ಪುನ:ಶ್ಚೇತನಕ್ಕೆ ಕಾಯುತ್ತಿರುವ ಮಧೂರು ಸಮೀಪದ ಪರಕ್ಕಿಲ ಕೆರೆ


Team Udayavani, May 5, 2019, 6:20 AM IST

kere

ಕಾಸರಗೋಡು : ಜಿಲ್ಲೆಯಲ್ಲಿ ಸಾಕಷ್ಟು ಜಲ ಸಂಪನ್ಮೂಲಗಳಿವೆ. ರಾಜ್ಯದಲ್ಲೇ ಅತ್ಯಂತ ಹೆಚ್ಚು ನದಿ ಹರಿಯುವ ಕಾಸರಗೋಡು ಜಿಲ್ಲೆಯಲ್ಲಿ ಪ್ರಮುಖವಾಗಿ 11 ಹೊಳೆಗಳಿವೆ. ಇನ್ನು ಉಪ ಹೊಳೆಗಳು ಅನೇಕವಿದೆ. ಹಲವಾರು ಕೆರೆ, ಮದಗಗಳು ಇವೆ. ಶಿಥಿಲಾವಸ್ಥೆಯಲ್ಲಿರುವ ಜಲಸಂಪನ್ಮೂಲಗಳನ್ನು ಪುನ:ಶ್ಚೇತನಗೊಳಿಸಿದ್ದಲ್ಲಿ ಕಾಸರಗೋಡಿನ ಜನರಿಗೆ ನೀರಿನ ಸಮಸ್ಯೆ ಇರದು.

ಅವುಗಳಲ್ಲೊಂದು ಪುನ:ಶ್ಚೇತನಕ್ಕೆ ಕಾಯುತ್ತಿರುವ ಮಧೂರು ಪರಕ್ಕಿಲ ಕೆರೆ. ಈ ಕೆರೆಗೆ ಪುನ:ಶ್ಚೇತನ ನೀಡಿದ್ದಲ್ಲಿ ಕೃಷಿಕರ ಪಾಲಿಗೆ ವರದಾನವಾಗಲಿದೆ. ಕೆರೆಗೆ ಪುನ:ಶ್ಚೇತನ ಲಭಿಸಿಬೇಕಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಇಚ್ಛಾಶಕ್ತಿ ಬೇಕು.

ಕಡು ಬೇಸಿಗೆಯಲ್ಲೂ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವುಳ್ಳ ಅಪೂರ್ವ ಕೆರೆಯೊಂದು ಮಧೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಪರಕ್ಕಿಲದಲ್ಲಿದೆ. ವರ್ಷ ಪೂರ್ತಿ ನೀರು ತುಂಬಿಕೊಂಡಿರುವ ಈ ಕೆರೆ ಅವಗಣನೆಯಿಂದಾಗಿ ಅವನತಿಯ ಅಂಚಿಗೆ ಸರಿಯುತ್ತಿದೆ.

ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿಕೊಂಡಿರುವ ವಿಶಾಲ ಕೆರೆಗೆ ಶತಮಾನದ ಇತಿಹಾಸವಿದೆ. ವಿಶಾಲವಾದ ಕೆರೆಯಲ್ಲಿ ಹೂಳು ತುಂಬಿಕೊಂಡು ತನ್ನ ಒಡಲಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಮಧೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಅತ್ಯಂತ ದೊಡ್ಡ ಕೆರೆಯೆಂದೇ ಗುರುತಿಸಿಕೊಂಡಿರುವ ಪರಕ್ಕಿಲ ಕೆರೆ ಜಲಸಂರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.

ನಿರಂತರ ನೀರಿನಿಂದ ತುಂಬಿ ತುಳುಕುತ್ತಿದ್ದ ಈ ಕೆರೆ ಕೃಷಿಕರ ಪಾಲಿಗೆ ಜೀವನಾಡಿಯಾಗಿದೆ. ಈ ಕೆರೆಗೆ ಪುನ:ಶ್ಚೇತನ ನೀಡಬಹುದಾಗಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕೆರೆಯ ಬಗ್ಗೆ ನಿರ್ಲಕ್ಷÂ ತೋರುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಈ ಕರೆ ಅವನತಿಯತ್ತ ಸಾಗುತ್ತಿದೆ. ಈ ಕೆರೆಯಲ್ಲಿ ನೀರು ತುಂಬಿಕೊಂಡಿದ್ದರೆ ಆಸುಪಾಸಿನ ಬಾವಿ, ಕೆರೆಗಳಲ್ಲೂ ಅಂತರ್ಜಲ ಮಟ್ಟ ಹೆಚ್ಚುತ್ತದೆ.

ಕಾಯಕಲ್ಪ ಬೇಕು : ಮಧೂರು ಪಂಚಾಯತ್‌ನ ಜನರ ಜೀವನಾಡಿಯಾಗಿರುವ ಪರಕ್ಕಿಲ ಕೆರೆಯನ್ನು ಸಂರಕ್ಷಿಸಲು ಕಾಯಕಲ್ಪ ನಡೆಯಬೇಕು. ಶತಮಾನ ಕಂಡಿರುವ ಪರಕ್ಕಿಲ ಕೆರೆಯಲ್ಲಿ ತುಂಬಿಕೊಂಡಿರುವ ಹೂಳು ಎತ್ತುವುದರಿಂದ ಕೆರೆಯಲ್ಲಿ ನೀರು ತುಂಬಿ ತುಳಕಲಿದೆ. ಇದೀಗ ಹೂಳು ತುಂಬಿಕೊಂಡಿರುವುದರಿಂದ ನೀರಿನ ಸಂಗ್ರಹವೂ ಕುಸಿದಿದೆ. ನಾಲ್ಕೂ ಬದಿಯಿಂದ ಆವರಣ ಗೋಡೆ ನಿರ್ಮಿಸುವುದರ ಮೂಲಕ ಮಳೆ ನೀರಿನೊಂದಿಗೆ ಹರಿದು ಬರುವ ಹೂಳು ತುಂಬುವುದನ್ನು ತಡೆಗಟ್ಟಬಹುದು.

ಹೂಳು ತುಂಬುವುದನ್ನು ತಡೆಗಟ್ಟುವುದರಿಂದ ವರ್ಷ ಪೂರ್ತಿ ನೀರು ಸಂರಕ್ಷಿಸಬಹುದು. ಇದು ಕೃಷಿಕರಿಗೆ ಮತ್ತು ಸ್ಥಳೀಯರಿಗೆ ವರದಾನವಾಗಬಹುದು.

ಮದಗ ಸಂರಕ್ಷಣೆ : ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳು, ಮದಗಗಳು ಇವೆ. ಅವುಗಳಲ್ಲಿ ಹಲವು ಈಗಾಗಲೇ ಶಿಥಿಲಾವಸ್ಥೆಗೆ ತಲುಪಿದೆ. ಇವುಗಳಲ್ಲಿ ಪ್ರಮುಖ ಮದಗಗಳಾದ ಪೈವಳಿಕೆ ಬಾಯಿಕಟ್ಟೆ, ಪುತ್ತಿಗೆಯ ಅನೋಡಿಪಳ್ಳ, ಎಣ್ಮಕಜೆಯ ಬೆದ್ರಂಪಳ್ಳ ಮೊದಲಾದವುಗಳನ್ನು ಸಂರಕ್ಷಿಸಬೇಕಾಗಿದೆ.

ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಮದಗಗಳನ್ನು ಸಂರಕ್ಷಿಸಲು ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರನ್ನು ಬಳಸಿಕೊಳ್ಳಬೇಕೆಂದು ಸಾರ್ವತ್ರಿಕವಾಗಿ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಈ ಕಾರ್ಮಿಕರನ್ನು ಜಲ ಸಂರಕ್ಷಣೆಯ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕೆಂದೂ ಆಗ್ರಹಿಸುತ್ತಿದ್ದಾರೆ.

ಇನ್ನೂ ಸಾಕಾರಗೊಳ್ಳದ ಅಭಿವೃದ್ಧಿ ಯೋಜನೆ : ವರ್ಷಪೂರ್ತಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವುಳ್ಳ ಪರಕ್ಕಿಲ ಕೆರೆಯನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಪಂಚಾಯತ್‌ ಯೋಜನೆ ಹಾಕಿಕೊಂಡಿತ್ತು. ಆದರೆ ಈ ವರೆಗೂ ಜಿಲ್ಲಾ ಪಂಚಾಯತ್‌ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯಾವುದೇ ಪ್ರಾಥಮಿಕ ಪ್ರಕ್ರಿಯೆಯನ್ನೂ ಆರಂಭಿಸಿಲ್ಲ.
ಮಧೂರು ಗ್ರಾಮ ಪಂಚಾಯತ್‌ ಪರಕ್ಕಿಲ ಕೆರೆಯನ್ನು ಅಭಿವೃದ್ಧಿ ಪಡಿಸುವಂತೆ ನಿರಂತರವಾಗಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುತ್ತಲೇ ಬಂದಿದೆ.

ಆದರೆ ಮನವಿಗೆ ಸ್ಪಂದನೆ ಲಭಿಸಿಲ್ಲ. ಈ ಕಾರಣದಿಂದಾಗಿ ಪರಕ್ಕಿಲ ಕೆರೆ ಅವನತಿಗೆ ಸರಿಯುತ್ತಿದೆ. ಸಂಪೂರ್ಣ ಅವನತಿಗೆ ಸರಿಯುವ ಮುನ್ನವೇ ಕೆರೆಗೆ ಪುನ:ಶ್ಚೇತನ ನೀಡಲು ಮುಂದಾದರೆ ಮಧೂರು ಗ್ರಾಮ ಪಂಚಾಯತ್‌ನಲ್ಲಿ ಅನುಭವಿಸುತ್ತಿರುವ ನೀರಿನ ಸಮಸ್ಯೆಗೆ ತಕ್ಕ ಮಟ್ಟಿಗೆ ಪರಿಹಾರ ಲಭಿಸಬಹುದುಕಾನೂನನ್ನು ಕಡ್ಡಾಯಗೊಳಿಸಲಾಗಿದೆ.

ಜಲಸಂರಕ್ಷಣೆಗೆ ಆದ್ಯತೆ
ನೀಪರಕ್ಕಿಲ ಕೆರೆಯ ಅಭಿವೃದ್ಧಿಗೆ ಪಂಚಾಯತ್‌ನಿಂದ ನಿರಂತರವಾಗಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುತ್ತಿದ್ದೇವೆ. ಪಂಚಾಯತ್‌ಗೆ ಸೀಮಿತ ಅನುದಾನ ಇರುವುದರಿಂದ ಈ ಕೆರೆ ಅಭಿವೃದ್ಧಿ ಹೊಣೆಯನ್ನು ಕಿರು ನೀರಾವರಿ ಇಲಾಖೆ ಅಥವಾ ಜಿಲ್ಲಾ ಪಂಚಾಯತ್‌ ವಹಿಸಿಕೊಳ್ಳಬೇಕಾದುದು ಅನಿವಾರ್ಯ. ಈ ಬಗ್ಗೆ ಎರಡು ವರ್ಷಗಳಿಂದ ಮನವಿ ಸಲ್ಲಿಸಿದ್ದೇವೆ. ಕೆರೆಯ ನೀರನ್ನು ಕೃಷಿಗೆ ಬಳಸಿ ಜಲಸಂರಕ್ಷಣೆಗೆ ಆದ್ಯತೆ ನೀಡಲಾಗುವುದು.
ಮಾಲತಿ ಸುರೇಶ್‌, ಅಧ್ಯಕ್ಷೆ ಮಧೂರು ಗ್ರಾಮ ಪಂಚಾಯತ್‌

ಅಭಿವೃದ್ಧಿ ಪ್ಯಾಕೇಜ್‌
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಜಲ ಸಂರಕ್ಷಣೆ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು.
ಜಲಾಶಯ ಕಡಿಮೆಯಾದ ಐದು ನದಿಗಳ ಮತ್ತು ನದಿ ತೀರ ಪ್ರದೇಶಗಳಲ್ಲಿ ಜಲ ಸಂಗ್ರಹ ಪ್ರಕ್ರಿಯೆಯನ್ನು ಪ್ರಥಮ ಹಂತದಲ್ಲಿ ಜಾರಿಗೊಳಿಸಲಾಗುವುದು.
ಕೊಳವೆ ಬಾವಿಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ ತೆರೆದ ಬಾವಿಗಳ ಸಾಧ್ಯತೆಯನ್ನು ಹೆಚ್ಚಿಸಲಾಗುವುದು.
ಕೃಷಿ ಪ್ರದೇಶಗಳನ್ನು ಹೆಚ್ಚಿಸಿ ಅಲ್ಲಿಗೂ ನೀರು ತಲುಪಿಸಲಾಗುವುದು.
ಡಾ| ಡಿ.ಸಜಿತ್‌ಬಾಬು, ಜಿಲ್ಲಾಧಿಕಾರಿ

– ಪ್ರದೀಪ್‌ ಬೇಕಲ್‌

ಟಾಪ್ ನ್ಯೂಸ್

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

15-

Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.