ಉಪ್ಪಳ ಹೊಳೆ: ಅತಿ ಹೆಚ್ಚು ಹರಿಯುತ್ತಿದೆ ಕೊಳಚೆ, ತ್ಯಾಜ್ಯ
Team Udayavani, Oct 2, 2019, 5:04 AM IST
ಕಾಸರಗೋಡು: ಕೇರಳದಲ್ಲಿ ನಲ್ವತ್ತಕ್ಕೂ ಹೆಚ್ಚು ಹೊಳೆ, ತೊರೆಗಳಿವೆ. ಈ ಹೊಳೆಗಳ ಪೈಕಿ 21 ಹೊಳೆಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೊಳಚೆ ಹಾಗೂ ತ್ಯಾಜ್ಯ ರಾಶಿ ಹರಿಯುತ್ತಿದೆ ಎಂದು ರಾಷ್ಟ್ರೀಯ ಹರಿತ ಟ್ರಿಬ್ಯೂನಲ್ ವರದಿ ಮಾಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಉಪ್ಪಳ ಹೊಳೆಯಲ್ಲಿ ಅತ್ಯಂತ ಮಲಿನ ಗೊಂಡಿದೆ ಎಂದು ಬೊಟ್ಟು ಮಾಡಿದೆ.
ರಾಜ್ಯದ ಭಾರತ್‌ಪುಳ ಹೊಳೆ ಸಹಿತ 21 ಹೊಳೆಗಳು ಮಲಿನಗೊಂಡಿವೆ ಎಂದು ವರದಿಯಲ್ಲಿ ಹೇಳಿದ್ದು ಹೊಳೆಯಲ್ಲಿ ಕೊಳಚೆ, ತ್ಯಾಜ್ಯ ಹರಿಯುತ್ತಿರುವುದರಿಂದ ಕೇರಳ ರಾಜ್ಯ ಸರಕಾರಕ್ಕೆ 14 ಕೋಟಿ ರೂ. ದಂಡ ಹೇರಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಲಿನಗೊಂಡಿರುವ ಹೊಳೆಗಳ ಯಾದಿಯಲ್ಲಿ ತಿರುವನಂತಪುರದ ಕರಮನಯಾರ್ ಹೊಳೆ ಪ್ರಥಮ ಸ್ಥಾನದಲ್ಲಿದೆ. ಸಂರಕ್ಷಣೆ ನಡೆಸಿದರೆ ಹೊಳೆಗಳನ್ನು ರಕ್ಷಿಸಬಹುದಾದ ವಿಭಾಗದಲ್ಲಿ ನಾಲ್ಕನೇ ಮತ್ತು ಐದನೇ ಯಾದಿಯಲ್ಲಿ ಇತರ 20 ಹೊಳೆಗಳನ್ನು ಸೇರ್ಪಡೆಗೊಳಿಸಲಾಗಿದೆ.
ಹೊಳೆಯ ನೀರಿನಲ್ಲಿ ಆಕ್ಸಿಜನ್ ಪ್ರಮಾಣ ತಪಾಸಿಸಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿರುವ ಮಲಿನಗೊಂಡ ಹೊಳೆ ಎಂದು ಗುರುತಿಸಲಾಗುತ್ತದೆ. ಬಯೋಕೆಮಿಕಲ್ ಆಕ್ಸಿಜನ್ ಡಿಮಾಂಡ್(ಬಿ.ಒ.ಡಿ.) ತಪಾಸಣೆ ನಡೆಸಿ ಈ ತೀರ್ಮಾನಕ್ಕೆ ಬರುತ್ತಿದೆ. ನೀರಿನಲ್ಲಿ ಎಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಬೇಕು ಎಂಬುದನ್ನು ಈ ತಪಾಸಣೆಯಲ್ಲಿ ಲೆಕ್ಕಹಾಕಲಾಗುತ್ತಿದೆ.
ಶುದ್ಧ ಜಲವಾಗಿದ್ದಲ್ಲಿ ಬಿ.ಒ.ಡಿ. ತಪಾಸಣೆಯಲ್ಲಿ ಲೀಟರ್‌ನಲ್ಲಿ ಆಕ್ಸಿಜನ್‌ನ ಪ್ರಮಾಣ ಮೂರು ಮಿಲಿ ಗ್ರಾಂಗಿಂತಲೂ ಕಡಿಮೆಯಾಗಿರಬೇಕು. ಈ ಪ್ರಮಾಣಕ್ಕಿಂತ ಅಧಿಕವಾಗಿದ್ದಲ್ಲಿ ನೀರು ಮಲಿನಗೊಂಡಿದೆ ಎಂದು ಗುರುತಿಸಲಾಗುತ್ತದೆ. ಇದರಂತೆ ತಿರುವನಂತಪುರದ ಕರಮನಯಾರ್‌ನಲ್ಲಿ ಬಿ.ಒ.ಡಿ. ಪ್ರಮಾಣ ಲೀಟರ್‌ನಲ್ಲಿ 56 ಮಿಲಿ ಗ್ರಾಂ ಇದೆ. ಈ ಹೊಳೆಯಲ್ಲಿ ಆಕ್ಸಿಜನ್ ಲಭಿಸದೆ ಮೀನುಗಳು ಸತ್ತು ಹೋಗುವ ಸ್ಥಿತಿಯಲ್ಲಿವೆ.
ಭಾರತ್‌ಪುಳದಲ್ಲಿ 6.6 ಮಿಲಿ ಗ್ರಾಂ, ಕಡಂಬಯಾರ್, ಕೀಚೇರಿ, ಮಣಿಮಲ, ಪಂಬಾ, ಭವಾನಿ ಹೊಳೆಗಳಲ್ಲೂ ಇದೇ ಪ್ರಮಾಣದಲ್ಲಿದೆ. ಜೈವಿಕ-ರಾಸಾಯನಿಕ ಮಾಲಿನ್ಯ ತುಂಬಿ ಕೇರಳದ ಹೊಳೆಗಳನ್ನು ಮಲಿನಗೊಳಿಸುತ್ತಿದೆ ಎಂದು ವರದಿಯಲ್ಲಿ ಹೇಳಿದೆ. ಬಹುತೇಕ ಹೊಳೆಗಳಲ್ಲಿ ಕೋಳಿಫಾರಂ ಬ್ಯಾಕ್ಟೀರಿಯಾ ಪ್ರಮಾಣ ಅತ್ಯಂತ ಹೆಚ್ಚಿದೆ.
ಆಲುವಾ, ಎಲ್ಲೂರು, ಕಳಮಶೆÏàರಿಯಲ್ಲಿನ ರಾಸಾಯನಿಕ ವಸ್ತುಗಳ ಮಾಲಿನ್ಯ ಪೆರಿಯಾರ್‌ಗೆ ಬೆದರಿಕೆಯಾಗಿದೆ ಎಂದು ವರದಿಯಲ್ಲಿ ಸೂಚಿಸಿದೆ. ಹಲವು ಬಾರಿ ಮುನ್ನೆಚ್ಚರಿಕೆ ನೀಡಿದ್ದರೂ ಜೈವಿಕ ಹಾಗೂ ರಾಸಾಯನಿಕ ತ್ಯಾಜ್ಯ ಹೊಳೆಗಳಿಗೆ ಹರಿಯುತ್ತಿರುವುದು ಮುಂದುವರಿದಿದೆ. ಹೊಳೆಗಳು ಮಲಿನಗೊಳ್ಳುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು 2018ರಲ್ಲಿ ಟ್ರಿಬ್ಯೂನಲ್ ಸರಕಾರವನ್ನು ಒತ್ತಾಯಿಸಿತ್ತು. ಆದರೆ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರಕ್ಕೆ 14 ಕೋಟಿ ರೂ. ದಂಡ ಹೇರಿದೆ. ಹೊಳೆಗಳನ್ನು ಸಂರಕ್ಷಿಸಲು ಮಾಲಿನ್ಯಮುಕ್ತಗೊಳಿಸಲು ಕ್ರಮ ತೆಗೆದುಕೊಂಡು ಜಾರಿಗೆ ತಂದಲ್ಲಿ ದಂಡವನ್ನು ವಾಪಸು ಮಾಡಲಾಗುವುದೆಂದು ರಾಷ್ಟ್ರೀಯ ಹರಿತ ಟ್ರಿಬ್ಯೂನಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಯಾ ಯೋಜನೆ ಆವಿಷ್ಕರಿಸಲಾಗಿದೆ
ಮಲಿನಗೊಂಡಿರುವ ಹೊಳೆಗಳನ್ನು ಸಂರಕ್ಷಿಸಲು ಕ್ರಿಯಾ ಯೋಜನೆಯನ್ನು ಆವಿಷ್ಕರಿಸಲಾಗಿದೆ. ಕರಮನಯಾರ್ ಹೊಳೆಯನ್ನು ರಕ್ಷಿಸುವ ಯೋಜನೆ ಯನ್ನು ರಾಷ್ಟ್ರೀಯ ಹರಿತ ಟ್ರಿಬ್ಯೂನಲ್‌ಗೆ ನೀಡಲಾಗಿದೆ. ಇತರ ಹೊಳೆಗಳನ್ನು ಶೀಘ್ರವಾಗಿ ನೀಡಲಾಗುವುದು.
– ಡಾ|ಅಜಿತ್ ಹರಿದಾಸ್, ಚೆಯರ್‌ಮನ್, ಮಾಲಿನ್ಯ ನಿಯಂತ್ರಣ ಮಂಡಳಿ
ಮಲಿನಗೊಂಡ ಹೊಳೆಗಳು
ಕಾಸರಗೋಡು ಜಿಲ್ಲೆಯ ಉಪ್ಪಳ ಹೊಳೆ, ಕರಮನಯಾರ್, ಭಾರತ್‌ಪುಳ, ಕಡಂಬಯಾರ್, ಕೀಚೇರಿ, ಮಣಿಮಲ, ಪಂಬಾ, ಭವಾನಿ, ಚಿತ್ರಪ್ಪುಳ, ಕಡಲುಂಡಿ, ಕಲ್ಲಾಯಿ, ಕರುವನ್ನೂರು, ಕವ್ವಾಯಿ, ಕುಪ್ಪಂ, ಕುಟ್ಯಾಡಿ, ಮೇಪ್ರಾಲ್, ಪೆರಿಯಾರ್, ಪೆರುವಂಬ್, ಪುಳಯ್ಕಲ್, ರಾಮಪುರಂ, ತಿರೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.