ಕಾಸರಗೋಡು : ಅಂಧ ಮತದಾತರ ಸಹಾಯಕರಿಗೆ ಅನುಮತಿ
Team Udayavani, Apr 10, 2019, 6:41 PM IST
ಬದಿಯಡ್ಕ: ಮತಗಟ್ಟೆಯಲ್ಲಿ ಅಂಧ ಮತದಾತರ ಸಹಾಯಕ್ಕೆ ಬರುವ ಒಬ್ಬ ವ್ಯಕ್ತಿಗೆ ಅನುಮತಿಯಿದೆ. ಒಬ್ಬರಿಗಿಂತ ಅಧಿಕ ಮಂದಿಗೆ ಅನುಮತಿಯಿಲ್ಲ. ಸಹಾಯಕರಿಗೆ 18 ವರ್ಷ ಪ್ರಾಯ ಪೂರ್ಣಗೊಂಡಿರಬೇಕು. ಸಹಾಯಕನ ಬಲಗೈ ಹೆಬ್ಬರಳಿಗೆ ಶಾಯಿ ಗುರುತು ನಡೆಸಲಾಗುವುದು. ಜಿಲ್ಲೆಯಲ್ಲಿ 71 ಮತಗಟ್ಟೆಗಳಲ್ಲಿ ಪ್ರತ್ಯೇಕ ತರಬೇತಿ ಪಡೆಯಲಾದ ಮೈಕ್ರೋ ನಿರೀಕ್ಷಕರನ್ನು ನೇಮಿಸಲಾಗುವುದು. ಮತದಾನ ಮುಗಿಯುವವರೆಗೆ ಅವರು ಮತಗಟ್ಟೆಯಲ್ಲಿರುವರು.
ಸಮಸ್ಯಾತ್ಮಕ 43 ಬೂತ್‌ಗಳ ಚಟುವಟಿಕೆ ಚುನಾವಣೆ ನಿರೀಕ್ಷಕರ ನಿಯಂತ್ರಣದಲ್ಲಿರುವುದು. ಇಲ್ಲಿ ಆನ್ ಲೈನ್ ವೆಬ್ ಕೆಮರಾಗಳನ್ನು ಸ್ಥಾಪಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಜ್ಜುಗೊಳಿಸಲಾದ ನಿಯಂತ್ರಣ ಕೊಠಡಿಯಲ್ಲಿ ನಿರೀಕ್ಷಕ ಇಲ್ಲಿನ ಚಲನವಲನಗಳನ್ನು ನಿರೀಕ್ಷಿಸುವರು. ಯಾವುದೇ ಸಮಸ್ಯೆಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮುನ್ನೆಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.