ಸಾಕಾರಗೊಳ್ಳದ ವೀರಮಲೆ ಪ್ರವಾಸಿ ಯೋಜನೆ


Team Udayavani, Jul 14, 2017, 2:15 AM IST

VEERAMALE.jpg

ಕಾಸರಗೋಡು: ಚಾರಣಿಗರ ಸ್ವರ್ಗವೆಂದೇ ಖ್ಯಾತಿ ಪಡೆದಿರುವ ವೀರಮಲೆಯ ಪ್ರವಾಸಿ ಯೋಜನೆ ಕಡತದಲ್ಲೇ ಉಳಿದಿದೆ. ಕೇರಳದ ಸಚಿವರು ವೀರಮಲೆ ಪ್ರದೇಶವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದೆಂದು ಘೋಷಿಸಿದ್ದರೂ ಈ ವರೆಗೂ ಯಾವುದೇ ಪ್ರಾಥ ಮಿಕ ಪ್ರಕ್ರಿಯೆಯೂ ನಡೆದಿಲ್ಲ. ಸ್ಥಳೀಯರು ಬಹಳಷ್ಟು ನಿರೀಕ್ಷಿಸಿದ್ದರೂ ಯೋಜನೆ ಕಾರ್ಯಗತಗೊಳ್ಳದಿರುವುದರಿಂದ ನಿರಾಸೆಗೊಂಡಿದ್ದಾರೆ. ಸಚಿವರ ಘೋಷಣೆ ಗಾಳಿಗೋಪುರದಂತಾಗಿದೆ.

ಪ್ರಕೃತಿ ರಮಣೀಯ ಪ್ರದೇಶವಾಗಿರುವ ವೀರಮಲೆ ಚೆರ್ವತ್ತೂರು ಪಂಚಾಯತ್‌ನಲ್ಲಿ ನೆಲೆಗೊಂಡಿದ್ದು, ವೀರಮಲೆ ಬೆಟ್ಟವನ್ನು ಕಾರ್ಯಂ ಗೋಡು ನದಿ ಆವರಿಸಿಕೊಂಡಿದೆ. ಇದೇ ವೀರಮಲೆ 18 ನೇ ಶತಮಾನದಲ್ಲಿ ಡಚ್‌ರ ಪ್ರಮುಖ ಕೇಂದ್ರವಾಗಿತ್ತು. ರಾಣಿಪುರದಂತೆ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ವೀರಮಲೆ ಹಿಲ್‌ ಪ್ರವಾಸಿಗರ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಎಲ್ಲ ಸಾಧ್ಯತೆಗಳಿದ್ದು, ಈ ಬಗ್ಗೆ ಸಚಿವರು ಕೂಡ ಘೋಷಣೆ ಮಾಡಿದ್ದರು.

ಜನಪ್ರತಿನಿಧಿಗಳೂ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವೀರಮಲೆ ಬೆಟ್ಟಕ್ಕೆ ಹಲವು ಬಾರಿ ಭೇಟಿ ನೀಡಿ ಪ್ರವಾಸಿಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ಚರ್ಚಿಸಲ್ಪಟ್ಟಿದ್ದರೂ, ಅಂತಹ ಯಾವುದೇ ಯೋಜನೆ ಕೈಗೂಡದಿದ್ದಾಗ ವೀರಮಲೆ ಪ್ರವಾಸಿ ಕೇಂದ್ರ ಯೋಜನೆಯನ್ನು ಖಾಸಗಿ ಹೂಡಿಕೆಯಿಂದ ಅಭಿವೃದ್ಧಿಪಡಿಸುವುದಾಗಿ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಘೋಷಣೆ ಮಾಡಿದ್ದರು. ಆದರೆ ಸಚಿವರ ಘೋಷಣೆ ಕಡತದಲ್ಲೇ ಉಳಿದುಕೊಂಡಿದೆ. 

2016 ಡಿಸೆಂಬರ್‌ ತಿಂಗಳಲ್ಲಿ ಸಚಿವರು ವೀರಮಲೆಗೆ ಭೇಟಿ ನೀಡಿದ್ದರು. ಬಜೆಟ್‌ನ ಅಧಿವೇಶನಕ್ಕೆ ಮುನ್ನ ಸಚಿವರು ವೀರಮಲೆ ಭೇಟಿ ನೀಡಿ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಘೋಷಣೆ ಮಾಡಿದ್ದರಿಂದ ಸ್ಥಳೀಯರು ಬಹಳಷ್ಟು ನಿರೀಕ್ಷೆಯನ್ನು ಇರಿಸಿಕೊಂಡಿದ್ದರು. ಸಚಿವರ ಘೋಷಣೆಯ ಬಳಿಕ 6 ತಿಂಗಳು ಕಳೆದರೂ ಈ ವರೆಗೂ ಯಾವುದೇ ಪ್ರಸ್ತಾಪವಾಗಲೀ, ಪ್ರಾಥಮಿಕ ಪ್ರಕ್ರಿಯೆಯಾಗಲೀ ನಡೆದಿಲ್ಲ. ಇದರಿಂದ ಸಹಜವಾಗಿಯೇ ಸ್ಥಳೀಯರು ನಿರಾಸೆಗೊಂಡಿದ್ದಾರೆ.

ಸರಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು 
ಅರಣ್ಯ ಇಲಾಖೆಯ ಸ್ವಾಧೀನದಲ್ಲಿರುವ 70 ಎಕರೆ ಭೂಪ್ರದೇಶದಲ್ಲಿ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ವರ್ಷಗಳ ಹಿಂದೆಯೇ ಡಿ.ಟಿ.ಪಿ.ಸಿ. ಮುಖಾಂತರ ಯೋಜನೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿತ್ತು.

ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ತಕ್ಕುದಾದ ಅಭಿವೃದ್ಧಿ ಪಡಿಸಲಾಗುವು ದೆಂದು ಡಿಟಿಪಿಸಿ ಅಧಿಕಾರಿಗಳೊಂದಿಗಿದ್ದ ಜನಪ್ರತಿನಿಧಿಗಳು ಘೋಷಿಸಿದ್ದರು. ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಹಾಗು ಪ್ರವಾಸಿಗ ರನ್ನು ಆಕರ್ಷಿಸಲು ವಿವಿಧ ಸೌಕರ್ಯಗಳನ್ನು ಏರ್ಪಡಿಸುವುದಾಗಿ ತಿಳಿಸಲಾಗಿತ್ತು. 

ವೀರಮಲೆ ಬೆಟ್ಟದ ಮೇಲೆ ಮಕ್ಕಳ ಪಾರ್ಕ್‌, ಆಟಿಕೆಗಳ ಜೋಡಣೆ, ರೋಪ್‌ ವೇ, ತೇಜಸ್ವಿನಿ ಹೊಳೆಯಿಂದ ವೀರಮಲೆ ತಲುಪಲು ವಿಶೇಷ ರೀತಿಯ ಬೋಟ್‌ ಸರ್ವೀಸ್‌ ಆರಂಭಿಸುವುದು, ಈಜು ಕೊಳ ಮೊದಲಾದವುಗಳನ್ನು ಕಲ್ಪಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ ಎಲ್ಲ ಘೋಷಣೆ ಗಳೂ, ಯೋಜನೆಗಳೂ ಮರೆಯಾದವು. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ತಕ್ಕ ಪ್ರದೇಶ ವಾಗಿರುವ ವೀರಮಲೆ ಬೆಟ್ಟವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿದ್ದರೆ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿತ್ತು. ಆದರೆ ಅದು ಈ ವರೆಗೂ ಸಾಧ್ಯವಾಗಿಲ್ಲ. 

ಮಳೆಗಾಲದಲ್ಲಿ ನಿರಾಶ್ರಿತರಾಗುವ ಜನರಿಗಾಗಿ ಎರಡು ಕೇಂದ್ರಗಳನ್ನು ಈ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಈ ಕೇಂದ್ರಗಳು ಇದೀಗ ಸಮಾಜ ವಿದ್ರೋಹಿಗಳ ಅಟ್ಟಹಾಸ ಕೇಂದ್ರವಾಗಿ ಬದಲಾಗಿದೆ ಎಂಬುದಾಗಿ ಸ್ಥಳೀಯರು ಸಾರ್ವತ್ರಿಕವಾಗಿ ಆರೋಪಿಸುತ್ತಿದ್ದಾರೆ.

ಕಾಂಞಂಗಾಡ್‌ನಿಂದ ಸುಮಾರು 16 ಕಿ.ಮೀ. ದೂರದಲ್ಲೂ, ಬೇಕಲ ಕೋಟೆಯಿಂದ 29 ಕಿ.ಮೀ. ದೂರದಲ್ಲಿರುವ ಚೆರ್ವತ್ತೂರಿನ ವೀರಮಲೆ ಹಿಲ್‌ಪ್ರದೇಶಕ್ಕೆ ಹತ್ತಿರದ ರೈಲು ನಿಲ್ದಾಣ ಚೆರ್ವತ್ತೂರು ಆಗಿದೆ.

ಕಾಸರಗೋಡು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಸಾಧ್ಯತೆಯಿರುವ ಪ್ರದೇಶವಾಗಿರುವ ವೀರಮಲೆ ಬೆಟ್ಟ ಚಾರಣಿಗರ ಸ್ವರ್ಗವಾಗಿ ಪರಿವರ್ತಿಸಬಹುದು. ಅಲ್ಲದೆ ಬೇಕಲ ಕೋಟೆಯನ್ನು ಆಸ್ವಾದಿಸಲು ಬರುವ ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರನ್ನೂ ಇತ್ತ ಆಕರ್ಷಿಸಬಹುದಾಗಿದೆ. ಈ ಕಾರಣದಿಂದ ಈ ಬೆಟ್ಟ ಪ್ರದೇಶ ಅಭಿವೃದ್ಧಿ ಸಾಧ್ಯವಾದರೆ ಜಿಲ್ಲೆಯ ಆರ್ಥಿಕ ಸ್ಥಿತಿಯ ಮೇಲೂ ಉತ್ತಮ ಪರಿಣಾಮ ಬೀರಲಿದೆ. 

ಹೀಗಿರುವುದರಿಂದ ವೀರಮಲೆ ಪ್ರವಾಸಿ ಕೇಂದ್ರವನ್ನು ಶೀಘ್ರದಲ್ಲೇ ಅಭಿವೃದ್ಧಿ ಸಾಧ್ಯವಾ ಗಬೇಕು. ಈ ಮೂಲಕ ಸಚಿವರ ಘೋಷಣೆ ಸಾಕಾರಗೊಳ್ಳಬೇಕು. ಜನರ ಬಹಳ ನಿರೀಕ್ಷೆಯ ಪ್ರವಾಸಿ ಕೇಂದ್ರ ಸಾಕಾರಗೊಳ್ಳಬಹುದೇ ಎಂಬುದಾಗಿ ಕಾಸರಗೋಡಿನ ಜನತೆ ಎದುರು ನೋಡುತ್ತಿದ್ದಾರೆ.

– ಪ್ರದೀಪ್‌ ಬೇಕಲ್‌

ಟಾಪ್ ನ್ಯೂಸ್

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.