ವೀಕ್ಷಕರ ಗಮನ ಸೆಳೆಯುವ: ಕಿಫ್ ಬಿ ಭವಿತವ್ಯದ ಅಭಿವೃದ್ಧಿ ಯೋಜನೆಗಳು
Team Udayavani, Jan 31, 2020, 6:54 AM IST
ಕಾಸರಗೋಡು: ರಾಜ್ಯದಲ್ಲಿ ಭವಿತವ್ಯದಲ್ಲಿ ಜಾರಿಗೊಳ್ಳುವ ಅಭಿವೃದ್ಧಿ ಯೋಜನೆಗಳನ್ನು ಮುಂಗಡವಾಗಿ ಒಂದೇ ಛಾವಣಿಯಡಿ ಕಾಣಬಹುದಾದ ಸದವಕಾಶ ಜನರಿಗೆ ಲಭಿಸಿದೆ. ಗಡಿನಾಡು ಕಾಸರ ಗೋಡು ಸಹಿತ ರಾಜ್ಯದ ವಿವಿಧ ಜಿಲ್ಲೆಗ ಳಲ್ಲಿ ಅನುಷ್ಠಾನಗೊಳ್ಳಲಿರುವ ವಿಕಸನ ಯೋಜ ನೆಗಳ ಪ್ರದರ್ಶನ ಸಹಿತ ಸಮಗ್ರ ಮಾಹಿತಿ ಇಲ್ಲಿ ಒಂದೇ ಕಡೆ ಲಭಿಸುತ್ತಿದೆ.
ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ ನಡೆಯುತ್ತಿರುವ ರಾಜ್ಯ ಸರಕಾರದ ಕಿಫ್ ಬಿ ಪ್ರದರ್ಶನದಲ್ಲಿ ಈ ದೃಶ್ಯಾವಳಿ ಸಹಿತದ ಪ್ರದರ್ಶನ ಈ ಮೂಲಕ ಗಮನ ಸೆಳೆಯುತ್ತಿದೆ.
ವರ್ಚುವಲ್ ರಿಯಾಲಿಟಿ
ಬಿ.ಐ.ಎಂ. ವತಿಯಿಂದ ನೂತನ ತಂತ್ರಜ್ಞಾನದೊಂದಿಗೆ ಅನೇಕ ದೃಶ್ಯ ವಿಸ್ಮಯಗಳನ್ನು ನೋಡಬಹುದಾಗಿದ್ದು, ಇಲ್ಲೊಂದು ಮಾಯಾಲೋಕವೇ ಸೃಷ್ಟಿ ಯಾಗಿವೆ. ಬೃಹತ್ ಕಟ್ಟಡಗಳ ಒಳಾಂಗಣ, ಹೊರಾಂಗಣಗಳನ್ನು ಯಥಾ ಸ್ವರೂಪದಲ್ಲಿ ಏಕಕಾಲಕ್ಕೆ ವೀಕ್ಷಿಸಬಹುದಾದ ವರ್ಚುವಲ್ ರಿಯಾಲಿಟಿ ತಂತ್ರಜ್ಞಾನ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
ಬಿ.ಐ.ಎಂ. ಸ್ಟಾಲ್‌ಗಳು ಇಲ್ಲಿ ಸಕ್ರಿ ಯವಾಗಿವೆ. ಇಡೀ ದೇಶದಲ್ಲೇ ಪ್ರಥಮ ಬಾರಿಗೆ ರಜ್ಯದಲ್ಲಿ ಕಿಫ್ ಬಿ ಪ್ರದರ್ಶನ ಮೇಳದಲ್ಲಿ ಬಿ.ಐ.ಎಂ. ಸ್ಟಾಲ್ ಮೂಲಕ ಕಟ್ಟಡಗಳ ತ್ರೀ ಡಿ ಚಲನ ದೃಶ್ಯಗಳು ವೀಕ್ಷಕರಿಗೆ ಲಭಿಸುತ್ತಿವೆ.
ಕಿಫ್ ಬಿಯ 21 ಯೋಜನೆಗಳ ವೀಡಿಯೋಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ. ಜಿಲ್ಲೆಯ ಸುಬ್ರಹ್ಮಣ್ಯನ್ ತಿರುಮುಂಬ್ ಕಲ್ಚರಲ್ ಕಾಂಪ್ಲೆಕ್ಸ್, ತ್ರಿಕರಿಪುರದ ಎಂ.ಆರ್.ಸಿ. ಕೃಷ್ಣನ್ ಮೆಮೋರಿಯಲ್ ಇಂಡೋರ್ ಸ್ಟೇಡಿಯಂ ಇತ್ಯಾದಿಗಳು ಅನುಷ್ಠಾನಗೊಂಡ ವೇಳೆ ಹೇಗಿರಬಹುದು ಎಂದು ತೋರುವ ತ್ರೀಡಿ ಚಲನಚಿತ್ರಗಳನ್ನು ಕಾಣಬಹುದಾಗಿದೆ. ಎಂಜಿನಿಯರಿಂಗ್ ಪರಿಣತರು ಅವರ ಉದ್ಯೋಗ ಪರಿಷ್ಕರಣೆ ಅಂಗವಾಗಿ ಬಳಸುವ ಬಿಲ್ಡಿಂಗ್ ಇನ್ ಫರ್ಮೇಷನ್ ಮಾಡೆಲಿಂಗ್ ತಂತ್ರಜ್ಞಾನವನ್ನು ಈ ಮೂಲಕ ಕಿಫ್ ಬಿ ಸಾರ್ವಜನಿಕರ ಮುಂದಿರಿಸಿದೆ.
ಬದಲಿ ಉತ್ಪನ್ನಗಳ ಪ್ರದರ್ಶನ
ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ಬದಲಿ (ಪ್ರಕೃತಿ ಸ್ನೇಹಿ) ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಸ್ಟಾಲ್‌ಗಳು ಈ ಪ್ರದರ್ಶನದಲ್ಲಿ ವೀಕ್ಷಕರನ್ನು ಸೆಳೆಯುತ್ತಿವೆ. ಜಿಲ್ಲಾ ಕುಟುಂಬಶ್ರೀ ಮಿಷನ್ ಮತ್ತು ಕೇರಳ ನಿರ್ಮಿತಿ ಸ್ಟಾಲ್‌ಗಳು “ಪುನರ್ ಜನನಿ’ ಎಂಬ ಹೆಸರಿನಲ್ಲಿ ಇಲ್ಲಿ ಸಕ್ರಿಯವಾಗಿವೆ.
ಗೃಹೋಪಯೋಗಿ ಮತ್ತು ಅಲಂಕಾರ ಸಾಮಗ್ರಿಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ. ಜಿಲ್ಲೆಯ 560 ಕುಟುಂಬಗಳ 268 ಮಹಿಳೆಯರು ತಯಾರಿಸಿದ ಉತ್ಪನ್ನಗಳು ಇಲ್ಲಿವೆ. ಈ ನಿಟ್ಟಿನಲ್ಲಿ ಕೊರಗ ಜನಾಂಗದವರು ಸಿದ್ಧಪಡಿಸುವ ಉತ್ಪನ್ನಗಳಿಗೆ ಬೇಡಿಕೆ ಅ ಧಿಕವಾಗಿದೆ. ಬೆತ್ತದ ಕಿರು ಬುಟ್ಟಿಗಳು, ಹೂದಾನಿಗಳು, ಹಾಳೆ ತಟ್ಟೆಗಳು, ಮಣ್ಣಿನ ಲೋಟ, ಪಾತ್ರೆ, ಕುಡಿಕೆ ಇತ್ಯಾದಿಗಳು, ಬಟ್ಟೆ ಚೀಲಗಳು, ಬಡ್ಸ್ ಶಾಲೆಗಳ ಮಕ್ಕಳ ತಾಯಂದಿರು ನಿರ್ಮಿಸಿರುವ ಬೀಜಗಳ ಪೆನ್‌ಗಳು ಇತ್ಯಾದಿಗಳು ಗಮನ ಸೆಳೆಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.