ತುಳು ಅಕಾಡೆಮಿ,ಯಕ್ಷಗಾನ ಕಲಾಕೇಂದ್ರ,ಅಡಿಕೆ ಕೃಷಿಕರ ಮರೆತ ಸರಕಾರ

Team Udayavani, Feb 2, 2019, 12:30 AM IST

kasaragod.jpg

ಕಾಸರಗೋಡು: ಕೇರಳ ರಾಜ್ಯ ಹಣಕಾಸು ಸಚಿವ ಡಾ|ಥಾಮಸ್‌ ಐಸಾಕ್‌ ಜ. 31ರಂದು ಮಂಡಿಸಿದ 2019-20ನೇ ಆರ್ಥಿಕ ವರ್ಷದ ಮುಂಗಡ ಪತ್ರ ಕಾಸರಗೋಡು ಜಿಲ್ಲೆಯ ಮಟ್ಟಿಗೆ ನಿರಾಶಾದಾಯಕ. 

ಪಾರ್ತಿಸುಬ್ಬ ಯಕ್ಷಗಾನ ಕಲಾ ಕೇಂದ್ರ, ಕೇರಳ ತುಳು ಅಕಾಡೆಮಿ, ಅಡಿಕೆ ಬೆಳೆಗಾರರನ್ನು ಕೇರಳ ಸರಕಾರ ಮರೆತೇ ಬಿಟ್ಟಿದೆ. ಎಂಡೋ ದುರಂತದ ಸಂತ್ರಸ್ತರಿಗಾಗಿ ಕಾದಿರಿಸಿದ ನಿಧಿ ಏನೇನು ಸಾಲದು. ಈ ಮೂಲಕ ಕಾಸರಗೋಡು ಜಿಲ್ಲೆಯನ್ನು ಹಿಂದಿನಂತೆಯೇ ಈ ಬಜೆಟ್‌ನಲ್ಲೂ ಅವಗಣಿಸಲಾಗಿದೆ.

ಈ ಮುಂಗಡಪತ್ರದಲ್ಲಿ ಎಂಡೋ ಸಂತ್ರಸ್ತರಿಗೆ ಕೇವಲ 20 ಕೋಟಿ ರೂ. ಕಾದಿರಿಸಿದ್ದರೆ, ಡಾ| ಪ್ರಭಾಕರನ್‌ ಆಯೋಗ ಶಿಫಾರಸಿನ ಪ್ರಕಾರ ಕಾಸರಗೋಡು ಪ್ಯಾಕೇಜ್‌ಗೆ ಕೇವಲ 91 ಕೋಟಿ ರೂ. ಮಾತ್ರವೇ ಇರಿಸಲಾಗಿದೆ. ಕರಾವಳಿ ಪುನರ್ವಸತಿ ಯೋಜನೆಯಲ್ಲಿ ಒಟ್ಟು ಕಾದಿರಿಸಿದ 100 ಕೋಟಿ ರೂ., ಕಡಲ್ಕೊರೆತ ತಡೆಯಲು ನೀಡಲಾದ ಒಟ್ಟು ಮೊತ್ತ 277 ಕೋಟಿ ರೂ., ಕರಾವಳಿ ಪ್ರದೇಶ ಅಭಿವೃದ್ಧಿಗಾಗಿ ಕಾದಿರಿಸಿದ ಒಟ್ಟು ಮೊತ್ತ 900 ಕೋಟ ರೂ. ಮತ್ತು ಕಿಫ್‌ಬಿ ಯೋಜನೆಯಲ್ಲಿ ಕಾದಿರಿಸಿದ ನಿಧಿಯಲ್ಲಿ ಕಾಸರಗೋಡಿಗೂ ಲಭಿಸಬಹುದೆಂದು ನಿರೀಕ್ಷಿಸಲಾಗಿದೆ.

ಕಾಸರಗೋಡು ಮೆಡಿಕಲ್‌ ಕಾಲೇಜು ನಿರ್ಮಾಣ ಪೂರ್ತಿಗೊಳಿಸಲೂ, ಪೆರಿಯ ಏರ್‌ಸ್ಟ್ರಿಪ್‌ ನಿರ್ಮಾಣ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಮೊದಲಾದ ಅಭಿವೃದ್ಧಿಗಾಗಿ ಪ್ರತ್ಯೇಕ ಹಣ ಕಾದಿರಿಸಬಹುದೆಂದು ನಿರೀಕ್ಷಿಸಿದ್ದರೂ ಅವುಗಳೆಲ್ಲ ಹುಸಿಯಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 14 ನದಿಗಳಿದ್ದರೂ, ಇದಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಯೋಜನೆಗಳಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕಾದಿರಿಸಿದ ಒಟ್ಟು 132 ಕೋಟಿ ರೂ. ಮೊತ್ತದಲ್ಲಿ ಕಾಸರಗೋಡು ಜಿಲ್ಲೆಗೂ ಲಭಿಸಬಹುದೆಂದು ನಿರೀಕ್ಷಿಸಲಾಗಿದೆ.

ಅಡಿಕೆ ಬೆಳೆಗಾರರಿಗೆ ನಿರಾಶೆ  
ಮಹಾಳಿ ಮೊದಲಾದ ರೋಗಗಳಿಂದ ತತ್ತರಿಸಿರುವ ಅಡಿಕೆ ಬೆಳೆಗಾರರಿಗೆ ರಾಜ್ಯ ಬಜೆಟ್‌ ನಿರಾಶೆಯನ್ನುಂಟು ಮಾಡಿದೆ. ತುರ್ತು ನೆರವಾಗಿ ಭರವಸೆ ನೀಡಿದ್ದ 2 ಕೋಟಿ ರೂ. ಯನ್ನೂ ಬಜೆಟ್‌ನಲ್ಲಿ ಕಾದಿರಿಸಿಲ್ಲ. ಅಲ್ಲದೆ ಶಾಸಕ ಕೆ.ಕುಂಞಿರಾಮನ್‌ ಅಡಿಕೆ ಕೃಷಿಕರಿಗೆ 20 ಕೋಟ ರೂ. ನೀಡಬೇಕೆಂದು ಆಗ್ರಹಿಸಿ ಸಲ್ಲಿಸಿದ ಮನವಿಯನ್ನು ಪರಿಗಣಿಸಿಲ್ಲ. ಮಹಾಳಿ ರೋಗದಿಂದ ಕಾಸರಗೋಡು ಜಿಲ್ಲೆಯಲ್ಲಿ 7174 ಹೆಕ್ಟರ್‌ ಅಡಿಕೆ  ಕೃಷಿ ಹಾನಿಗೀಡಾಗಿದೆ ಎಂದು ಕೃಷಿ ಇಲಾಖೆಯ ಅಂಕಿಅಂಶ ನೀಡಿತ್ತು. ಈ ಕಾರಣದಿಂದ 8022 ಟನ್‌ ಅಡಿಕೆ ಕೊಳೆತು ಬಿದ್ದಿದೆ. ಪ್ರಾಥಮಿಕ ಅಂದಾಜಿನಂತೆ 16 ಕೋಟಿ ರೂ. ನಷ್ಟವಾಗಿದೆ. ಬೃಹತ್‌ ಮಟ್ಟದಲ್ಲಿ ಅಡಿಕೆ ಕೃಷಿಕರಿಗೆ ನಷ್ಟವಾಗಿದ್ದರೂ ಬಜೆಟ್‌ನಲ್ಲಿ ಚಿಕ್ಕಾಸು ನೀಡಿಲ್ಲ. ಇದು ಪ್ರತಿಭಟನೆಗೆ ಕಾರಣವಾಗಿದೆ.

ಎಂಡೋ ಸಂತ್ರಸ್ತರಿಗೆ ನಿರಾಶೆ  
ಎಂಡೋಸಲ್ಫಾನ್‌ ಸಂತ್ರಸ್ತರಿಗೆ ಬಜೆಟ್‌ನಲ್ಲಿ ಕೇವಲ 20 ಕೋಟಿ ರೂ. ಕಾದಿರಿಸಲಾಗಿದೆ. ಹಿಂದಿನ ಮೂರು ಬಜೆಟ್‌ಗಳಲ್ಲಿ 34.5 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಜಿಲ್ಲೆಯ 11 ಗ್ರಾಮ ಪಂಚಾಯತ್‌ಗಳಲ್ಲಿನ ಎಂಡೋ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಮತ್ತು ಕ್ಷೇಮಕ್ಕಾಗಿ ಈ ಮೊತ್ತ ಬಳಸಲಾಗುವುದು. ಮುಳಿಯಾರಿನಲ್ಲಿ ಉದ್ದೇಶಿಸಿದ ಪುನರ್ವಸತಿ ಗ್ರಾಮ ಇದರಲ್ಲೊಳಗೊಂಡಿದೆ. ಆದರೆ ಎಂಡೋ ಮೊತ್ತ ಏನೇನು ಸಾಲದು.

ಪ್ರಸ್ತಾವ ಪರಿಗಣಿಸಲಿಲ್ಲ 
ಕಾಸರಗೋಡಿಗೆ 50 ಕೋಟಿ ರೂ. ಯೋಜನೆಯನ್ನು ನಿರ್ದೇಶಿಸಲು ವಿತ್ತ ಖಾತೆ ಕೇಳಿಕೊಂಡಿತ್ತು. ಅದರಂತೆ ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ಕನ್ನಡ ಅಕಾಡೆಮಿ ಸ್ಥಾಪನೆ, ಕಾಸರಗೋಡು ನಗರ ಅಭಿವೃದ್ಧಿ ಯೋಜನೆ, ಕೆ.ಎಂ.ಅಹಮ್ಮದ್‌ ಸ್ಮಾರಕ ಲೈಬ್ರೆರಿ, ಮುನ್ಸಿಪಲ್‌ ಸ್ಟೇಡಿಯಂ ಅಭಿವೃದ್ಧಿ ಮೊದಲಾದ ಯೋಜನೆಗಳನ್ನು ಸಲ್ಲಿಸಿದ್ದರು. ಆದರೆ ಬಜೆಟ್‌ನಲ್ಲಿ ಈ ಯಾವುದೇ ಪ್ರಸ್ತಾವವನ್ನೂ ಪರಿಗಣಿಸಿಲ್ಲ.

ಶ್ವೇತಪತ್ರ ಹೊರಡಿಸಲಿ
ಎಂಡೋ ಸಂತ್ರಸ್ತರಿಗೆ ಯಾವುದೇ ಭರವಸೆ ಇಲ್ಲ. ಕಳೆದ ಬಾರಿ ಮಂಜೂರು ಮಾಡಿದ 50 ಕೋಟಿ ರೂ.ಯಲ್ಲಿ ಸಂತ್ರಸ್ತರಿಗೆ ಔಷಧಿಗೂ ಲಭಿಸಿಲ್ಲ. ಇದೀಗ ಮಂಜೂರು ಮಾಡಿದ 20 ಕೋಟಿ ರೂ. ಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಷ್ಟ ಪರಿಹಾರ ನೀಡಲು ಮತ್ತು ಪುನರ್ವಸತಿ ಗ್ರಾಮ ಕಲ್ಪಿಸಲೂ ಸಾಧ್ಯವಾಗದು. ಎಂಡೋ ಸಂತ್ರಸ್ತರು ಸೆಕ್ರೆಟರಿಯೇಟ್‌ ಮುಂದೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ನಿರಾಹಾರ ಸತ್ಯಾಗ್ರಹ ವನ್ನು ಸರಕಾರ ಅವಗಣಿಸಿದೆ. ಈ ಹಿಂದೆ ಮಂಜೂರು ಮಾಡಿದ ಹಣವನ್ನು ಹೇಗೆ ವೆಚ್ಚ ಮಾಡಿದೆ ಎಂಬ ಬಗ್ಗೆ ಸರಕಾರ ಶ್ವೇತಪತ್ರ ಹೊರಡಿಸಬೇಕು.
– ಅಂಬಲತ್ತರ ಕುಂಞಿಕೃಷ್ಣನ್‌,ಪ್ರಧಾನ ಕಾರ್ಯದರ್ಶಿ,
ಎಂಡೋಸಲ್ಫಾನ್‌ ಸಂತ್ರಸ್ತ ಜನಪರ ಒಕ್ಕೂಟ.

ಮದ್ಯ,ಲಾಟರಿ ಆದಾಯ ಅವಲಂಬನೆ ಅವಮಾನಕರ
ಅತ್ಯಂತ ನಿರಾಶಾದಾಯಕ ಬಜೆಟ್‌. ಮಂಜೇಶ್ವರ ವಿಧಾನಸಭಾ ಕ್ಷೇತ್ರ, ಪಾರ್ತಿ ಸುಬ್ಬ ಯಕ್ಷಗಾನ ಕಲಾಕೇಂದ್ರ, ತುಳು ಅಕಾಡೆಮಿಗಳನ್ನು ಅವಗಣಿಸಲಾಗಿದೆ. ಅಡಿಕೆ ಕೃಷಿಕರಿಗೆ, ಗಡಿನಾಡ ಕನ್ನಡಿಗರಿಗೆ, ಎಂಡೋ ಪೀಡಿತರಿಗೆ ಪ್ರತ್ಯೇಕ ಸವಲತ್ತು ನೀಡಿಲ್ಲ. ಮನೆ, ವಾಹನಗಳಿಗೆ ಅಧಿಕ ತೆರಿಗೆ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಆಧುನಿಕ ಯುಗದಲ್ಲಿಯೂ ಮದ್ಯ, ಲಾಟರಿ ಕೇರಳದ ಆದಾಯದ ಮೂಲ ಎನ್ನುವುದು ಅವಮಾನ.
– ಆದರ್ಶ್‌ ಬಿ.ಎಂ., ಪ್ರಧಾನ ಕಾರ್ಯದರ್ಶಿ
ಬಿಜೆಪಿ ಮಂಜೇಶ್ವರ ಮಂಡಲ.

ಅಭಿವೃದ್ಧಿ ಪರ ಬಜೆಟ್‌ : ಸಿ.ಪಿ.ಎಂ.
ರಾಜ್ಯ ಬಜೆಟ್‌ ಕಾಸರಗೋಡು ಜಿಲ್ಲೆಯ ಅಭಿವೃದ್ಧಿ ಪರವಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ 91 ಕೋಟಿ ರೂ. ಕಾದಿರಿಸಿರುವುದರಿಂದ ಅಭಿವೃದ್ಧಿಗೆ ನೆರವಾಗಲಿದೆ. ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ.
-ಎಂ.ವಿ. ಬಾಲಕೃಷ್ಣನ್‌ 
ಸಿಪಿಎಂ ಜಿಲ್ಲಾ ಕಾರ್ಯದರ್ಶಿ 

ಟಾಪ್ ನ್ಯೂಸ್

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-madikeri

Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

7

Kasaragod: ಅಂಗಡಿಗೆ ನುಗ್ಗಿದ ಕಾಡು ಹಂದಿ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Untitled-1

Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.