ಮಂಜೇಶ್ವರ ಬ್ಲಾಕ್ ಕಾಂಗ್ರೆಸ್‌ನಿಂದ ತಾಲೂಕು ಕಚೇರಿಗೆ ಜಾಥಾ
Team Udayavani, Mar 31, 2017, 1:48 PM IST
ಮಂಜೇಶ್ವರ: ಕೇರಳವು ತನ್ನ ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಬರಗಾಲ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಪರಿಹಾರ ಒದಗಿಸಬೇಕಾದ ಸರಕಾರ ದೀರ್ಘ ನಿದ್ರೆಯಲ್ಲಿ ಮುಳುಗಿದೆಯೆಂದು ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್ ಟೀಕಿಸಿದ್ದಾರೆ.
ಹನಿ ನೀರಿಲ್ಲದೆ ಜನತೆ ಸಂಕಷ್ಟ ಪಡುತ್ತಿರುವಾಗ ಮಂತ್ರಿಗಳು ಅನಗತ್ಯ ವಿವಾದಗಳನ್ನು ಸೃಷ್ಟಿಸುವ ತವಕದಲ್ಲಿದ್ದಾರೆ. ಕೊಳವೆ ಬಾವಿ ಕೊರೆಯಲು ನಿಯಂತ್ರಣ ಹೇರಿದ ಸರಕಾರವು ಕುಡಿಯುವ ನೀರು ಒಗಗಿಸಲು ಮಾರ್ಚ್ ಆಂತ್ಯದ ವರೆಗೂ ಮುಂದಾಗದಿರುವುದು ಆಕ್ಷೇಪಾರ್ಹ. ನದಿ ನೀರು ಬಳಸಿ ಕೃಷಿ ನಡೆಸುವುದಕ್ಕೂ ಈ ಸರಕಾರ ಅಡ್ಡಿಪಡಿಸುತ್ತಿದೆ. ನದಿ ನೀರು ಬಳಸಿ ಕೃಷಿ ನಡೆಸಲು ಪ್ರೋತ್ಸಾಹಿಸುವ ಬದಲು ಕಿರುಕುಳ ನೀಡುವುದು ಅನ್ಯಾಯವಾಗಿದ ಎಂದರು.
ಸರಕಾರವು ಕೃಷಿಕರಿಗೆ ಪರ್ಯಾಯ ನೀರಾವರಿ ವ್ಯವಸ್ಥೆ ಮಾಡಿ ಈ ನಿಯಂತ್ರಣ ಗಳನ್ನು ತಂದಿದ್ದರೆ ಒಪ್ಪಿಕೊಳ್ಳಬಹುದಾಗಿತ್ತು. ಆಧಿಕಾರದ ಅಹಂಕಾರದಲ್ಲಿ ದಿನಕ್ಕೊಂದು ಕಾನೂನು ರೂಪಿಸುವ ಈ ಸರಕಾರವು ಜನತೆಗೆ ಹೊರೆಯಾಗಿ ಮಾರ್ಪಟ್ಟಿದೆ. ಮಾರಕ ಎಂಡೋಸಲ್ಫಾನ್ ಪ್ರಯೋಗದ ಬಲಿಪಶುಗಳಾಗಿ ಜೀವತ್ಛವಗಳಂತೆ ಕಾಳಕಳೆಯುತ್ತಿರುವ ಜನತೆಯ ಹೆಸರಿನಲ್ಲಿ ರಾಜಕೀಯ ಲಾಭ ಪಡೆದು ಅಧಿಕಾರಕ್ಕೇರಿದ ಸರಕಾರವು ಆ ಬಡಪಾಯಿಗಳನ್ನೂ ಮರೆತು ವಂಚನೆ ಎಸಗಿದೆ. ಜಿಲ್ಲೆಯ ಅಭಿವೃದ್ಧಿಯಲ್ಲೂ ಸರಕಾರ ಮಲತಾಯಿ ಧೋರಣೆ ಮುಂದುವರಿಯುತ್ತಿದೆ. ಭೀಕರ ಕ್ಷಾಮಕ್ಕೆ ಸಮಾನವಾದ ಪರಿಸ್ಥಿತಿ ಜಿಲ್ಲೆಯಲ್ಲಿ ಉದ್ಭವಿಸಿದ್ದು. ಅಪಾರ ಕೃಷಿ ಹಾನಿ ಸಂಭವಿಸಿದೆ. ಪುಟ್ಟ ಮಗುವಿನಿಂದ ತೊಡಗಿ ಮುತ್ತಜ್ಜಿ ಪ್ರಾಯದ ಸ್ತ್ರೀ ಸಮುದಾಯ ಕಿರುಕುಳಕ್ಕೊಳಗಾಗುತ್ತಿರುವುದು ನಿತ್ಯ ವಾರ್ತೆಗಳಾಗಿವೆ. ಪೊಲೀಸ್ ವ್ಯವಸ್ಥೆ ಅಪಹಾಸ್ಯಕ್ಕೀಡಾಗಿದೆ. ಜನಹಿತವನ್ನು ಮರೆತು ದಾಷ್ಟéìದ ಆಡಳಿತ ನಡೆಸಿದರೆ ಸರಕಾರವು ಪ್ರತಿಭಟನೆಗಳ ಸರಣಿಯನ್ನೇ ಎದುರಿಸ ಬೇಕಾದೀತು ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.
ಎಂಡೋಸಲ್ಫಾನ್ ಪೀಡಿತರಿಗೆ ಸಹಾಯಹಸ್ತ ನೀಡುವಲ್ಲಿ ಸರಕಾರದ ವೈಫಲ್ಯ ಬರಪರಿಹಾರ ಕಾರ್ಯಗಳನ್ನು ನಡೆಸುವಲ್ಲಿ ಸರಕಾರ ಉದಾಸೀನ ಧೋರಣೆಗಳನ್ನು ಪ್ರತಿಭಟಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್‌ನ ಸಮಿತಿಯ ಆಶ್ರಯದಲ್ಲಿ ಮಂಜೇಶ್ವರ ತಾಲೂಕು ಕಚೇರಿ ಮುಂದೆ ನಡೆಸಿದೆ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಕಾಂಗ್ರೆಸ್ ಅಧ್ಯಕ್ಷರಾದ ಸತ್ಯನ್ ಸಿ. ಉಮ್ಮಳ. ಸತ್ಯನಾರಾಯಣ ಕಲ್ಲೂರಾಯ, ಮಜಾಲು ಮೊಹಮ್ಮದ್, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಯಾದ ಹಮೀದ್ ಕೋಡಿಯಡ್ಕ, ದಾಮೋದರ ಮಾಸ್ತರ್, ಹಮೀದ್ ಕೋಡಿಯಡ್ಕ, ಇಬ್ರಾಹಿಂ ಐಆರ್ ಡಿಸಿ, ಸದಾಶಿವ ಕೆ. ಗುರುವಪ್ಪ ಮಂಜೇಶ್ವರ, ನವೀನ್ ಮಂಗಲ್ಪಾಡಿ, ಓಂ ಕೃಷ್ಣ, ನಾಗೇಶ ಮಂಜೇಶ್ವರ ಸದಾಶಿವ ಕೆ.ಜೆ. ಮೊಹಮ್ಮದ್, ರಂಜಿತ್ ಮಂಜೇಶ್ವರ, ಫ್ರಾನ್ಸಿಸ್, ಜನಪ್ರತಿನಿಧಿಗಳಾದ ಮಮತಾ ದಿವಾಕರ, ಶಂಷಾದ್ ಶುಕೂರ್, ಶಶಿಕಲಾ, ಸುನಿತಾ ಡಿ’ಸೋಜಾ, ಪ್ರಸಾದ್ ರೈ, ಹೇಮಲತಾ, ಚಂದ್ರಾವತಿ ಸೀತಾ ಡಿ., ಯುವ ಕಾಂಗ್ರೆಸ್ ಮುಖಂಡರಾದ ಶರೀಫ್ ಅರಿಬೈಲು, ಇಕ್ಬಾಲ್ ಕಳಿಯೂರು, ಶರ್ಮಿಳಾ ಡಿ’ಸೋಜಾ, ಝಕರಿಯಾ, ಇರ್ಷಾದ್ ಮಂಜೇಶ್ವರ, ಹಮೀದ್ ಕಣಿಯೂರು, ಸುಧಾಕರ ಉಜಿರೆ ಮುಂತಾದವರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Madikeri: ದೇಗುಲದಲ್ಲಿ ಸಮಾನತೆಯೇ ಉದ್ದೇಶ ; ಕಟ್ಟೆಮಾಡಿನ ಶ್ರೀ ಮಹಾ ಮೃತ್ಯುಂಜಯ ವಿವಾದ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Kodagu: ಯೋಧ ದಿವಿನ್ ಪಂಚಭೂತಗಳಲ್ಲಿ ಲೀನ
Kasaragod ಅಪರಾಧ ಸುದ್ದಿಗಳು: ಅಂಗಡಿಗೆ ಲಾರಿ ಢಿಕ್ಕಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.