ಹೆದ್ದಾರಿ ಬದಿಯ ಹೊಂಡಕ್ಕೆ ಮಗುಚಿದ ಸಾರಿಗೆ ಬಸ್ : 9 ಮಂದಿಗೆ ಗಾಯ
Team Udayavani, Jul 14, 2017, 2:50 AM IST
ಕುಂಬಳೆ: ಶಿರಿಯಾದ ರಾಷ್ಟ್ರೀಯ ಹೆದ್ದಾರಿ ಬದಿಯ ಹೊಂಡಕ್ಕೆ ಗುರುವಾರ ಬೆಳಗ್ಗೆ ಕರ್ನಾಟಕ ಕೆಎಸ್ಆರ್ಟಿಸಿ ಬಸ್ ಮಗುಚಿ ಬಿದ್ದು ಒಂಭತ್ತು ಮಂದಿ ಗಾಯಗೊಂಡಿದ್ದಾರೆ.
ಮಂಗಳೂರಿನಿಂದ ಕಾಸರಗೋಡಿಗೆ ಸಾಗುತ್ತಿದ್ದ ಸಾರಿಗೆ ಬಸ್ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದು, ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಕಾಸರಗೋಡಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರಾದ ತಸ್ರಿàನ(18), ಆಯಿಷತ್ ಸಫ್ರೀನ(18), ಕುಂಬಳೆ ಖಾಸಗಿ ಸಂಸ್ಥೆಯ ಸಿಬಂದಿ ತಿಂಬರ ನಿವಾಸಿ ಶ್ರುತಿ(23), ಕಾಸರಗೋಡಿನ ಖಾಸಗಿ ಸಂಸ್ಥೆಯ ಸಿಬಂದಿ ಜಿಷಾ(24), ಪತ್ವಾಡಿ ನಿವಾಸಿಗಳಾದ ಸಲ್ಮಾ(45), ಪುತ್ರಿ ರುಖೀಯಾ(25), ಮಣಿಮುಂಡದ ಶರೀಫ್(25), ಸೋಂಕಾಲಿನ ಸಚಿನ್(24), ಪ್ರತಾಪನಗರದ ವಿಘ್ನೇಶ್ ಆಚಾರ್ಯ(30) ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.
ಬಸ್ ಚಾಲಕ ಹರೀಶ್(28) ಮತ್ತು ನಿರ್ವಾಹಕ ಕೃಷ್ಣ(47) ಗಾಯಗಳಿಲ್ಲದೆ ಪಾರಾಗಿದ್ದಾರೆ. ಬಸ್ನಲ್ಲಿ 14 ಮಂದಿ ಪ್ರಯಾಣಿಕರಿದ್ದರು.
ಬಸ್ ಮಗುಚಿ ಬಿದ್ದ ತತ್ಕ್ಷಣ ಸ್ಥಳೀಯರು ಮತ್ತು ಕುಂಬಳೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಶಿರಿಯಾ ಅಪಘಾತ ವಲಯವಾಗಿದ್ದು, ಈ ಹಿಂದೆ ಎರಡು ಅನಿಲ ಟ್ಯಾಂಕರ್ಗಳು ಮಗುಚಿ ಬಿದ್ದಿತ್ತು.
– ಚಿತ್ರ : ಮೇಘ ಕುಂಬಳೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.