ರಂಗಸಿರಿ ವಿದ್ಯಾರ್ಥಿಗಳಿಂದ ಒಂದೇ ದಿನ ಎರಡು ಯಕ್ಷಗಾನ
Team Udayavani, Apr 3, 2018, 6:40 AM IST
ಬದಿಯಡ್ಕ: ಒಂದು ಯಕ್ಷಗಾನ ಪ್ರದರ್ಶನ ನೀಡಲು ಉತ್ತಮ ದೈಹಿಕ ಸಾಮರ್ಥ್ಯ ಬೇಕಾಗುತ್ತದೆ. ಯಕ್ಷಗಾನದ ವೇಷಭೂಷಣ, ಕಿರೀಟಗಳ ಭಾರ ಹಾಗೂ ಕಿರಿಕಿರಿಗಳನ್ನು ಅನುಭವಿಸುತ್ತಾ ಕಲಾವಿದರು ಸಹೃದಯೀ ಪ್ರೇಕ್ಷಕರಿಗೆ ರಸದೌತಣವನ್ನು ಉಣಬಡಿಸುತ್ತಾರೆ. ರಾತ್ರೆ ನಿದ್ದೆಗೆಟ್ಟು ಪುರಾಣಲೋಕಕ್ಕೆ ಜನರನ್ನು ಕೊಂಡೊಯ್ಯುವ ಕಲಾವಿದರು ಬಹಳ ಪರಿಶ್ರಮಿಗಳು.
ವೃತ್ತಿಪರ ಕಲಾವಿದರಿಗಾದರೆ ಅದು ಅವರ ದೈನಂದಿನ ಜೀವನದ ಭಾಗವೇ ಆಗಿಹೋಗಿರುತ್ತದೆ. ಅದುವೇ ಅಭ್ಯಾಸವಾಗಿರುತ್ತದೆ. ಹಲವು ಕಲಾವಿದರು ಒಂದು ರಾತ್ರಿಯಲ್ಲಿ ಎರಡು ಮೂರು ಕಡೆಗಳಲ್ಲಿ ವೇಷಮಾಡುವುದೂ ಇದೆ. ಆದರೆ ಹವ್ಯಾಸಿಗಳಾಗಿ ಆಗೊಮ್ಮೆ ಈಗೊಮ್ಮೆ ಬಣ್ಣ ಹಚ್ಚುವ ಯಕ್ಷಗಾನ ವಿದ್ಯಾರ್ಥಿಗಳು ಒಂದೇ ದಿನ ಎರಡು ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ, ಎರಡೂ ಕಡೆಗಳಲ್ಲಿ ಪ್ರೇಕ್ಷಕರ ಮನಸೂರೆಗೊಂಡದ್ದು ಮೆಚ್ಚತಕ್ಕ ವಿಚಾರವೇ ಸರಿ. ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳ ಈ ಸಾಧನೆ ಉಲ್ಲೇಖಾರ್ಹ. ವಿದ್ಯಾರ್ಥಿಗಳ ಸುಪ್ತ ಸಾಮರ್ಥ್ಯವನ್ನು ತೋರ್ಪಡಿಸುವಂತೆ ಮಾಡುವಲ್ಲಿ ರಂಗಸಿರಿಯ ಯಕ್ಷಗಾನ ಗುರು ಸೂರ್ಯನಾರಾಯಣ ಪದ ಕಣ್ಣಾಯರ ಮಾರ್ಗದರ್ಶನ ಸ್ತುತ್ಯರ್ಹ.
ಕುಡಾಲುಮೇರ್ಕಳದಲ್ಲಿ ಕೇರಳ ಸರಕಾರದ ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆಯು “ತೇಜಸ್ವಿನಿ ಉತ್ಸವ 2018′ ಎಂಬ ಕಾರ್ಯಕ್ರಮ ವೇರ್ಪಡಿಸಿತ್ತು. ಕಾಸರಗೋಡಿನ ಮಣ್ಣಿನ ಜಾನಪದ ಕಲಾಪ್ರದರ್ಶನಗಳೂ ಒಳಗೊಂಡು ಈ ಕಾರ್ಯಕ್ರಮ ವಿಶೇಷವಾಗಿತ್ತು. ಅದರಂಗವಾಗಿ ಮಧ್ಯಾಹ್ನ “ಭಕ್ತ ಸುಧನ್ವ’ ಯಕ್ಷಗಾನ ಪ್ರದರ್ಶನವನ್ನು ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಭಾಗವತರಾಗಿ ಸತೀಶ ಪುಣಿಂಚತ್ತಾಯ, ಚೆಂಡೆವಾದಕರಾಗಿ ಶಂಕರ ಕಾಮತ್ ಚೇವಾರು, ಮದ್ದಳೆಯಲ್ಲಿ ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಹಾಗೂ ಚಕ್ರತಾಳದಲ್ಲಿ ಬಾಲಕಲಾವಿದ ಸಮೃದ್ಧ ಸಹಕರಿಸಿದರು. ಪಾತ್ರವರ್ಗದಲ್ಲಿ ಸುಧನ್ವನಾಗಿ ವಿದ್ಯಾ ಕುಂಟಿಕಾನಮಠ, ಪ್ರಭಾವತಿಯಾಗಿ ಸುಪ್ರೀತಾ ಸು ಧೀರ್ ರೈ, ಪ್ರದ್ಯುಮ್ನನಾಗಿ ಶಶಾಂಕ ಮೈರ್ಕಳ, ವೃಷಕೇತುವಾಗಿ ಅಭಿಜ್ಞಾ ಭಟ್, ಅರ್ಜುನನಾಗಿ ಶ್ರೀಶ ಕುಮಾರ ಪಂಜಿತ್ತಡ್ಕ ಹಾಗೂ ಶ್ರೀಕೃಷ್ಣ¡ನಾಗಿ ಶ್ರೀಹರಿ ಮವ್ವಾರು ಉತ್ತಮ ಪ್ರದರ್ಶನ ನೀಡಿದರು.
ನೇಪಥ್ಯದಲ್ಲಿ ಕೇಶವ ಆಚಾರ್ಯ ಹಾಗೂ ರಾಜೇಂದ್ರ ವಾಂತಿಚ್ಚಾಲು ಸಹಕರಿಸಿದರು. ಜಿಲ್ಲಾ ವಾರ್ತಾ ಮತ್ತು ಸಂಪರ್ಕ ಅಧಿ ಕಾರಿ ಸುಗತನ್ ಇ.ವಿ., ಮಲಾರ್ ಜಯರಾಮ ರೈ ಹಾಗೂ ಪ್ರೊ| ಎ. ಶ್ರೀನಾಥ್ ಅವರು ರಂಗಸಿರಿಯ ತಂಡವನ್ನು ಸ್ಮರಣಿಕೆ ನೀಡಿ ಗೌರವಿಸಿದರು.
ಅದೇ ದಿನ ರಾತ್ರಿ ಮಂಗಳೂರಿನ ಕಾರ್‌ಸ್ಟ್ರೀಟ್ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಕ್ಷೇತ್ರದ ಯುಗಾದಿ ಮಹೋತ್ಸವದ ಅಂಗವಾಗಿ ಶ್ರೀ ವಿದ್ಯಾ ನಾಟಕ ಸಭಾದ ವತಿಯಿಂದ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳ ಯಕ್ಷಗಾನ “ಜಾಂಬವತಿ ಕಲ್ಯಾಣ ಹಾಗೂ ಸುದರ್ಶನ ವಿಜಯ’ ನಡೆಯಿತು. ಸತ್ರಾಜಿತನಾಗಿ ಶ್ರೀಜಾ ಉದನೇಶ್, ಪ್ರಸೇನನಾಗಿ ಉಪಾಸನಾ ಪಂಜರಿಕೆ, ಮುದಿಯಪಣ್ಣನಾಗಿ ಮನೀಶ್ ರೈ, ವನಪಾಲಕರಾಗಿ ಸೂರಜ್ ಹಾಗೂ ಅಭಿಜ್ಞಾ, ಸಿಂಹವಾಗಿ ಆಕಾಶ್, ಬಲರಾಮನಾಗಿ ಶಶಾಂಕ ಮೈರ್ಕಳ, ನಾರದ ಮತ್ತು ಜಾಂಬವತಿಯಾಗಿ ಅಭಿಜ್ಞಾ ಭಟ್, ಕೃಷ್ಣನಾಗಿ ಕಿಶನ್ ಅಗ್ಗಿತ್ತಾಯ, ಜಾಂಬವಂತನಾಗಿ ನಂದಕಿಶೋರ್ ಮವ್ವಾರು, ವಿಷ್ಣುವಾಗಿ ಹರ್ಷ ಪ್ರಸಾದ್ ಪುತ್ತಿಗೆ, ಲಕ್ಷ್ಮಿಯಾಗಿ ಶರಣ್ಯ ಕುಂಟಿಕಾನ, ಸುದರ್ಶನನಾಗಿ ವಿದ್ಯಾ ಕುಂಟಿಕಾನಮಠ, ದೇವೇಂದ್ರನಾಗಿ ಶ್ರೀಹರಿ ಮವ್ವಾರು, ಚಂಡಾಸುರನಾಗಿ ಶ್ರವಣ್, ಶತ್ರುಪ್ರಸೂದನನಾಗಿ ಶ್ರೀಶ ಕುಮಾರ ಪಂಜಿತ್ತಡ್ಕ ಪಾತ್ರಗಳಿಗೆ ಜೀವ ತುಂಬಿದರು.
ಭಾಗವತರಾಗಿ ವಾಸುದೇವ ಕಲ್ಲೂರಾಯ ಹಾಗೂ ಕಾವ್ಯಶ್ರೀ ಆಜೇರು, ಚೆಂಡೆಯಲ್ಲಿ ರಾಂಪ್ರಕಾಶ್ ಕಲ್ಲೂರಾಯ ಮದ್ದಳೆಯಲ್ಲಿ ಅಮೋಘ, ಚಕ್ರತಾಳದಲ್ಲಿ ಯಕ್ಷಗಾನಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಹಾಗೂ ಉದನೇಶ್ ಕುಂಬ್ಳೆ ನೈಪುಣ್ಯ ಪ್ರದರ್ಶಿಸಿದರು. ನೇಪಥ್ಯದಲ್ಲಿ ಕೇಶವ ಆಚಾರ್ಯ ಕಿನ್ಯ, ಮೋಹನ ಕೊಕ್ಕರ್ಣೆ, ಗಿರೀಶ ಕುಂಪಲ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod Crime News: ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಮೂವರ ಬಂಧನ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.