ಉಣ್ಣಿತ್ತಾನ್‌ಗೆ ಭರ್ಜರಿ ಗೆಲುವು
ಎಲ್‌ಡಿಎಫ್ ಕೋಟೆಗೆ ಯುಡಿಎಫ್ ಲಗ್ಗೆ
Team Udayavani, May 24, 2019, 6:11 AM IST
ಕಾಸರಗೋಡು: ಭಾರೀ ಕುತೂಹಲ ಮೂಡಿಸಿದ 17ನೇ ಲೋಕಸಭಾ
ಚುನಾವಣೆಯಲ್ಲಿ ಕೇರಳ ಆಶ್ಚರ್ಯಕರ ರೀತಿಯ ಫಲಿತಾಂಶದ ಮೂಲಕ ರಾಷ್ಟ್ರದ ಗಮನ ಸೆಳೆದಿದೆ. ರಾಜ್ಯ ಆಡಳಿತ ಚುಕ್ಕಾಣಿ ಹಿಡಿದಿರುವ ಎಡರಂಗವನ್ನು ಸಂಪೂರ್ಣ ಮಣಿಸಿದ ಪ್ರಜಾಕೋಟಿ ಯುಡಿಎಫ್ ಅಭ್ಯರ್ಥಿಗಳನ್ನು ಬಹುಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ದಾಖಲೆ ಬರೆದಿದ್ದಾರೆ. ಜತೆಗೆ ಗಡಿನಾಡು ಕಾಸರಗೋಡನ್ನು ಹಲವು ದಶಕಗಳಿಂದ ತಮ್ಮ ಅಂಕೆಯಲ್ಲಿರಿಸಿದ್ದ ಎಡರಂಗ ತನ್ನ ಸ್ಥಾನ ಕಳಕೊಂಡಿದ್ದು, ಯುಡಿಎಫ್‌ನ ನಿಚ್ಚಳ ಗೆಲುವು ಸಾಧಿಸಿದೆ.
ಕಾಸರಗೋಡು ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಕಾಂಗ್ರೆಸ್‌ನ ರಾಜ್‌ಮೋಹನ್ ಉಣ್ಣಿತ್ತಾನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಎಲ್‌ಡಿಎಫ್‌ನ ಸಿಪಿಎಂ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್ ಅವರನ್ನು 40,438 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಉಣ್ಣಿತ್ತಾನ್ 47,4961 ಮತಗಳನ್ನು ಪಡೆದುಕೊಂಡಿದ್ದರೆ, ಸತೀಶ್ಚಂದ್ರನ್ 4,34,523 ಮತ ಪಡೆದುಕೊಂಡಿದ್ದಾರೆ. ಎನ್‌ಡಿಎ ಅಭ್ಯರ್ಥಿ ಬಿಜೆಪಿಯ ರವೀಶ ತಂತ್ರಿ ಕುಂಟಾರು 1,76,049 ಮತಗಳನ್ನು ಪಡೆದು ತೃತೀಯ ಸ್ಥಾನದಲ್ಲಿ ತೃಪ್ತಿ ಪಡಬೇಕಾಯಿತು.
2014ರ ಲೋಕಸಭೆ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಲ್ಲಿ ಸಿಪಿಎಂನ ಪಿ.ಕರುಣಾಕರನ್ 3,84,964 ಮತ ಪಡೆದು 6,921 ಮತಗಳ ಅಂತರದಿಂದ ಗೆಲುವು ಸಾ ಧಿಸಿದ್ದರು. ಕಾಂಗ್ರೆಸ್‌ನ ಟಿ. ಸಿದ್ದಿಕ್ 3,78,043 ಮತಗಳನ್ನು, ಬಿಜೆಪಿಯ ಕೆ. ಸುರೇಂದ್ರನ್ 1,72,826 ಮತಗಳನ್ನು ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.