ಕೇರಳದಲ್ಲಿ 29 ಮಂದಿಗೆ ಸೋಂಕು: ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರಿಗೆ ಸೋಂಕು ದೃಢ
Team Udayavani, May 19, 2020, 9:18 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಜಿಲ್ಲೆಯ ಇಬ್ಬರನ್ನೊಳಗೊಂಡಂತೆ ಕೇರಳ ರಾಜ್ಯದಲ್ಲಿ ಸೋಮವಾರ 29 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಅವರಲ್ಲಿ 21 ಮಂದಿ ವಿದೇಶದಿಂದ, 7 ಮಂದಿ ಇತರ ರಾಜ್ಯಗಳಿಂದ ಬಂದವರು. ಕಣ್ಣೂರಿನ ಒಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ಕೊಲ್ಲಂ-6, ತೃಶ್ಶೂರ್-4, ತಿರುವ ನಂತ ಪುರ, ಕಣ್ಣೂರು-3, ಪತ್ತ ನಂತಿಟ್ಟ, ಆಲಪ್ಪುಳ, ಕೋಟ್ಟಯಂ, ಕೋಯಿಕ್ಕೋಡ್, ಕಾಸರಗೋಡು ಜಿಲ್ಲೆ ಗಳಲ್ಲಿ ತಲಾ 2, ಎರ್ನಾಕುಳಂ, ಪಾಲಕ್ಕಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ತಲಾ ಒಬ್ಬರನ್ನು ಸೋಂಕು ಬಾಧಿಸಿದೆ.
ಜಿಲ್ಲೆಯಲ್ಲಿ ಸೋಂಕು ಬಾಧಿತ ರಾದವರು ಪೈವಳಿಕೆ ನಿವಾಸಿಗಳಾದ 28 ವರ್ಷ ಪ್ರಾಯದ ಯುವಕರು. ಅವರು ಮುಂಬಯಿಯಿಂದ ಮೇ 15ರಂದು ಊರಿಗೆ ಬಂದು ಸರಕಾರಿ ಕ್ವಾರಂಟೈನ್‌ಗೆ ದಾಖಲಾಗಿದ್ದರು. ಈಗ ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ರಾಮದಾಸ್ (ಆರೋಗ್ಯ) ತಿಳಿಸಿದರು.
ಷರತ್ತುಬದ್ಧ ಅನುಮತಿ
ಜಿಲ್ಲೆಯೊಳಗೆ ವಾಹನದ ಆಸನ ಸಾಮರ್ಥ್ಯದ ಶೇ. 50 ಮಂದಿ ಪ್ರಯಾ ಣಿಕ ರನ್ನು ಕರೆದೊಯ್ಯು ಷರತ್ತಿ ನೊಂದಿಗೆ ಸಾರ್ವಜನಿಕ ಸಾರಿಗೆ ಯನ್ನು ಆರಂಭಿಸಬಹುದು. ನಿಂತು ಪ್ರಯಾ ಣಿಸಲು ಅನುಮತಿಯಿಲ್ಲ. ಜಿಲ್ಲೆ ಯೊಳಗೆ ವಾಹನಗಳ, ಜನರ ಸಂಚಾರಕ್ಕೆ ತಡೆಯಿಲ್ಲ. ಅಂತರ್ ಜಿಲ್ಲಾ ಪ್ರಯಾಣಗಳಲ್ಲಿ ಸಾರ್ವಜನಿಕ ಸಾರಿಗೆ ಇರುವುದಿಲ್ಲ. ಇತರ ವಾಹನಗಳಲ್ಲಿ ಪ್ರಯಾಣಿಸಬಹುದು. ಬೆಳಗ್ಗೆ 7ರಿಂದ ಸಂಜೆ 7 ರ ವರೆಗೆ ಮಾತ್ರವೇ ಅವಕಾಶ. ಇದಕ್ಕೆ ಪಾಸ್ ಅಗತ್ಯವಿಲ್ಲ. ಆದರೆ ಗುರುತು ಚೀಟಿ ಬೇಕು.
ಪಾಸ್ ಮಂಜೂರು: ಜಿಲ್ಲೆಗೆ 5ನೇ ಸ್ಥಾನ
ಇತರ ರಾಜ್ಯಗಳಿಂದ ಕೇರಳ ಪ್ರವೇಶಿ ಸಲು ಪಾಸ್ ಮಂಜೂರು ಮಾಡುವ ವಿಚಾರದಲ್ಲಿ ಕಾಸರ ಗೋಡು ಜಿಲ್ಲೆಗೆ 5ನೇ ಸ್ಥಾನವಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದರು. ಜಿಲ್ಲೆಯಲ್ಲಿ ಈ ವರೆಗೆ ಶೇ. 80.83 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
19 ಪ್ರಕರಣ ದಾಖಲು
ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 19 ಪ್ರಕರಣಗಳನ್ನು ದಾಖ ಲಿಸಿಕೊಳ್ಳಲಾಗಿದೆ. 21 ಮಂದಿಯನ್ನು ಬಂಧಿಸಲಾಗಿದ್ದು, 11 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
Kasaragodu: ನಾಪತ್ತೆಯಾಗಿದ್ದ ಯುವಜೋಡಿ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.