ಕಾಸರಗೋಡು ಉಪ್ಲೇರಿ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಆಶೀರ್ವಚನ
Team Udayavani, Apr 27, 2019, 1:05 PM IST
ಬದಿಯಡ್ಕ : ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಐದು ವರ್ಷಗಳಿಗೊಮ್ಮೆ ಜರಗುವ ಧರ್ಮ ಕೋಲೋತ್ಸವಕ್ಕೆ ಚಾಲನೆ ನೀಡಲಾಯಿತು. ಇದರಂಗವಾಗಿ ಕುಂಟಾಲು ಮೂಲೆ ಶ್ರೀ ಆದಿಶಕ್ತಿ ಅಯ್ಯಪ್ಪ ಮಂದಿರದ ಪರಿಸರದಿಂದ ನಡೆದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯನ್ನು ಪೆರುಮುಂಡ ಶಂಕರನಾರಾಯಣ ಭಟ್ ಉದ್ಘಾಟಿಸಿದರು.
ಮಂದಿರದ ಗುರುಸ್ವಾಮಿ ನಾರಾಯಣ ಮಣಿಯಾಣಿ, ಪದ್ಮನಾಭ ಮಣಿಯಾಣಿ ಉಪಸ್ಥಿತರಿದ್ದರು. ಬಳಿಕ ಸದಾನಂದ ಶೆಟ್ಟಿ ಕುದ್ವ ಉಗ್ರಾಣ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ದೈವಕ್ಕೆ ನೂತನ ಮೊಗ ಸಮರ್ಪಣೆ, ತಂಬಿಲ ಸೇವೆ, ಸೀಯಾಳಭಿಷೇಕವನ್ನು ಪ್ರತಿಷ್ಠಾ ಕರ್ಮಿ ಕೃಷ್ಣ ಬೆಳ್ಚಪ್ಪಾಡ ನೆರವೇರಿಸಿದರು. ಬಳಿಕ ಜರಗಿದ ಧಾರ್ಮಿಕ ಸಭೆಯನ್ನು ಬ್ರಹ್ಮ ಶ್ರೀ ವೇದಪ್ರವೀಣ ಪುರಸ್ಕೃತ ತಂತ್ರಿವರ್ಯರಾದ ಪುರೋಹಿತ ರತ್ನ ಬಿ.ಕೇಶವ ಆಚಾರ್ಯ ಉದ್ಘಾಟಿಸಿದರು. ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಡಾ.ಸದ್ಗುರು ಶ್ರೀ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಆಶೀರ್ವಚನ ನೀಡಿ ಯಾವುದೇ ಆಚರಣೆ ಆಡಂಬರದ ಪ್ರತೀಕವಾಗದೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಪಡಿಯಚ್ಚಾಗಿರಬೇಕು. ಹಿಂದಿನಂತೆ ಸರಳತೆಯಿಂದ ಕೂಡಿದ ಆಚಾರ ಅನುಷ್ಠಾನಗಳನ್ನು ನಮ್ಮ ಮಕ್ಕಳಿಗೆ ಕಲಿಸಬೇಕೇ ಹೊರತು ನಮ್ಮ
ಸಿರಿವಂತಿಕೆಯ ಪ್ರದರ್ಶನವಾಗಬಾರದು ಎಂದು ಹೇಳಿದರು.
ಸಂತೋಷ್ ಕುಮಾರ್ ಶೆಟ್ಟಿ ಬಾಕ್ರಬೈಲು ಸಭೆಯ ಅಧ್ಯಕ್ಷತೆ ವಹಿಸಿದರು. ಶಂಕರನಾರಾಯಣ ಭಟ್ ಕುಂಟಿಕಾನ, ಮೈರ್ಕಳ ನಾರಾಯಣ ಭಟ್, ಚೆನ್ನಪ್ಪ ಕುಲಾಲ್ ಎರುಗಲ್ಲು , ಅಶೋಕ್ ಕುಂಬಜೆ ಮೊದಲಾದವರು ಮಾತನಾಡಿದರು. ಉಪ್ಲೇರಿ ಮಂತ್ರ ಮೂರ್ತಿ ಗುಳಿಗ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಸ್ವಾಗತಿಸಿ ರಾಮ ನಾಯ್ಕ ಕುಂಟಾಲುಮೂಲೆ ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು. ಬಳಿಕ ಚಿರಂಜೀವಿ ಯಕ್ಷಗಾನ ಕಲಾ ಸಂಘ ಕುಂಟಾಲುಮೂಲೆ ಅವರಿಂದ ಶ್ರೀಕೃಷ್ಣ ಲೀಲಾರ್ಣವ ಎಂಬ ಯಕ್ಷಗಾನ ಪ್ರದರ್ಶನ, ಡಿ.ಡಿ.ಆರ್.ಬೆಳ್ಳಿಗೆ ಅವರಿಂದ ನೃತ್ಯ ವೈವಿಧ್ಯ ಹಾಗೂ ಬೈರನ ಬದ್ಕ್ ಎಂಬ ನಾಟಕ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.