಗೋಡು ಲೋಕಸಭೆ ಚುನಾವಣೆಗಾಗಿ ಬಳಸಿದ ವಿವಿಪ್ಯಾಟ್ ಸಹಿತ ಮತಯಂತ್ರ ಗಳನ್ನು ಬುಧವಾರ ಪಡನ್ನಕ್ಕಾಡ್ ನೆಹರೂ ಕಲಾ-ವಿಜ್ಞಾನ ಕಾಲೇಜಿನ ಸ್ಟ್ರಾಂಗ್ ರೂಂಗೆ ತಲುಪಿಸಲಾಗಿದೆ.
7 ವಿಧಾನಸಭೆ ಕ್ಷೇತ್ರಗಳ ಮತಯಂತ್ರಗಳನ್ನು ಸ್ಟ್ರಾಂಗ್ ರೂಂ ನಲ್ಲಿ ಇರಿಸಲಾಗಿದೆ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ, ಪಡನ್ನಕ್ಕಾಡ್ ನೆಹರೂ ಕಲಾ-ವಿಜ್ಞಾನ ಕಾಲೇಜುಗಳ ಸ್ವೀಕಾರ ಕೇಂದ್ರಗಳ ಮೂಲಕ ವೋಟಿಂಗ್ ಸಾಮಗ್ರಿಗಳನ್ನು ಸ್ಟ್ರಾಂಗ್ ರೂಂಗೆ ವರ್ಗಾಯಿಸಲಾಗಿದೆ.
ಕಾಸರಗೋಡು ಸರಕಾರಿ ಕಾಲೇಜಿನಿಂದ ಮತಗಟ್ಟೆ ಕರ್ತವ್ಯ ಸಿಬಂದಿಯಿಂದ ಪಡೆಯಲಾದ ಸಾಮಗ್ರಿಗಳನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಪಡನ್ನಕ್ಕಾಡಿಗೆ ತರಲಾಗಿತ್ತು. ಜಿಲ್ಲಾ ಚುನಾ ವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು, ಜಿಲ್ಲಾ ನಿರೀಕ್ಷಕ ಎಸ್. ಗಣೇಶ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ. ಅಬ್ದು ರಹಮಾನ್, 7 ವಿಧಾನ ಸಭೆ ಉಪಚುನಾವಣೆ ಅಧಿಕಾರಿಗಳಾದ ಉಪಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್, ಎಲ್.ಆರ್.ಸಹಾಯಕ ಜಿಲ್ಲಾಧಿಕಾರಿ ಎಸ್.ಎಲ್. ಸಜಿ ಕುಮಾರ್, ಎಲ್.ಆರ್. ಸಹಾಯಕ ಜಿಲ್ಲಾಧಿ ಕಾರಿ ಪಿ.ಆರ್.ರಾಧಿಕಾ, ಕಣ್ಣೂರು ಎಲ್.ಆರ್. ಸಹಾ ಯಕ ಜಿಲ್ಲಾಧಿಕಾರಿ ರಶೀದ್ ಮುದುಕಂಡಿ, ಎಲ್ಲ ಅಭ್ಯರ್ಥಿಗಳ ಪ್ರತಿನಿಧಿಗಳು ಮೊದಲಾದವರ ಸಮಕ್ಷಮದಲ್ಲಿ ಮತಯಂತ್ರ ಗಳನ್ನು ಸೀಲ್ ನಡೆಸಿ ಸ್ಟಾÅಂಗ್ ರೂಂ ನಲ್ಲಿ ಇರಿಸಲಾಗಿದೆ.
ತ್ರಿಸ್ತರ ಸುರಕ್ಷೆ ವ್ಯವಸ್ಥೆಯಲ್ಲಿ ಸ್ಟ್ರಾಂಗ್ ರೂಂ ಸಿದ್ಧಪಡಿಸಲಾಗಿದೆ. ಕೇಂದ್ರ ಸೇನೆ, ರಾಜ್ಯ ಪೊಲೀಸ್, ಕಾರ್ಯಕಾರಿ ನ್ಯಾಯಮೂರ್ತಿ ಸೇರಿದಂತೆ ತ್ರಿಸ್ತರ ಸುರಕ್ಷೆ ವ್ಯವಸ್ಥೆಯಿದೆ. ಮತಗಣನೆಯ ದಿನವಾದ ಮೇ 23ರಂದು ಮಾತ್ರ ಸ್ಟ್ರಾಂಗ್ ರೂಂ ತೆರೆಯಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.