ಮತದಾರರ ಸಹಾಯಕ್ಕೆ ಸಿದ್ಧ ವೋಟರ್ ಹೆಲ್ಪ್ ಮೊಬೈಲ್ ಆ್ಯಪ್
Team Udayavani, Feb 1, 2019, 1:00 AM IST
ಕಾಸರಗೋಡು: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಗೊಳಿಸಬೇಕಿದ್ದರೆ ಇನ್ನು ಅತ್ತಿಂದಿತ್ತ ಇತ್ತಿಂದತ್ತ ಅಲೆದಾಡಬೇಕಿಲ್ಲ. ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ನೂತನ ತಂತ್ರಜ್ಞಾನ ದೊಂದಿಗೆ ಚುನಾವಣ ಆಯೋಗ ರಂಗಕ್ಕಿಳಿದಿದೆ. ಇದರ ಫಲವಾಗಿ ರಚನೆಗೊಂಡಿರುವುದು ಮೊಬೈಲ್ ಅಪ್ಲಿಕೇಶನ್ ಆ್ಯಪ್.
ಈ ಮೂಲಕ ಇಡೀ ದೇಶದ ಮತದಾರರಿಗೆ ಸಂಬಂಧಿಸಿದ ಎಲ್ಲ ಸೇವೆಗಳೂ, ಮಾಹಿತಿಗಳೂ ಲಭಿಸಲಿವೆ. ವೋಟರ್ ಹೆಲ್ಪ್ ಲೈನ್ ಎಂಬ ಹೆಸರಿನ ಆ್ಯಪ್ ಇಲ್ಲಿ ಸಿದ್ಧವಾಗಿದೆ. ಚುನಾವಣೆ ಆಯೋಗದ ಡೈನಾಮಿಕ್ ಪೋರ್ಟಲ್‌ನಿಂದಲೂ ಯಥಾ ಸಮಯದ ಡಾಟಾ ಈ ಮೂಲಕ ಲಭ್ಯವಿದೆ.
ಮತದಾನಕ್ಕೆ ಪ್ರೋತ್ಸಾಹ, ಜಾಗೃತಿ ಮೂಡಿಸುವ ವಿಚಾರಗಳನ್ನು ಒಂದೇ ಛಾವಣಿಯಡಿ ನೀಡುವ ಉದ್ದೇಶ ಇಲ್ಲಿದೆ. ಚುನಾವಣೆ ಪ್ರಕ್ರಿಯೆಗಳನ್ನು ಡಿಜಿಟಲೈಸೇಶನ್ ನಡೆಸುವ ಯೋಜನೆ ಅಂಗವಾಗಿ ಆ್ಯಪ್ ಸಿದ್ಧವಾಗಿದೆ. ಜನತೆ ಗುರುತು ಚೀಟಿಗಾಗಿ ನೋಂದಣಿ ನಡೆಸುವ, ಇತರ ರಾಜ್ಯಗಳಿಗೆ ವಸತಿ ಬದಲಿಸಿಕೊಂಡರೆ ಚುನಾವಣೆ ಕಚೇರಿ, ಮತಗಟ್ಟೆಗೆ ತೆರಳದೇ ವಿಳಾಸ ಬದಲಿ ಸುವುದು ಈ ಮೂಲಕ ಸುಲಭ ಸಾಧ್ಯ.
ನೂತನ ಮತದಾರರ ನೋಂದಣಿ ಸಂಬಂಧ ಚುನಾವಣೆ ಫಾರಂಗಳ ಭರ್ತಿಗೊಳಿಸುವಿಕೆ, ಇತರ ವಿಧಾನಸಭೆ ಕ್ಷೇತ್ರಕ್ಕೆ ವಸತಿ ಬದಲಿಸುವ ವೇಳೆಗಿನ ವಿಚಾರಗಳು, ಆನಿವಾಸಿ ಭಾರತೀಯರಿಗೆ ಸಂಬಂಧಿಸಿದ ಸೇವೆಗಳು, ಮತದಾತರ ಪಟ್ಟಿಯಿಂದ ಹೆಸರು ರದ್ದುಗೊಳಿಸುವಿಕೆ, ಈ ಸಂಬಂಧ ವಿರೋಧ ಪ್ರಕಟಿಸುವಿಕೆ, ಎಂಟ್ರಿಗಳ ತಿದ್ದುಪಡಿ ಇತ್ಯಾದಿಗಳೂ ಈ ಮೂಲಕ ಸಾಧ್ಯ.
ವಿಧಾನಸಭೆ ಕ್ಷೇತ್ರದಿಂದ ಟ್ರಾನ್ಸ್ ಪೊಸಿಶನ್ ನಡೆಸಲು ಆಯಾ ಒಂದು ವಿಧಾನಸಭೆ ಕ್ಷೇತ್ರದ ಚುನಾವಣೆ ಪಟ್ಟಿಯ ಒಂದು ಎಂಟ್ರಿ ಅದೇ ಪಟ್ಟಿಯ ಇನ್ನೊಂದು ಭಾಗಕ್ಕೆ ಮೀಸಲುಗೊಳಿಸಲು ಈ ಆ್ಯಪ್ ಮೂಲಕ ಸಾಧ್ಯ. ಮತಗಟ್ಟೆ ಸಂಬಂಧ ಯಾವುದೇ ಸಂಶಯ ಗಳಿದ್ದರೆ, ಚುನಾವಣೆ ಸಂಹಿತೆ ಸಂಬಂಧ ಮಾಹಿತಿಗಳು ಬೇಕಿದ್ದರೆ, ಮತಯಂತ್ರ ಗಳ ಸಂಬಂಧ ವಿಚಾರಗಳು, ಆಯಾ ಸಂದರ್ಭಕ್ಕೆ ಚುನಾವಣೆ ಆಯೋಗ ಪ್ರಕಟಿಸುವ ಸೂಚನೆಗಳು, ಈ ಮೂಲಕ ದೊರೆಯಲಿವೆ. ಇವಲ್ಲದೆ ಚುನಾ ವಣೆ ಚಟುವಟಿಕೆಗಳ ಸಂಬಂಧ ದೂರುಗಳಿದ್ದಲ್ಲಿ, ಅದರ ನೋಂದಣಿ, ಅದರ ಡಿನ್ಪೋಸಲ್ ಸ್ಟಾಟಸ್ ಟ್ರಾಕ್ ನಡೆಸಲೂ ಸಾಧ್ಯ. ಮತದಾರರಿಗೆ ಬೇಕಾದ ಇತರ ಅನಿವಾರ್ಯ ಮಾಹಿತಿ ಇದರಲ್ಲಿ ಅಡಕವಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇ-ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.