ವಯೋವೃದ್ಧರ ನಿರ್ಲಕ್ಷ್ಯ ವಿರುದ್ಧ ವಾಹನ ಜಾಥಾ
ಸಾಮಾಜಿಕ ನ್ಯಾಯ ಇಲಾಖೆಯಿಂದ ಜಾಗೃತಿ
Team Udayavani, Jun 15, 2019, 6:00 AM IST
ಕಾಸರಗೋಡು: ಸಾಮಾಜಿಕ ನ್ಯಾಯ ಇಲಾಖೆ ವತಿಯಿಂದ ಪರ್ಯಟನೆ ನಡೆಸಿದ ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾ ಗಮನ ಸೆಳೆಯಿತು.
ಸಮಾಜದಲ್ಲಿ ವಯೋವೃದ್ಧರು ಅನುಭವಿಸುತ್ತಿರುವ ಕಿರುಕುಳ, ನಿರ್ಲಕ್ಷ್ಯ ಹೆಚ್ಚಳಗೊಳ್ಳುತ್ತಿರುವ ಸಂದರ್ಭ ಈ ಪಿಡುಗಿನ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಐ.ಸಿ.ಡಿಎಸ್.ನ ಸಹಕಾರದೊಂದಿಗೆ ಈ ವಾಹನ ಜಾಥಾ ನಡೆಯಿತು.
ಹಿರಿಯ ಪ್ರಜೆಗಳು ಎದುರಿಸು ತ್ತಿರುವ ಸಮಸ್ಯೆಗಳ ವಿರುದ್ಧ ಜಾಗೃತಿ ಮೂಡಿಸುವ ದಿನಾಚರಣೆ ಜೂ. 15ರಂದು ವಿಶ್ವದಾದ್ಯಂತ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಾಹನ ಪ್ರಚಾರ ನಡೆಸಿದೆ. ಈ ಗಂಭೀರ ಸಮಸ್ಯೆಯ ಕುರಿತು ಪರ್ಯಟನೆ ನಡೆಸುವ ಪ್ರದೇಶಗಳಲ್ಲಿ ಯುವ ಜನತೆಯನ್ನು ಪ್ರಧಾನವಾಗಿಸಿಕೊಂಡು ಪರಿಣತರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.
ತಮ್ಮ ಬದುಕಿನುದ್ದಕ್ಕೂ ಕುಟುಂಬದ ಸದಸ್ಯರಿಗಾಗಿ ದುಡಿದು ಬಸವಳಿದ ಜೀವ ವೃದ್ಧಾಪ್ಯದಲ್ಲಿ ವಿಶ್ರಾಂತ ಜೀವನ ನಡೆಸುವ ಸಂದರ್ಭ ನಿರ್ಲಕ್ಷÂದಂಥ ಪಿಡುಗಿಗೆ ಗುರಿಯಾಗುವುದು ಒಂದು ಸಾಮಾಜಿಕ ದುರಂತ. ಈ ದುರವಸ್ಥೆ ಬದಲಾಗಿ ಇವರಿಗೆ ಪ್ರೀತಿ, ವಿಶ್ವಾಸ ಸಹಿತ ಸುಖಮಯ ಬದುಕನ್ನು ಒದಗಿ ಸೋಣ ಎಂಬ ಸಂದೇಶದೊಂದಿಗೆ ಈ ಪರ್ಯಟನೆ ನಡೆದಿದೆ. ಜಿಲ್ಲೆಯ ಪ್ರಧಾನ ಕೇಂದ್ರಗಳಲ್ಲಿ ಈ ಪರ್ಯಟನೆ ಜರಗಿತು.ಮಂಜೇಶ್ವರ ಬ್ಲಾಕ್ ಪಂಚಾಯತ್ ಕಚೇರಿ ಆವರಣದಿಂದ ಪರ್ಯ ಟನೆ ಪ್ರಾರಂಭಿಸಿದ್ದ ಈ ಪರ್ಯಟನೆ ಕಾಲಿಕಡವಿನಲ್ಲಿ ಸಮಾರೋಪ ಗೊಂಡಿತು.
ಮಂಜೇಶ್ವರದಲ್ಲಿ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಹಸುರು ನಿಶಾನೆ ತೋರಿದರು. ಉಪಾಧ್ಯಕ್ಷೆ ಮಮತಾ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು.
ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಮಹಮ್ಮದ್ ಮುಸ್ತಫ, ಸದಸ್ಯರಾದ ಪ್ರಸಾದ್ ರೈ, ಹಸೀನಾ, ಸಾಯಿರಾ ಭಾನು, ಜತೆ ಬಿಡಿಒ ನೂತನ ಕುಮಾರಿ, ಎ.ಟಿ.ಶಶಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.