ಇಂದು ಪೆರಿಯಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮನ: ಸಕಲ ಸಿದ್ಧತೆ
Team Udayavani, Apr 29, 2018, 7:05 AM IST
ಕುಂಬಳೆ: ಕೇಂದ್ರ ವಿಶ್ವವಿದ್ಯಾಲಯ ಕೇರಳ ಕಾಸರಗೋಡು ಪೆರಿಯಕ್ಕೆ ಎ. 29ರಂದು ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಆಗಮಿಸ ಲಿದ್ದು ಇದರ ಪೂರ್ವಭಾವಿ ಅವ ಲೋಕನ ಸಭೆಯು ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಜರಗಿತು.
ಕಾಸರಗೋಡು ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು ಅವರ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಜರಗಿದ ಸಭೆಯಲ್ಲಿ ವಿವಿ ಉಪಕುಲಪತಿ ಡಾ| ಜಿ. ಗೋಪಕುಮಾರ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು. ದಿಲ್ಲಿಯಿಂದ ಏರ್‌ಫೋರ್ ಅಧಿಕಾರಿ ಆಗಮಿಸಿ ಜಿಲ್ಲಾಧಿಕಾರಿ ಮತ್ತು ವಿ.ವಿ. ಉಪಕುಲಪತಿ ಯವರೊಂದಿಗೆ ತೇಜಸ್ವಿನಿ ಹಿಲ್ಸ್‌ನಲ್ಲಿ ವಿಶೇಷವಾಗಿ ನಿರ್ಮಿಸಿದ ಹೆಲಿಪ್ಪಾಡ್‌ನ್ನು ವೀಕ್ಷಿಸಿ ಸುರಕ್ಷಾ ಸಮೀಕ್ಷೆ ನಡೆಸಿದರು. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ವಾಹನಗಳು ವಿಶ್ವವಿದ್ಯಾಲಯದ ಪ್ರಧಾನ ದ್ವಾರದ ಮೂಲಕವೇ ಸಂಚರಿಸಬೇಕು. ಸಮಾರಂಭದಲ್ಲಿ ಭಾಗವಹಿಸಲು ಪಾಸ್ ಹೊಂದಿದ್ದರೂ ತಮ್ಮ ಗುರುತಿನ ಚೀಟಿಯನ್ನು ಪ್ರತ್ಯೇಕ ತರಬೇಕು.ಮಾಧ್ಯಮ ಪ್ರತಿನಿಧಿಗಳ ಸಹಿತ ಪ್ರವೇಶ ಪಾಸ್ ಹೊಂದಿದವರು ಬೆಳಗ್ಗೆ 10 ಗಂಟೆಗೆ ಮುನ್ನ ಆಸೀನರಾಗಬೇಕೆಂದು ವಿನಂತಿಸಲಾಗಿದೆ.
ಉಪರಾಷ್ಟ್ರಪತಿಯವರು ಮಂಗ ಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ 10.20ಕ್ಕೆ ಪೆರಿಯ ವಿಶ್ವವಿದ್ಯಾಲಯದ ಹೆಲಿಪ್ಪಾಡ್ ಮೂಲಕ ಸಮಾರಂಭಕ್ಕೆ ಆಗಮಿಸಲಿದ್ದು 231 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ 8 ಅಕಾಡಮಿಕ್ ಸಮುಚ್ಚಯವನ್ನು ಉದ್ಘಾಟಿಸಿದ ಬಳಿಕ ಅಪರಾಹ್ನ 12 ಗಂಟೆಗೆ ದಿಲ್ಲಿಗೆ ಮರಳಲಿರುವರು.
ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠ ಕೆ.ಜಿ. ಸೈಮನ್ ಮಾತನಾಡಿ ಉಪರಾಷ್ಟ್ರಪತಿಯವರು ಆಗಮಿಸುವ ನಿಟ್ಟಿನಲ್ಲಿ ಬಿಗಿ ಕಾನೂನು ಕ್ರಮಕೈಗೊಳ್ಳಲಾಗುವುದು. ಅಲ್ಲಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. ಸಾಮಾ ಜಿಕ ಜಾಲತಾಣಗಳ ಮೂಲಕ ಯಾರಾ ದರೂ ಸುಳ್ಳು ಮಾಹಿತಿ ರವಾನಿಸಿದಲ್ಲಿ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.