ತುಳು ಭಾಷೆ, ಸಂಸ್ಕೃತಿ ಅನನ್ಯ: ಶಶಿಧರ ಮಾಂಗಾಡ್
ವಾಂತಿಚ್ಚಾಲಿನಲ್ಲಿ 51ನೇ ವರ್ಷದ "ಆಟಿಡೊಂಜಿ ಅಟ್ಟಣೆ' ಸಮಾರೋಪ
Team Udayavani, Aug 5, 2019, 5:53 AM IST
ಬದಿಯಡ್ಕ: ತುಳು ಭಾಷೆ ಮತ್ತು ಸಂಸ್ಕೃತಿ ಅನನ್ಯವಾದುದು. ಅದರ ಒಳತತ್ವವನ್ನು ಅರಿತು ಅಳವಡಿಸಿ ಕೊಂಡು ಬದುಕಿದಾಗ ಮಾತ್ರ ಯಾವುದೇ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು ಜೀವಂತವಾಗುಳಿಯಲು ಸಾಧ್ಯ. ಆದುದರಿಂದ ಇಂತಹ ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತ ಎನಿಸುತ್ತವೆ ಎಂದು ಜೋತಿಷಿ ತಿಲಕ ಶಶಿಧರ ಮಾಂಗಾಡ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ವಾಂತಿಚ್ಚಾಲಿನ ಜಿ.ಕೆ. ಚಾರಿಟೆಬಲ್ ಟ್ರಸ್ಟ್ ನೇತƒತ್ವದಲ್ಲಿ ವಾಂತಿಚ್ಚಾಲಿನಲ್ಲಿ ಆಯೋಜಿಸ ಲಾದ 51ನೇ ವರ್ಷದ “ಆಟಿಡೊಂಜಿ ಅಟ್ಟಣೆ’ ವಿಶೇಷ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲದೊಂದಿಗೆ ಕೊಚ್ಚಿಹೋಗುವ ನಮ್ಮತನ ವನ್ನು ಅಳಿದುಹೋಗದಂತೆ ಭದ್ರವಾಗಿ ಸಂರಕ್ಷಿಸುವ ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕರ್ತವ್ಯವನ್ನು ಎಂದೂ ಮರೆಯ ಬಾರದು. ಹೊಸತನ ಹಳೆಯ ಬೇರು ಗಳನ್ನು ಕಿತ್ತೂಗೆಯದಂತೆ ಮಾಡಲು ಇಂತಹ ಆಚರಣೆಗಳು ಅಗತ್ಯ ಎಂದವರು ಹೇಳಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ, ಮೀಡಿಯಾ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ನೆಟ್ಟಣಿಗೆ, ಚೆನ್ನಪ್ಪ ಕುಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಎಂ.ವಿ. ಮೂಲ್ಯ, ವಿದ್ಯಾಶ್ರೀ, ಜಾನಪದ ಪರಿಷತ್ತು ಕೇರಳ ಘಟಕದ ಸದಸ್ಯೆ ಪುಷ್ಪಾವತಿ ನೆಟ್ಟಣಿಗೆ, ಜಯ ಮಣಿಯಂಪಾರೆ, ಹರ್ಷ ರೈ ಪುತ್ರಕಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತುಳು ಅಕಾಡೆಮಿ ಸದಸ್ಯೆ ವಿದ್ಯಾಶ್ರೀ 25ಕ್ಕಿಂತಲೂ ಹೆಚ್ಚು ಮಕ್ಕಳಿಗೆ ತುಳು ಕಲಿಕಾ ಕಾರ್ಯಗಾರ ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಾಲಪ್ರತಿಭೆಗಳನ್ನು ಮತ್ತು ಹಿರಿಯ ಕಲಾವಿದರನ್ನು ಸಮ್ಮಾನಿಸಲಾಯಿತು. ತುಳುವರ ಆಚಾರ ವಿಚಾರಗಳ, ನಂಬಿಕೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಆಟಿ ಕೆಳಂಜನ ನರ್ತನ ಜನಮನ ಸೆಳೆಯಿತು. ಜಿಕೆ ಟ್ರಸ್ಟ್‌ನ ಸ್ಥಾಪಕರಾದ ಗೋಪಾಲ ಕೃಷ್ಣ ವಾಂತಿಚ್ಚಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಶ್ವಥ್ ಏತಡ್ಕ ಸ್ವಾಗತಿಸಿ ರಶ್ಮೀ ಮುಳಿಯಡ್ಕ ಧನ್ಯವಾದ ಸಮರ್ಪಿಸಿದರು. ಯತೀಶ್ ಕೋರ್ಮಂಡ ನಿರ್ವಹಿಸಿದರು.
ಆಟಿ ಆಹಾರಗಳಲ್ಲಿ ಔಷಧೀಯ ಗುಣವಿದೆ
ತುಳುನಾಡಿನ ವೈವಿಧ್ಯಮಯ ಆಚರಣೆಗಳಲ್ಲಿ ವೈಜ್ಞಾನಿಕ ತತ್ವಗಳೂ ಅಡಕವಾಗಿವೆ. ದೇಹ ಮತ್ತು ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಆಟಿಯಲ್ಲಿ ಸೇವಿಸುವ ಆಹಾರ ಪದಾರ್ಥಗಳು ಔಷಧೀಯ ಗುಣ ಹೊಂದಿರುವ ಪ್ರಕೃತಿ ದತ್ತ ಉತ್ಪನ್ನಗಳು. ಬಹಳ ಹಿಂದಿ ನಿಂದಲೇ ಪ್ರಕೃತಿಯನ್ನು ಅಥೆ„ìಸುವಲ್ಲಿ, ಉಪ ಯೋಗಿಸುವಲ್ಲಿ ತುಳುವರು ಮೇಲುಗೆ„ ಸಾಧಿಸಿದ್ದಾರೆ
-ಬಿ.ಪಿ. ಶೇಣಿ
ಸಮಾರಂಭದ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.