ಪೆರಿಯ: ಸರಳತೆಯಿಂದ ಗಮನ ಸೆಳೆದ ಉಪರಾಷ್ಟ್ರಪತಿ


Team Udayavani, May 1, 2018, 7:35 AM IST

Untitled-1.jpg

ಕುಂಬಳೆ: ಕಾಸರಗೋಡು ಪೆರಿಯದ ಕೇಂದ್ರ ವಿಶ್ವವಿದ್ಯಾಲಯದ 231 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೃಷ್ಣ,
ಗೋದಾವರಿ,ಸಿಂದು,ನರ್ಮದಾ,ಬ್ರಹ್ಮಪುತ್ರ,ಗಂಗಾ,ಕಾವೇರಿ, ಗಂಗೋತ್ರಿ ಭಾರತದ ಪುಣ್ಯನದಿಗಳ ಹೆಸರಿನಲ್ಲಿ ನಿರ್ಮಿಸಿದ ನೂತನ ಅಕಾಡಮಿಕ್‌ ಕ್ಯಾಂಪಸ್‌ ಕಟ್ಟಡದ‌ ಉದ್ಘಾಟನೆಯನ್ನು ನೆರವೇರಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಎಲ್ಲರ ಗಮನ ಸೆಳೆದರು.

ವಿವಿಐಪಿಯಾಗಿದ್ದರೂ ಸೂಟು ಬೂಟು ಧರಿಸದೆ ಸರಳವಾಗಿ ಬಿಳಿ ಮುಂಡು ಬಿಳಿ ಶರ್ಟ್‌ ಧರಿಸಿ ಶ್ವೇತಾಂಬರರಾಗಿ ನಿರ್ದಿಷ್ಟ
ಸಮಯಕ್ಕಿಂತ ಅರ್ಧ ಗಂಟೆಗೆ ಮುನ್ನವೇ ಮಂಗಳೂರಿನಿಂದ ಭಾರತೀಯ ವಾಯು ಸೇನೆಯ ಎರಡು ಬೆಂಗಾವಲು ಹೆಲಿ
ಪಾಪ್ಟರ್‌ ಮೂಲಕ ತೇಜಸ್ವಿನಿ ಹಿಲ್ಸ್‌ನಲ್ಲಿ ಪ್ರತ್ಯೇಕವಾಗಿ ನಿರ್ಮಿಸಿದ ಹೆಲಿಪ್ಪಾಡ್‌ ಮೂಲಕ ಆಗಮಿಸಿದ ಉಪರಾಷ್ಟ್ರಪತಿಯವರನ್ನು ಕೇರಳದ ಬಂದರು ಸಚಿವ ಕಡನಪಳ್ಳಿ ರಾಮಚಂದ್ರನ್‌,ಲೋಕಸಭಾ ಸದಸ್ಯಪಿ.ಕರುಣಾಕರನ್‌,ವಿವಿ ಉಪಕುಲಪತಿ ಡಾ| ಜಿ.ಗೋಪಕುಮಾರ್‌ ಹೂಗುತ್ಛ ನೀಡಿ ಸ್ವಾಗತಿಸಿದರು.

ಬಳಿಕ ವಿಶೇಷ ನಿರ್ಮಿತ ಹವಾನಿಯಂತ್ರಿತ ಸಮಾರಂಭದ ಮಂಟಪದೊಳಗೆ ಆಗಮಿಸಿದ ಇವರು ಸಭೆಯ ಮುಂದಿನ ಸಾಲಿನಲ್ಲಿ ಕುಳಿತ ಗಣ್ಯರಿಗೆ ನಮಸ್ಕರಿಸಿ ಉಭಯ ಕುಶಲೋಪರಿ ವಿಚಾರಿಸಿ ಬಳಿಕ ವೇದಿಕೆ ಏರಿ ಎಲ್ಲರಿಗೂ ವಂದಿಸಿ ಆಸೀನರಾದರು. ರಾಷ್ಟ್ರ ಗೀತೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ತಮ್ಮ ರಾಜಕೀಯ ಪೂರ್ವಾಶ್ರಮದಲ್ಲಿ ಕೇರಳ ಮತ್ತು ಕಾಸರಗೋಡಿಗೆ ಪಕ್ಷದ ಕಾರ್ಯಕ್ರಮಗಳಿಗೆ ಆಗಮಿಸಿದುದನ್ನು ನೆನಪಿಸಿ ತಾನು ರಾಜಕೀಯದಿಂದ ಪ್ರಕೃತ ರಿಟೈರ್‌ ಆಗಿದ್ದು ದೇಶಸೇವೆಯಿಂದ ರಿಟೈರ್‌ ಆಗಿಲ್ಲವೆಂದರು. ದೇವರ ಸ್ವಂತ ನಾಡು,ನಾರಾಯಣ ಗುರುಗಳ ಆದರ್ಶ, ಸದಾ ಹಚ್ಚಹಸುರಿನ ನಾಡು ಕೇರಳವನ್ನು ಮೆಚ್ಚಿರುವುದಾಗಿ ತಿಳಿಸಿ ಮಲೆಯಾಳದಲ್ಲಿ ತನ್ನ ಭಾಷಣ ಆರಂಭಿಸಿದರು.ಬಳಿಕ ಸುಮಾರು ಅರ್ಧ ಗಂಟೆಗಳ ಕಾಲ ವೇದ ಪುರಾಣಗಳ ಸಹಿತ ಶಿಕ್ಷಣ ಸಂಸ್ಕಾರ, ದೇಶಭಕ್ತಿಯ ಕುರಿತು ಪ್ರಾಸಬದ್ಧವಾಗಿ ನಿರರ್ಗಳವಾಗಿ ಮಾತನಾಡಿದರು. ಕಾಸರಗೋಡಿನ ಚಿರಕಾಲದ ಬೇಡಿಕೆಯಾದ ಮೆಡಿಕಲ್‌ ಕಾಲೇಜನ್ನು ಕಾಸರಗೋಡಿನಲ್ಲೇಆರಂಭಿಸಲು ಮಾನ್ಯ ಪ್ರಧಾನಿಯವರಿಗೆ ಒತ್ತಾಯಿಸುವ ಭರವಸೆ ನೀಡಿದರು. ಸಮಾರಂಭದ ಬಳಿಕ ಕೊಚ್ಚಿಗೆ ಪ್ರಯಾಣ ಬೆಳೆಸಿದರು.

ಕೇರಳದ ಸಚಿವ ಕಡನಪ್ಪಳ್ಳಿ ರಾಮಚಂದ್ರನ್‌ ರವರು ವಿವಿಯ ವರದಿಯನ್ನು ವಾಚಿಸಿ ತಾನು ಲೋಕಸಭಾ ಸದಸ್ಯನಾಗಿದ್ದಾಗ ಆದ ಕೆಲವು ಅಭಿವೃದ್ಧಿಯ ಕುರಿತು ಮಾತನಾಡಿದರು.ಸಮಯದ ಪರಿಮಿತಿಯೊಳಗೆ ನಡೆದ ಕಾರ್ಯಕ್ರಮದಲ್ಲಿ ಬೇರೆ ಯಾರಿಗೂ ಭಾಷಣ ಕೊರೆಯಲು ಅವಕಾಶ ನೀಡದೆ ನಿರ್ದಿಷ್ಟ ಸಮಯದೊಳಗೆ ಸಮಾರಂಭ ಕೊನೆಗೊಂಡಿತು.

ಉದುಮ ಶಾಸಕ ಕೆ.ಕುಞಿರಾಮನ್‌,ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ, ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ.ಬಶೀರ್‌ ಸಹಿತ ಜಿಲ್ಲೆಯ ತ್ರಿಸ್ತರ ಚುನಾಯಿತ ಪ್ರತಿನಿಧಿಗಳು ವಿವಿಧ ರಾಜಕೀಯ ಪಕ್ಷಗಳ ನಾಯಕರು ವಿ.ಐ.ಪಿ.ಆಸನವನ್ನು ಅಲಂಕರಿಸಿದರು.ಸಭಾ ಮಂಟಪದಲ್ಲಿ ಸುಡು ಬಿಸಿಲಿಗೆ ತಂಪಿನ ಹವಾನಿಯಂತ್ರಿತ ವ್ಯವಸ್ಥೆ ಮಾಡಲಾಗಿತ್ತು.400 ವಿ.ಐ.ಪಿ,350 ಅಧಿಕಾರಿಗಳಿಗೆ ಮತ್ತು 1250 ಮಂದಿ ಸಾರ್ವಜನಿಕರಿಗೆ ಕೂರಲು ಆಸನದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದವರಲ್ಲಿ ಪ್ರವೇಶ ಪಾಸ್‌ ಇದ್ದರೂ ಪ್ರತೇÂಕ ಗುರುತುಚೀಟಿ ವಿಚಾರಿಸಿ ಪೊಲೀಸರು ಗೊಂದಲ
ಸೃಷ್ಟಿಸಿದರು. ಉಪರಾಷ್ಟ್ರಪತಿ ಸಭಾ ಮಂಟಪದೊಳಗೆ ಪ್ರವೇಶಿಸಿದ ಬಳಿಕ ಸಾರ್ವಜನಿಕರಿಗೆ ಪ್ರವೇಶ ನಿರ್ಭಂಧಿಸಲಾಯಿತು.

ಸಮಾರಂಭದ ಮಂಟಪದೊಳಗೆ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್‌ ಪೇದೆಗೆ ತಲೆಸುತ್ತು ಉಂಟಾಗಿ ಕುಸಿದು ಸಭೆಯಲ್ಲಿ ಅಲ್ಪ ಆತಂಕ ಸೃಷ್ಟಿಯಾಯಿತು.ಬಳಿಕ ಇವರನ್ನು ಸಹದ್ಯೋಗಿಗಳು ಆರೈಕೆ ಮಾಡಿ ಹೊರಗೆ ಕರೆದೊಯ್ದರು.ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿ ಮತ್ತು ಖಾರ ತಿಂಡಿಯನ್ನೊಳಗೊಂಡ ಪೊಟ್ಟಣವನ್ನು ವಿತರಿಸಲಾಯಿತು.ಕಣ್ಣೂರು ವಲಯ ಐಜಿ,ಕಾಸರಗೋಡು ಜಿಲ್ಲಾಎಸ್‌.ಪಿ,ಜಿಲ್ಲಾಧಿಕಾರಿ ಸಹಿತ ಉನ್ನತ ಪೊಲೀಸ್‌ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭದ್ರತೆಯ ಮತ್ತು ಸುವ್ಯವಸ್ಥೆಯ ನಿಗಾ ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಹವಾಮಾನದ ಪ್ರತಿಕೂಲ ವಾತಾವರಣ ಸೃಷ್ಟಿಯಾದಲ್ಲಿ ಮಂಗಳೂರಿನಿಂದ ಹೆದ್ದಾರಿ ಮೂಲಕ ಉಪ ರಾಷ್ಟ್ರಪತಿಯವರಿಗೆ ಕಾರಿನಲ್ಲಿ ಸಂಚರಿಸಲು ಸಿದ್ಧತೆ ನಡೆಸಲಾಗಿತ್ತು.ಕರ್ನಾಟಕ ಗಡಿ ಪ್ರದೇಶ ತಲಪ್ಪಾಡಿಯಿಂದ ಪೆರಿಯದ ತನಕ ರಸ್ತೆಯ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಹೆಚ್ಚಿನೆಲ್ಲಾ ಕಾರ್ಯಕ್ರಮಗಳು ವಿಳಂಬವಾಗಿ ಆರಂಭವಾಗಿ ತಡವಾಗಿ ಕೊನೆಗೊಂಡರೆ ಈ ಕಾರ್ಯಕ್ರಮವು ನಿಗ ದಿ ಯಂತೆ ಆರಂಭಗೊಂಡು ಮೆಚ್ಚುಗೆಗೆ ಪಾತ್ರವಾಯಿತು.ಕಾರ್ಯಕ್ರಮ ಮುಗಿದು ಮರಳುವಾಗ ನಾಯ್ಡು ಸಾಮಾನ್ಯರಂತೆ ವಿದ್ಯಾರ್ಥಿಗಳಲ್ಲಿ ಮತ್ತು ರಕ್ಷಕರಲ್ಲಿ ಹಸ್ತಲಾಘವದೊಂದಿಗೆ ಯೋಗಕೇÒಮ ವಿಚಾರಿಸಿ ಸರಳತೆಗೆ ಸಾಕ್ಷಿಯಾದರು.

ಟಾಪ್ ನ್ಯೂಸ್

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-madikeri

Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

7

Kasaragod: ಅಂಗಡಿಗೆ ನುಗ್ಗಿದ ಕಾಡು ಹಂದಿ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Untitled-1

Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3-madikeri

Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.