ಕಣಿ ಕಾಣುವ ಹಬ್ಬ ವಿಷು
Team Udayavani, Apr 15, 2018, 6:15 AM IST
“ವಿಷುವ’ ಎಂಬ ಶಬ್ದಕ್ಕೆ ರಾತ್ರಿಯೂ ಹಗಲೂ ಸಮ ಪ್ರಮಾಣದಲ್ಲಿರುವ ದಿವಸವೆಂದರ್ಥ. ಮೇಷ ಸಂಕ್ರಮಣದ ದಿನಗಳಲ್ಲಿ ರಾತ್ರಿ-ಹಗಲುಗಳು ಸಮ ಪ್ರಮಾಣದಲ್ಲಿರುವುದರಿಂದ ಅದಕ್ಕೆ ವಿಷುವ ಸಂಕ್ರಮಣ ಎಂದು ಹೆಸರು. ವಿಷುವ ಶಬ್ದವು ಬರಬರುತ್ತಾ ಕೊನೆಯ ವಕಾರ ಲೋಪವಾಗಿ ಈಗ ವಿಷು ಎಂದೇ ಕರೆಯಲ್ಪಡುತ್ತದೆ. ಆದುದರಿಂದ ವಿಷು ಸಂಕ್ರಮಣ ಎಂದರೆ ಮೇಷ ಸಂಕ್ರಮಣ ಆಗಿದೆ. “ಕಣಿ’ ಎಂಬ ಶಬ್ದವು ಕನ್ನಡ ಮತ್ತು ಮಲಯಾಳ ಉಭಯ ಭಾಷೆಗಳಲ್ಲಿಯೂ ಇದೆ. ಕಣಿ ಎಂಬ ಶಬ್ದಕ್ಕೆ ಭವಿಷ್ಯ, ಶ್ರೇಯಸ್ಸು, ಶಕುನ ಎಂಬರ್ಥಗಳಿವೆ. ವಿಷು ಕಣಿ ಕಾಣುವುದೆಂದರೆ ಹೊಸ ವರ್ಷದಲ್ಲಿ ನಮಗೆ ಶ್ರೇಯಸ್ಸಾಗಲೆಂದು ದೇವರಲ್ಲಿ ಪ್ರಾರ್ಥಿಸುವುದು ಎಂದಾಗಿದೆ.
ಕೇರಳದ ಶಬರಿಮಲೆ ಸನ್ನಿಧಾನದಲ್ಲಿ ಸ್ವಾಮಿ ಅಯ್ಯಪ್ಪನ ಮುಂದಿರಿಸಿದ ವಿಷು ಕಣಿ ಕಾಣಲು ವ್ರತಧಾರಿ ಅಯ್ಯಪ್ಪ ಸ್ವಾಮಿಗಳು ದೂರದೂರುಗಳಿಂದ ಆಗಮಿಸುತ್ತಾರೆ. ಗುರುವಾಯೂರು ದೇವಸ್ಥಾನದಲ್ಲಿ ಕಣಿ ಕಾಣುವುದು ಎಂದರೆ ಮಹಾಭಾಗ್ಯವೆಂದು ಸಾವಿರಾರು ಭಕ್ತಾದಿಗಳು ನೆರೆಯುತ್ತಾರೆ. ತೌಳವ ಸಂಸ್ಕೃತಿಯ ತವರೂರಾದ ಕುಂಬಳೆ ಸೀಮೆಯ ಎಲ್ಲಾ ದೇವಾಲಯಗಳಲ್ಲೂ ವಿಷು ಕಣಿಯನ್ನು ಒಂದು ದಿನದ ಉತ್ಸವವಾಗಿ ಆಚರಿಸಲಾಗುತ್ತದೆ. ಅಂದು ವಿಶೇಷ ಪೂಜೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಜರಗಿಸಲಾಗುತ್ತದೆ. ತುಳುನಾಡಿನ ಹೆಚ್ಚಿನ ಶಿವದೇವಾಲಯಗಳಲ್ಲಿ ವಿಷು ಜಾತ್ರೆಯು ಜರಗುತ್ತದೆ. ಕುಂಬಳೆ ಸೀಮೆಯ ಪ್ರಮುಖ ದೇವಾಲಯವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ “ವಿಷು ಕಣಿ’ ಪ್ರಸಿದ್ಧವಾಗಿದೆ.
ವೇದಗಳ ಅಂಗವಾದ ಜ್ಯೋತಿಷ ಶಾಸ್ತ್ರದಲ್ಲಿ ಅಂತರಿಕ್ಷದಲ್ಲಿನ ಸೂರ್ಯನ ಪಥವನ್ನು ಹನ್ನೆರಡು ಸಮಭಾಗಗಳಾಗಿ ವಿಭಾಗಿಸಲಾಗಿದೆ. ಇಂತಹ ಪ್ರತಿಯೊಂದು ವಿಭಾಗವು “ರಾಶಿ’ಯೆನಿಸಿಕೊಳ್ಳುತ್ತದೆ. ಸೂರ್ಯನು ಈ ಹನ್ನೆರಡು ರಾಶಿಗಳನ್ನು ಸಂಪೂರ್ಣವಾಗಿ ಒಂದು ಸುತ್ತು ಬರುವುದಕ್ಕೆ ತಗಲುವ ಅವಧಿಗೆ ‘ಸಂವತ್ಸರ’ವೆನ್ನುತ್ತಾರೆ. ಸಂವತ್ಸರದ ಮೊದಲ ದಿನವನ್ನು ಸೂರ್ಯ-ಚಂದ್ರರ ಚಲನೆಯಿಂದ “ಯುಗಾದಿ’ ಯಾಗಿ ಪರಿಗಣಿಸಿ ಹಬ್ಬವನ್ನಾಗಿ ಆಚರಿಸುವುದು ಭಾರತೀಯರ ಪದ್ಧತಿ. ಹಾಗಾಗಿ ನಮ್ಮಲ್ಲಿ ಸೌರಮಾನ ಮತ್ತು ಚಂದ್ರಮಾನ ಯುಗಾದಿಗಳೆರಡಕ್ಕೂ ಪ್ರಾಶಸ್ತÂವಿದೆ. ಚೈತ್ರ ಮಾಸದಿಂದ ಪಾಲ್ಗುಣ ಮಾಸದವರೆಗಿನ ಚಾಂದ್ರಮಾನ ವರ್ಷದಲ್ಲಿ ಚೈತ್ರ ಶುದ್ಧ ಪಾಡ್ಯವು ಹೊಸ ವರ್ಷಾರಂಭದ ದಿನ – ಚಾಂದ್ರಮಾನ ಯುಗಾದಿ. ಸೂರ್ಯನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುವ ಸಂಕ್ರಮಣ ದಿನವು ವಿಷು ಸಂಕ್ರಮಣ (ಮೇಷ ಸಂಕ್ರಮಣ) ಅಥವಾ ಸೌರಮಾನ ಯುಗಾದಿಯಾಗಿದೆ.
“ಮೇಷಸ್ಥೆà ಸೂಯೇì ಸೌರ ಪ್ರಭಾವಾದೀನಾಮುಪಕ್ರಮಃ’ ಎಂದರೆ ಮೇಷ ಮಾಸದಿಂದ ಮೀನ ಮಾಸದವರೇಗಿನ ಸೌರಮಾನ ವರ್ಷದಲ್ಲಿ ಮೇಷ ಸಂಕ್ರಮಣದ ಮರು ದಿನ ಹೊಸ ವರ್ಷಾರಂಭ. ಇದು ಸೌರಯುಗಾದಿ. ಸೌರಯುಗಾದಿಯಾದ “ವಿಷು’ ದಿನವನ್ನು ಕೇರಳದಾದ್ಯಂತ ಹಬ್ಬವಾಗಿ ಆಚರಿಸಲಾಗುತ್ತಿದೆಯಾದರೂ ತೌಳವ ಸಂಸ್ಕೃತಿಯಲ್ಲಿ ವಿಷು ಹಬ್ಬದ ಆಚರಣೆಗೆ ವಿಶೇಷ ಮಹತ್ವವಿದ್ದುದರಿಂದ ಹಿಂದಿನ ತುಳುನಾಡಿನ ಸೀಮಾ ಗಡಿ ಪ್ರದೇಶಗಳೆಂದು ಗುರುತಿಸಲ್ಪಟ್ಟಿರುವ ಕರ್ನಾಟಕದ ಬಾಕೂìರುನಿಂದ ಉತ್ತರ ಕೇರಳದ ಬಡಗರ ಎಂಬಲ್ಲಿವರೆಗೆ ಸೌರ ಯುಗಾದಿಯನ್ನು ಹೊಸ ವರ್ಷದ ಆದಿ ದಿನವೆಂದು ಆಚರಿಸಲಾಗುತ್ತಿದೆ. ದಕ್ಷಿಣ ಕೇರಳದಲ್ಲಿ ವಿಷು ಹಬ್ಬವನ್ನು “ಕಣಿ ಕಾಣುವ’ ಹಬ್ಬವಾಗಿ ಮಾತ್ರ ಕಾಣುತ್ತಾರೆ.
“ವಿಷುವ’ ಎಂಬ ಶಬ್ದಕ್ಕೆ ರಾತ್ರಿಯೂ ಹಗಲೂ ಸಮ ಪ್ರಮಾಣದಲ್ಲಿರುವ ದಿವಸವೆಂದರ್ಥ. ಮೇಷ ಸಂಕ್ರಮಣದ ದಿನಗಳಲ್ಲಿ ರಾತ್ರಿ-ಹಗಲುಗಳು ಸಮ ಪ್ರಮಾಣದಲ್ಲಿರುವುದರಿಂದ ಅದಕ್ಕೆ ವಿಷುವ ಸಂಕ್ರಮಣ ಎಂದು ಹೆಸರು. ವಿಷುವ ಶಬ್ದವು ಬರ ಬರುತ್ತಾ ಕೊನೆಯ ವಕಾರ ಲೋಪವಾಗಿ ಈಗ ವಿಷು ಎಂದೇ ಕರೆಯಲ್ಪಡುತ್ತದೆ. ಆದುದರಿಂದ ವಿಷು ಸಂಕ್ರಮಣ ಎಂದರೆ ಮೇಷ ಸಂಕ್ರಮಣ ಆಗಿದೆ. “ಕಣಿ’ ಎಂಬ ಶಬ್ದವು ಕನ್ನಡ ಮತ್ತು ಮಲಯಾಳ ಉಭಯ ಭಾಷೆಗಳಲ್ಲಿಯೂ ಇದೆ. ಕಣಿ ಎಂಬ ಶಬ್ದಕ್ಕೆ ಭವಿಷ್ಯ, ಶ್ರೇಯಸ್ಸು, ಶಕುನ ಎಂಬರ್ಥಗಳಿವೆ. ವಿಷು ಕಣಿ ಕಾಣುವುದೆಂದರೆ ಹೊಸ ವರ್ಷದಲ್ಲಿ ನಮಗೆ ಶ್ರೇಯಸ್ಸಾಗಲೆಂದು ದೇವರಲ್ಲಿ ಪ್ರಾರ್ಥಿಸುವುದು ಎಂದಾಗಿದೆ.ವಿಷು ಹಬ್ಬವನ್ನು ಮನೆಯಲ್ಲಿಯೂ ದೇವಸ್ಥಾನಗಳಲ್ಲೂ ಆಚರಿಸಿಕೊಂಡು ಬರುತ್ತಾರೆ.
ಮೇಷ ಮಾಸದ ಪ್ರಥಮ ದಿನವೇವಿಷುಕಣಿ. ಇದರ ಮೊದಲಿನ ದಿನವೇ ಮನೆಯನ್ನು ಶೃಂಗಾರ ಮಾಡುತ್ತಾರೆ ಮತ್ತು ರಾತ್ರಿಯಲ್ಲಿಯೇ ದೇವರಕೋಣೆಗೆ ಕಣಿ ಕಾಣಲು ಇಡಬೇಕಾದ ವಸ್ತುಗಳನ್ನು ಅಣಿಗೊಳಿಸುತ್ತಾರೆ. ಕಣಿ ಕಾಣುವ ವಸ್ತುಗಳಾಗಿ ಫಲವಸ್ತುಗಳು, ನವಧಾನ್ಯಗಳು, ನೂತನ ವಸ್ತ್ರಗಳು, ಧನ-ಕನಕಗಳು ಇತ್ಯಾದಿಗಳನ್ನು ಓರಣಗೊಳಿಸಿಟ್ಟು ಹೊಸ ಮಡಕೆಯಲ್ಲಿ ಅಥವಾ “ಉರುಳಿ ಪಾತ್ರೆ’ಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಮತ್ತು ದರ್ಪಣ (ಕನ್ನಡಿ) ವನ್ನಿರಿಸುತ್ತಾರೆ. ಕಣಿ ಕಾಣುವ ದಿನ ಪ್ರಾತ:ಕಾಲ ನಾಲ್ಕು ಗಂಟೆಗೆದ್ದು ಸ್ನಾನ ಮಾಡಿ ನೂತನ ವಸ್ತ್ರ ಧರಿಸಿ, ಗುರುಹಿರಿಯರಿಗೆ ವಂದಿಸಿ ಶುಭಾಶೀರ್ವಾದ ಪಡೆದು ಅನಂತರ ಕಣಿ ಕಾಣುವುದು ಸಂಪ್ರದಾಯ. ಕಣಿ ಕಂಡ ನಂತರ ಕನ್ನಡಿಯಲ್ಲಿ ಮುಖ ನೋಡಬೇಕೆಂತಲೂ ಹೇಳಿಕೆ. “ಆಯುಃ ಶ್ರೀಕಾರಿತ್ವಮ್| ಪಾಪನಾಶಿತ್ವಂಚ||’ ಎಂದರೆಕನ್ನಡಿಯಲ್ಲಿ ಮುಖ ನೋಡುವುದರಿಂದ ಆಯುಷ್ಯವು ಹೆಚ್ಚುತ್ತದೆ. ಸಂಪತ್ತು ಉಂಟಾಗುತ್ತದೆ. ಪಾಪವನ್ನು ಹೋಗಲಾಡಿಸುತ್ತದೆ. ಈ ಕಾರಣದಿಂದಲೇ ಕಣಿ ಕಂಡ ನಂತರ ಕನ್ನಡಿಯಲ್ಲಿ ಮುಖ ನೋಡಬೇಕೆಂದು ವಿಧಿಸಿರಬಹುದು. ಮನೆಯಲ್ಲಿ ಮಾತ್ರವಲ್ಲ ಹತ್ತಿರದ ದೇವಾಲಯಕ್ಕೆ ತೆರಳಿ ಅಲ್ಲಿಯೂ ದೇವರಿಗಿಟ್ಟ ಕಣಿಯನ್ನು ಕಾಣುವುದು ಸಂಪ್ರದಾಯವಾಗಿದೆ. ನಮ್ಮನ್ನು ಇಡೀ ವರ್ಷ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಎದುರಾಗುವ ತೊಡಕುಗಳನ್ನೆಲ್ಲಾ ನಿವಾರಣೆ ಮಾಡಬೇಕೆಂದು ದೇವರಲ್ಲಿ ಪ್ರಾರ್ಥಿಸುವುದೇ ವಿಷು ಕಣಿ ಕಾಣುವ ಉದ್ದೇಶವಾಗಿದೆ.
ದೇವಾಲಯಗಳಲ್ಲಾದರೆ ಮೇಷ ಸಂಕ್ರಮಣದ ರಾತ್ರಿ ಪೂಜೆಯಾದ ಬಳಿಕ ಶುದ್ಧ ಮಾಡಿ, ಹರಿವಾಣದಲ್ಲಿ ಬೆಳ್ತಿಗೆ ಅಕ್ಕಿಯನ್ನು ತುಂಬಿ ಅದರ ಮೇಲೆ ಫಲವಸ್ತುಗಳನ್ನಿಟ್ಟು, ಹೂಹಾರ, ಬಂಗಾರದ ಸರಗಳನ್ನಿಟ್ಟು ಪ್ರಾರ್ಥನೆ ಮಾಡಿ ದೇವರಿಗೆ ವಂದಿಸಿ ಬಾಗಿಲು ಹಾಕಿ ಹೋಗುವುದೂ, ಮರುದಿನ ಉಷಃಕಾಲಕ್ಕೆ ಬಾಗಿಲು ತೆರೆದು ದೇವರಿಗೆ ದೀಪ ಹಚ್ಚಿ ಆ ಕಣಿಯನ್ನು ಎಲ್ಲರಿಗೂ ಕಾಣುವಂತೆ ಮಾಡಬೇಕೆಂಬುದು ಶಾಸ್ತ್ರವಾಗಿದೆ. ದೇವರಿಗೆ ಯಾವತ್ತೂ ಅರ್ಪಿಸದ ಕೊನ್ನೆ ಪುಷ್ಪ (ಕಕ್ಕೆ ಹೂ)ವನ್ನು ದೇವರಿಗೆ ಕಣಿ ಕಾಣಿಕೆಯಾಗಿ ಒಪ್ಪಿಸುತ್ತಾರೆ. ಶ್ರೀಕೃಷ್ಣನು ಕೊನ್ನೆ ಹೂಗಳಿಂದ ಪಾದಸರವನ್ನು ಮಾಡಿ ಹಾಡಿಕೊಂಡಿದ್ದನೆಂದು ಇದಕ್ಕೆ ಪ್ರಾಧಾನ್ಯತೆಯನ್ನು ಕಲ್ಪಿಸಲಾಗಿದೆ. ದೇವರಿಗೆ ಪ್ರಧಾನ ನೈವೇದ್ಯವಾಗಿ ಅಕ್ಕಿಹಿಟ್ಟು -ಬೆಲ್ಲ-ಬಾಳೆಹಣ್ಣುಗಳ ಪಾಕವನ್ನು ತುಪ್ಪ ಅಥವಾ ತೆಂಗಿನ ಎಣ್ಣೆಯಲ್ಲಿ ಹುರಿದು ತಯಾರಿಸುವ “ಉಣ್ಣಿ ಅಪ್ಪ’ (ಕಾರಿಯಪ್ಪ)ವನ್ನು ಸಮರ್ಪಿಸುತ್ತಾರೆ. ಇದನ್ನು ಬಂದವರಿಗೆಲ್ಲಾ ಹಂಚುತ್ತಾರೆ. ಅಳಿಯಕಟ್ಟು ಪ್ರಧಾನವಾಗಿರುವ ಕುಟುಂಬದವರು ತಮ್ಮ ಮೂಲ ತರವಾಡು ದೈವಸ್ಥಾನಗಳಿಗೆ ತೆರಳಿ ದೈವ – ದೇವರಗಳ ಕಣಿಯನ್ನು ಕಾಣುತ್ತಾರೆ. ಕೃಷಿಕ ಮನೆಯ ಯಜಮಾನನು ಕೃಷಿ ಮಾಡಲು ಪ್ರಾರಂಭಿಸುವ ಮಾಸವೆಂಬ ಭಾವನೆಯಿಂದ ಗದ್ದೆಯನ್ನು ಉತ್ತು “ನುರಿ ಇಡಲ್’ ಅಥವಾ “ಬಲಬಂಧು ಉಳುವುದು’ ಎಂಬ ಕ್ರಮವನ್ನು ನೆರವೇರಿಸುತ್ತಾರೆ.
ವಿಷುಕಣಿಯು ವಸಂತ ಋತುವಿನಲ್ಲಿ ಬರುವುದರಿಂದ ಈ ಅಧಿದೇವತೆ ಮಾಧವ ಎಂದರೆ ಶ್ರೀಕೃಷ್ಣ ಹಾಗೆ ಎಲ್ಲಾ ದೇವರುಗಳು ಮೂರ್ತಿಗಳಲ್ಲಿ ವಸಂತ ಮಾಧವನ ಸಾನ್ನಿಧ್ಯವನ್ನು ಕಲ್ಪಿಸಿ ಭಕ್ತರು ವಿಷು ಕಣಿ ಕಾಣುತ್ತಾರೆ. ವಿಷುಕಣಿಯು ಪ್ರತಿಯೊಂದು ಗ್ರಾಮ ಸೀಮೆ ದೇವಸ್ಥಾನಗಳಲ್ಲೂ ನಡೆಯುವ ಪದ್ಧತಿಯಾಗಿದೆ. ತುಳುನಾಡಿನ ವೈಷ್ಣವ ದೇವಾಲಯಗಳಲ್ಲಿ ವಿಷು ಜಾತ್ರೆಯನ್ನು ಜರಗಿಸುತ್ತಾರೆ.
– ಕೇಳು ಮಾಸ್ತರ್ ಅಗಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.