ಅನಧಿಕೃತ ಕಬ್ಬಿಣ ಸಲಕರಣೆ,ವೆಲ್ಡಿಂಗ್: ಆಕ್ರೋಶ
Team Udayavani, Mar 26, 2019, 6:30 AM IST
ಪೆರ್ಲ: ಕಾಸರಗೋಡು ಜಿಲ್ಲೆಯ ಎಣ್ಮಕಜೆ, ಬದಿಯಡ್ಕ, ಚೆಂಗಳ, ಕುಂಬಾxಜೆ, ಪುತ್ತಿಗೆ ಮೊದಲಾದ ಗ್ರಾಮ ಪಂಚಾಯಥ್ ವ್ಯಾಪ್ತಿಗಳ ಹಲವುೆ ಕಡೆಗಳಲ್ಲಿ ಅನಧಿಕೃತವಾಗಿ ಕಬ್ಬಿಣ ಉತ್ಪನ್ನಗಳ ತಯಾರಿ ಘಟಕಗಳ ಕಾರ್ಯಾಚರಣೆಯಿಂದ ಸರಕಾರಿ ಅಂಗೀಕೃತ ,ಪರವಾಣಿಗೆ ಇದ್ದೂ ಸರಕಾರಕ್ಕೆ ತೆರಿಗೆ ಪಾವತಿಸಿ ಕಾರ್ಯಾಚರಿಸುವ ಉದ್ದಿಮೆದಾರರಿಗೆ ಹೊಡೆತ ಬಿದ್ದು ನಷ್ಟವಾಗುತ್ತಿರುವ ಆರೋಪ ಕೇಳಿ ಬಂದಿದೆ.
ಅನಧಿಕೃತ ಸಂಚಾರಿ ವೆಲ್ಡಿಂಗ್ ಉದ್ಯಮ ಕಾರ್ಯಾಚರಣೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬದಿಯಡ್ಕ ವಲಯ ಫೇಬ್ರಿಕೇಶನ್ ಮತ್ತು ಇಂಜಿನಿಯರಿಂಗ್ ಯುನಿಟ್ ಅಸೋಸಿಯೇಷನ್ ವಲಯಾಧ್ಯಕ್ಷ ರಾಮಕೃಷ್ಣ ರೈ,ಖಜಾಂಜಿ ವಿಲ್ಫೆÅಡ್ ಡಿಸೋಜಾ,ಜತೆಕಾರ್ಯದರ್ಶಿ ನವೀನ್ ಕುಮಾರ್,ಸದಸ್ಯರಾದ ವಸಂತ ಕುಮಾರ್,ವಿಜಯ ಕುಮಾರ್,ಗಿರೀಶ್ ರೈ,ಅಶೋಕ್ ಕುಮಾರ್ ನೇತೃತ್ವದಲ್ಲಿ ಎಣ್ಮಕಜೆ ಗ್ರಾ.ಪಂ.ಕಾರ್ಯದರ್ಶಿ ಅವರಿಗೆ ಮನವಿ ನೀಡಿ ಆಗ್ರಹಿಸಿದರು.ಮನವಿ ಸ್ವೀಕರಿಸಿದ ಅವರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಅಧಿಕೃತ ಉದ್ದಿಮೆದಾರರಿಗೆ ಕೆಲಸವಿಲ್ಲದಿರುವ ಪರಿಸ್ಥಿತಿ!
ಈ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸರಕಾk ದಿಂದ ಅಂಗೀಕಾರ ಪಡೆಯದೆ,ಯಾವುದೇ ಮಾನದಂಡ ಗಳನ್ನು ಪಾಲಿಸದೆ ಗ್ರಾ.ಪಂ.ಪರವಾಣಿಗೆ,ದಾಖಲೆ ಇಲ್ಲದೆ ಅನಧಿಕೃತ ವೆಲ್ಡಿಂಗ್ ಘಟಕಗಳು ತಲೆಯೆ ತ್ತಿದ್ದು ಇದರಿಂದ ಅಧಿಕೃತ ಉದ್ದಿಮೆದಾರರಿಗೆ ಕೆಲಸವಿಲ್ಲದಿರುವ ಪರಿಸ್ಥಿತಿ ಉಂಟಾಗಿದೆ.ಕಾರ್ಮಿಕರಿಗೆ ವೇತನ ಪಾವತಿ,ಕಟ್ಟಡ ಬಾಡಿಗೆ,ವಿದ್ಯುತ್ ಬಿಲ್ ಮೊದಾಲದವುಗಳನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಉದ್ದಿಮೆದಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.