ಯು.ಡಿ.ಎಫ್. ಅಲೆ : ಎಡರಂಗದ ಕೋಟೆ ಕುಸಿತ, ಮತ ಸೋರಿಕೆ
Team Udayavani, May 25, 2019, 6:07 AM IST
ಕಾಸರಗೋಡು: ಸಿಪಿಎಂ ನೇತೃತ್ವದ ಎಡರಂಗದ ಕೋಟೆಯೆಂದೇ ಪರಿಗಣಿಸಲ್ಪಟ್ಟಿದ್ದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿಯ ಗೆಲುವು ಸಾಧಿಸಿದ ಐಕ್ಯರಂಗದ ಕಾಂಗ್ರೆಸ್ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ 35 ವರ್ಷಗಳ ಎಡರಂಗದ ಅಧಿಪತ್ಯವನ್ನು ಕೊನೆಗೊಳಿಸಿದ್ದಾರೆ. ಇದೇ ವೇಳೆ ಭದ್ರಕೋಟೆಯಲ್ಲಿ ಎಡರಂಗದ ಭಾರೀ ಪ್ರಮಾಣದ ಮತ ಸೋರಿಕೆ ಉಂಟಾಗಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 7 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಐದರಲ್ಲೂ ಎಡರಂಗದ ಶಾಸಕರಿದ್ದಾರೆ. ಪಕ್ಷದ ಗ್ರಾಮವೆಂದೇ ಕರೆಯಲ್ಪಡುವ ಕಣ್ಣೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಾದ ಕಲ್ಯಾಶೆÏàರಿ ಮತ್ತು ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲೂ ಎಡರಂಗ ಕುಸಿದಿದ್ದು ಅಚ್ಚರಿ ಹುಟ್ಟಿಸಿದೆ. 35,000 ಮತಗಳ ಮುನ್ನಡೆ ನಿರೀಕ್ಷಿಸಿದ್ದ ಕಲ್ಯಾಶೆÏàರಿಯಲ್ಲಿ ಎಡರಂಗಕ್ಕೆ ಕೇವಲ 13,694 ಮತಗಳನ್ನು ಮಾತ್ರವೇ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ಎಡರಂಗದ ಪಿ. ಕರುಣಾಕರನ್ 22,782 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದರು. 2016ರಲ್ಲಿ ನಡೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಎಡರಂಗದ ಅಭ್ಯರ್ಥಿ 42,891 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಎಡರಂಗದ ಇನ್ನೊಂದು ಭದ್ರಕೋಟೆಯಾದ ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗದ ನಿರೀಕ್ಷೆ ಹುಸಿಯಾಯಿತು. ಈ ಕ್ಷೇತ್ರದಲ್ಲಿ ಕೇವಲ 1,899 ಮತಗಳ ಮುನ್ನಡೆ ಗಳಿಸಲು ಸಾಧ್ಯವಾಯಿತು. 2014 ರ ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿ ಸ್ಪರ್ಧಿಸಿದ ಪಿ.ಕರುಣಾಕರನ್ ವಿರುದ್ಧ ಅಲೆ ಇದ್ದಾಗಲೂ ಇಲ್ಲಿ ಎಡರಂಗ 3,451 ಮತಗಳ ಮುನ್ನಡೆಯನ್ನು ಸಾಧಿಸಿದ್ದರು. 2016ರಲ್ಲಿ ನಡೆದ ವಿಧಾನಸಭಾ ಕ್ಷೇತ್ರದಲ್ಲಿ ಈ ಕ್ಷೇತ್ರದಲ್ಲಿ ಎಡರಂಗ 16,959 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು.
ಸಚಿವ ಇ. ಚಂದ್ರಶೇಖರನ್ ಗೆಲುವು ಸಾಧಿಸಿದ್ದ ಕಾಂಞಂಗಾಡ್ ವಿಧಾನಸಭಾ ಕ್ಷೇತ್ರದಲ್ಲಿಯೂ ಎಡರಂಗದ ನಿರೀಕ್ಷೆಗಳೆಲ್ಲ ಹುಸಿಯಾಯಿತು. ಈ ಕ್ಷೇತ್ರದಲ್ಲಿ ಕೇವಲ 2,284 ಮತಗಳ ಮುನ್ನಡೆಯನ್ನು ಮಾತ್ರವೇ ಗಳಿಸಲು ಕೆ.ಪಿ. ಸತೀಶ್ಚಂದ್ರನ್‌ಗೆ ಸಾಧ್ಯವಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಿ.ಕರುಣಾಕರನ್ 7,715 ಮತಗಳ ಮುನ್ನಡೆಯನ್ನು ಸಾಧಿಸಿದ್ದರು. 2016ರಲ್ಲಿ ನಡೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಇ.,ಚಂದ್ರಶೇಖರನ್ 26,011 ಮತಗಳ ಮುನ್ನಡೆಯ ಜಯ ದಾಖಲಿಸಿದ್ದರು.
ಸಿಪಿಎಂ ಆರೋಪಿ ಸ್ಥಾನದಲ್ಲಿರುವ ಅವಳಿ ಕೊಲೆ ಪ್ರಕರಣ ನಡೆದ ಕಲೊÂàಟ್ ಒಳಗೊಂಡ ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಹಿಂಸಾ ರಾಜಕೀಯವನ್ನು ತಿರಸ್ಕರಿಸಿದ ಮತದಾರರು ಐಕ್ಯರಂಗಕ್ಕೆ ನಿರೀಕ್ಷೆಗಿಂತ ಅಧಿಕ ಮುನ್ನಡೆ ತಂದುಕೊಟ್ಟಿ ದ್ದಾರೆ. ಈ ಕ್ಷೇತ್ರದಲ್ಲಿ ಯುಡಿಎಫ್ ಮುನ್ನಡೆ 8,937 ಆಗಿತ್ತು ಎಂಬುದು ಅಚ್ಚರಿಗೆ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಶಾಸಕರು ಸಿಪಿಎಂನ ಕುಂಞಿರಾಮನ್ ಆಗಿದ್ದಾರೆ. ಆದರೂ ಸಿಪಿಎಂ ಇಲ್ಲಿ ನೆಲೆ ಕಳೆದುಕೊಂಡಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ. ಸಿದ್ದಿಕ್ ತೀವ್ರ ಪೈಪೋಟಿ ನೀಡಿದ್ದರೂ ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂನ ಪಿ. ಕರುಣಾಕರನ್ 835 ಮತಗಳ ಮುನ್ನಡೆಯನ್ನು ಉಳಿಸಿ ಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಡರಂಗ 3,832 ಮತಗಳ ಅಂತರ ದಿಂದ ಗೆಲುವು ಸಾಧಿಸಿತ್ತು. ಈ ಮುನ್ನಡೆ ಯನ್ನು ಕಾಯ್ದುಕೊಂಡದ್ದು ಬಲಿಷ್ಠ ಅಭ್ಯರ್ಥಿಯಾಗಿದ್ದ ಕೆ.ಸುಧಾಕರನ್ ವಿರುದ್ಧ ಎಂಬುದು ಗಮನಾರ್ಹ.
ಯುಡಿಎಫ್‌ನ ಕೋಟೆಯಾಗಿರುವ ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಗಿಂತ ಇಮ್ಮಡಿ ಮತಗಳ ಮುನ್ನಡೆಯನ್ನು ಕಾಯ್ದುಕೊಳ್ಳಲು ರಾಜ್‌ಮೋಹನ್ ಉಣ್ಣಿತ್ತಾನ್‌ಗೆ ಸಾಧ್ಯವಾಯಿತು. ಈ ಎರಡೂ ಕ್ಷೇತ್ರಗಳಲ್ಲಿ ಎಡರಂಗ ಮೂರನೇ ಸ್ಥಾನದಲ್ಲಿತ್ತು. ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನದಲ್ಲಿದ್ದರು. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ 23,160 ಮತಗಳ ಮುನ್ನಡೆಯನ್ನು ಪಡೆದಿದೆ. ಕಳೆದ ಲೋಕಸಭಾ ಚುನಾವಣೆ ಯಲ್ಲಿ ಯುಡಿಎಫ್ 13190 ಮತಗಳ ಮುನ್ನಡೆಯನ್ನು ಸಾಧಿಸಿತ್ತು. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ 11,113 ಮತಗಳ ಮುನ್ನಡೆಯನ್ನು ಪಡೆದಿದೆ. ಕಳೆದ ಬಾರಿ ಕೇವಲ 5,828 ಆಗಿತ್ತು. ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಕೇವಲ 89 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು ಎಂಬುದು ಗಮನಾರ್ಹ.
ಇದೇ ವೇಳೆ ಪಯ್ಯನ್ನೂರು ವಿಧಾನಸಭಾ ಕ್ಷೇತ್ರ ಮಾತ್ರ ಎಲ್‌ಡಿಎಫ್‌ನ ಕೈಬಿಡಲಿಲ್ಲ. ನಿರೀಕ್ಷೆ ಹುಸಿಯಾಗಲಿಲ್ಲ. ಇಲ್ಲಿ 35,000 ಮತಗಳ ಮುನ್ನಡೆ ಸಾಧಿಸಬಹುದೆಂದು ಲೆಕ್ಕ ಹಾಕಲಾಗಿದ್ದರೂ 26,131 ಮತಗಳನ್ನು ಪಡೆಯಿತು. ಕಳೆದ ಬಾರಿಗಿಂತ ಸುಮಾರು ಎರಡೂವರೆ ಸಾವಿರ ಮತಗಳಷ್ಟು ಕಡಿಮೆಯಾಗಿದೆ. 2014 ರಲ್ಲಿ 28,142 ಮತಗಳ ಮುನ್ನಡೆಗಳಿಸಿತ್ತು. ಆದರೆ ಕಳೆದ ಅಂದರೆ 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಡರಂಗದ ಅಭ್ಯರ್ಥಿ 40,263 ಅಂತರದಿಂದ ಗೆಲುವು ಸಾಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.