ಕನ್ನಡದಲ್ಲಿ ಮತದಾರರ ಚೀಟಿ,ಪಟ್ಟಿ,ನೋಟಿಸು,ಸೂಚನೆ ಯಾವುದೂ ಇಲ್ಲ

ಚುನಾವಣಾ ಇಲಾಖೆ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ನೀಡಿದ ಉತ್ತರಕ್ಕೂ ಬೆಲೆ ಇಲ್ಲ

Team Udayavani, Apr 27, 2019, 6:00 AM IST

VOTER-ID

ಪತ್ರಕ್ಕೆ ಇಂಗ್ಲಿಷ್‌ನಲ್ಲಿ ಉತ್ತರ, ಮಲಯಾಳದಲ್ಲಿ ಮಾತ್ರ ಭಿತ್ತಿಪತ್ರ.

ಕಾಸರಗೋಡು: ಭಾರತೀಯ ಚುನಾವಣ ಆಯೋಗದ ಸೂಚನೆ ಮೇರೆಗೆ ಭಾಷಾ ಅಲ್ಪಸಂಖ್ಯಾಕ ಕನ್ನಡ ಪ್ರದೇಶವಾದ ಕಾಸರಗೋಡು, ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಯಮ ಪ್ರಕಾರ ಕನ್ನಡದಲ್ಲೂ ಮತದಾರ ಚೀಟಿ, ಮತದಾರ ಪಟ್ಟಿ, ಉಮೇದ್ವಾರರ ವಿವರಣೆಯಿರುವ ನೋಟಿಸು, ಮತದಾರರಿಗೆ ಸೂಚನೆಗಳು ಮೊದಲಾದವುಗಳನ್ನು ವಿತರಿಸಲಾಗುವುದು ಮತ್ತು ಪ್ರದರ್ಶಿಸಲಾಗುವುದು ಎಂದು ರಾಜ್ಯ ಚುನಾವಣ ಇಲಾಖೆ ಮಾಹಿತಿ ಹಕ್ಕು ಪ್ರಕಾರ ಉತ್ತರ ನೀಡಿದ್ದರೂ ಜಿಲ್ಲಾ ಚುನಾವಣಾಧಿಕಾರಿಗಳು ಅದನ್ನು ಅನುಷ್ಠಾನಗೊಳಿಸದಿರುವುದು ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡಿನಲ್ಲಿ ಕನ್ನಡದಲ್ಲೂ ಮತದಾರ ಪಟ್ಟಿ, ಚೀಟಿ, ಭಿತ್ತಿಪತ್ರಗಳನ್ನು ಒದಗಿಸಬೇಕೆಂದು ಕನ್ನಡಿಗರು ರಾಜ್ಯ ಚುನಾವಣ ಆಯೋಗಕ್ಕೂ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾ ಧಿಕಾರಿಯವರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಮನವಿ ನೀಡಿದ್ದರು. ಮಾತ್ರವಲ್ಲ, ಕನ್ನಡದಲ್ಲಿ ಮಾಹಿತಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಚುನಾವಣ ಇಲಾಖೆಗೆ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಪ್ರಶ್ನೆಯನ್ನೂ ಕೇಳಲಾಗಿತ್ತು.

ಮುಳ್ಳೇರಿಯಾದ ಕೆ.ಎಂ. ಗೋಪಾಲಕೃಷ್ಣ ಭಟ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಚುನಾವಣ ಇಲಾಖೆಯ ಅಧಿಕಾರಿಗಳು ಕಾಸರಗೋಡು, ಮಂಜೇಶ್ವರಗಳಲ್ಲಿ ಕನ್ನಡದಲ್ಲೂ ಮಾಹಿತಿ ನೀಡಬೇಕೆಂದು ಭಾರತೀಯ ಚುನಾವಣ ಆಯೋಗದ ಸೂಚನೆಯಿದೆಯೆಂದೂ ಆ ಮೇರೆಗೆ ಕನ್ನಡದಲ್ಲೂ ಮತದಾರಪಟ್ಟಿ, ಮತದಾರ ಚೀಟಿ, ನೋಟಿಸು ಮೊದಲಾದವುಗಳನ್ನು ವಿತರಿಸಲಾಗುವುದು ಹಾಗೂ ಪ್ರದರ್ಶಿಸಲಾಗುವುದು ಎಂದು ಉತ್ತರಿಸಿದ್ದರು.

ಆದರೆ ಕಾಸರಗೋಡು, ಮಂಜೇಶ್ವರದ ಮತದಾರರಿಗೆ ಕನ್ನಡದಲ್ಲಿ ಮತದಾರ ಚೀಟಿ, ಮತದಾರ ಪಟ್ಟಿ ಸೂಚನೆಗಳು ಯಾವುದನ್ನೂ ವಿತರಿಸಲಾಗಿಲ್ಲ. ಮತಗಟ್ಟೆಗಳ ಹೊರಗೆ ಪ್ರದರ್ಶಿಸಿದ ಸೂಚನಾಫಲಕಗಳು, ಭಿತ್ತಿಪತ್ರಗಳು ಮಾತ್ರವಲ್ಲ ಫಾರ್ಮ್ ಹದಿನೈದರಲ್ಲಿ ಪ್ರದರ್ಶಿಸಲಾದ ಉಮೇದ್ವಾರರ ವಿವರಗಳೂ ಮಲಯಾಳ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರವೇ ಇದ್ದುದರಿಂದ ಕನ್ನಡ ಮಾತ್ರ ಅರಿತ ಸಾಮಾನ್ಯ ಕನ್ನಡಿಗ ಮತದಾರರು ಸಂಕಷ್ಟಕ್ಕೊಳಗಾದರು.

ರಾಜಕೀಯ ಪ್ರೇರಣೆ?
ಕನ್ನಡದಲ್ಲಿ ಮತದಾರ ಚೀಟಿ ಹಾಗೂ ಮತ ದಾರ ಪಟ್ಟಿ ಒದಗಿಸಬೇಕೆಂದು ಪ್ರಮುಖ ರಾಜ ಕೀಯ ಪಕ್ಷಗಳಾದ ಮುಸ್ಲಿಂಲೀಗ್‌ ಮತ್ತು ಬಿ.ಜೆ.ಪಿ. ಒತ್ತಾಯಿಸಿದ್ದರೂ ಅವರ ಮನವಿಗಳನ್ನು ಜಿಲ್ಲಾಡಳಿತ ನಿರ್ಲಕ್ಷಿಸಿದ್ದರ ಹಿಂದೆ ರಾಜಕೀಯ ಪ್ರೇರಣೆಯಿದೆ ಎನ್ನಲಾಗುತ್ತಿದೆ. ಚುನಾವಣ ಆಯೋಗದ ಜಾಲತಾಣದಲ್ಲೂ ಮತದಾರ ಪಟ್ಟಿ ಯನ್ನು ಕನ್ನಡದಲ್ಲಿ ಮುದ್ರಿಸಲಾಗಿರಲಿಲ್ಲ.

ಕನ್ನಡ ಬಲ್ಲ ನೌಕರರನ್ನು ಮಲಯಾಳ ಪ್ರದೇಶದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದರೆ ಕನ್ನಡ ಪ್ರದೇಶದಲ್ಲಿ ನಿಯುಕ್ತರಾದ ಅ ಧಿಕಾರಿಗಳಲ್ಲಿ ಹಲವರಿಗೆ ಕನ್ನಡದ ಗಂಧಗಾಳಿಯಿರಲಿಲ್ಲ. ಮಾತ್ರವಲ್ಲ ಕನ್ನಡ ಪ್ರದೇಶದಲ್ಲಿ ನಿಯುಕ್ತರಾದ ಚುನಾವಣಾಧಿಕಾರಿಗಳು ಹಾಗೂ ನೌಕರರು ಉದ್ದೇಶಪೂರ್ವಕ ವಿಳಂಬನೀತಿ ಅನುಸರಿಸಿ ಮತದಾರರನ್ನು ನಿರುತ್ತೇಜಿಸುತ್ತಿದ್ದರು ಎಂಬ ಆರೋಪವೂ ಈ ಬಾರಿ ಕೇಳಿಬಂದಿದೆ. ಕನ್ನಡ ಭಾಷೆ ಹಾಗೂ ಕನ್ನಡ ಮತದಾರರ ಬಗೆಗಿನ ಇಂತಹ ನಿರ್ಲಕ್ಷÂ ಧೋರಣೆಯನ್ನು ಯಾವುದೇ ರಾಜಕೀಯ ಪಕ್ಷದ ನಾಯಕರಾಗಲೀ ಕಾರ್ಯಕರ್ತರಾಗಲೀ ಪ್ರತಿಭಟಿಸದಿರುವುದು ಕೂಡ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಡಿಸಿ ಕಚೇರಿ ನೌಕರರ ಕನ್ನಡ ವಿರೋಧಿ ಧೋರಣೆ ಕಾರಣ
ಜಿಲ್ಲಾ ಚುನಾವಣಾ ಧಿಕಾರಿಗಳಾದ ಜಿಲ್ಲಾ ಧಿಕಾರಿ ಕಚೇರಿಯಲ್ಲಿರುವ ಕೆಲವು ಮಂದಿ ನೌಕರರ ಕನ್ನಡ ವಿರೋಧಿ  ರಾಜಕೀಯ ಧೋರಣೆಗಳು ಈ ನಿರ್ಲಕ್ಷ್ಯಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳಲ್ಲಿ ಕನ್ನಡದಲ್ಲಿ ಯಾವುದೇ ಮಾಹಿತಿಗಳನ್ನು ನೀಡದೆ ಮತದಾನವನ್ನು ನಿರುತ್ತೇಜಿಸುವ ಮೂಲಕ ಇಲ್ಲಿ ಬಲಿಷ್ಠವಲ್ಲದ ರಾಜಕೀಯ ಪಕ್ಷವೊಂದಕ್ಕೆ ಅನುಕೂಲ ಮಾಡಿಕೊಡುವ ತಂತ್ರವನ್ನು ಅನುಸರಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನು ಸಮರ್ಥಿಸುವಂತೆ ಕನ್ನಡಿಗ ಮತದಾರರಲ್ಲಿ ಹಲವರಿಗೆ ಸರಿಯಾದ ಮಾಹಿತಿ ದೊರೆಯದೆ ಮಾರ್ಗದರ್ಶನವಿಲ್ಲದೆ ಮತ ಚಲಾಯಿಸದೆ ಮರಳಿದರು. ಇದರಿಂದ ಮತಚಲಾವಣೆಯ ಪ್ರಮಾಣ ಕಡಿಮೆಯಾಯಿತೆನ್ನಲಾಗಿದೆ.

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.