ಅಲೆಮಾರಿ ದನಗಳ ವಿಶ್ರಾಂತಿ ತಾಣ
Team Udayavani, Sep 19, 2017, 5:20 PM IST
ಕುಂಬಳೆ: ಸದಾ ಜನಜಂಗುಳಿಯ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಜನಗಳೊಂದಿಗೆ ದನಗಳನ್ನೂ ಕಾಣಬಹುದು. ಇಲ್ಲಿ ರಾತ್ರಿ ಹಗಲೆನ್ನದೆ ಅಲೆಮಾರಿ ದನಗಳು ಠಿಕಾಣಿ ಹೂಡಿರುತ್ತವೆ. ಸುಮಾರು ಒಂದು ಡಜನ್‌ನಷ್ಟು ದಷ್ಟಪುಷ್ಟ ಜಾನುವಾರುಗಳ ಹಿಂಡು ಲಂಗು ಲಗಾಮಿಲ್ಲದೆ ನಿಲ್ದಾಣದ ಒಳಗೆ ಮತ್ತು ಹೊರಗೆ ಸದಾ ಸ್ವೇಚ್ಛೆಯಿಂದ ವಿಶ್ರಾಂತಿ ಪಡೆಯುತ್ತಿರುವ ದೃಶ್ಯವನ್ನು ನಿತ್ಯಕಾಣಬಹುದಾಗಿದೆ.
ಇದರಿಂದಾಗಿ ಹಲವಾರು ಬಸ್ಸುಗಳಿಗೆ ಸೂಚಿಸಿದ ನಿರ್ದಿಷ್ಟ ಸ್ಥಳದಲ್ಲಿ ತಂಗಲು ಮತ್ತು ಪ್ರಯಾಣಿಕರಿಗೆ ಇಲ್ಲಿಂದ ಬಸ್ ಏರಲು ತೊಂದರೆಯಾಗುವುದು. ಇದು ಇಂದು ನಿನ್ನೆಯ ಕಥೆಯಲ್ಲ. ಹಲವಾರು ತಿಂಗಳುಗಳಿಂದಲೂ ಜಾನುವಾರುಗಳು ಇಲ್ಲಿ ಸ್ವತಂತ್ರವಾಗಿ ವಿಹರಿಸುತ್ತಿವೆ. ನಿಲ್ದಾಣದ ಹೊರಗಿನ ಇಂಟರ್‌ಲಾಕ್ ಅಳವಡಿಸಿದ ವಿಶಾಲವಾಗಿರುವ ರಸ್ತೆಯಲ್ಲಿ ಜಾನುವಾರುಗಳು ಮಲಗಿರುವುದರಿಂದ ಬಸ್‌ಗಳ ಸುಗಮ ಸಂಚಾರಕ್ಕೆ ತೊಡಕ್ಕಾಗುತ್ತಿದೆ. ಆದರೆ ಜಾನುವಾರುಗಳ ಮಾಲಿಕರಾಗಲಿ ಕಾಲೂನು ಪಾಲಕರಾಗಲಿ ಇದನ್ನು ಈ ತನಕ ಗಂಭೀರವಾಗಿ ಪರಿಗಣಿಸಲಿಲ್ಲ.
ಜಾನುವಾರುಗಳನ್ನು ಸಾರ್ವಜನಿಕವಾಗಿ ಬೇಕಾಬಿಟ್ಟಿ ಬಿಡಬಾರದು. ಸಾರ್ವ ಜನಿಕರಿಗೆ ಜಾನುವಾರುಗಳಿಂದ ತೊಂದರೆಯಾಗಬಾರದು. ಕಟ್ಟಿ ಹಾಕಿ ಸಾಕಬೇಕೆಂಬುದಾಗಿ ಎಂದೋ ಕಾನೂನು ಜಾರಿಯಲ್ಲಿದ್ದರೂ ಇದು ತಮಗೆ ಬಾಧಕವಲ್ಲವೆಂಬುದಾಗಿ ಈ ಜಾನುವಾರು ಸಾಕಣೆದಾರರ ನಿಲುವೆಂಬ ಆರೋಪ ಸಾರ್ವಜನಿಕರದು. ಸಾರ್ವಜನಿಕರಿಗೆ ಕಿರುಕುಳವಾಗುವ ಇದರ ವಿರುದ್ಧ ಕಾನೂನು ಪಾಲಕರೂ ಮುಂದಾಗ ದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ರಾತ್ರಿ ಪೊಲೀಸರ ಗಸ್ತು ತಿರುಗಾಟ ದಿಂದಾಗಿ ಈ ಜಾನುವಾರಗಳಿಗೆ ಕಳ್ಳರಿಂದ ರಕ್ಷಣೆ ದೊರೆಯುತ್ತಿದೆ.
ಈ ರೀತಿ ಜಾನುವಾರುಗಳನ್ನು ಲಂಗುಲಗಾಮಿಲ್ಲದೆ ಬಿಡುವು ದರಿಂದ ಇದರ ಲಾಭವನ್ನು ಗೋ ಸಾಗಾಟಗಾರರು ಪಡೆಯುತ್ತಿದ್ದಾರೆ. ದನ ಕರುಹಾಕಿದಾಗ ಮಾತ್ರ ತಮ್ಮ ಜಾನುವಾರುಗಳನ್ನು ಗುರುತಿಸಿ ಹಟ್ಟಿಗೊಯ್ಯುವ ಮಾಲಕರು ಉಳಿದ ದಿಗಳಲ್ಲಿ ತಮ್ಮ ಜಾನುವಾರುಗಳತ್ತ ಗಮನ ಹರಿಸದಿರುವುದು. ಗೋ ಕಳ್ಳರಿಗೆ ವರದಾನವಾಗುವುದು.
ಗುಡ್ಡದಿಂದ ಹಗಲು ರಾತ್ರಿ ಎನ್ನದೆ ವಾಹನಗಳಲ್ಲಿ ದಿನದಿಂದ ದಿನಕ್ಕೆ ಜಾನುವಾರುಗಳನ್ನು ಕದ್ದೊಯ್ಯು ವುದರಿಂದ ದೇಶದ ಪ್ರಧಾನ ಸಂಪತ್ತುಗಳಲ್ಲಿ ಒಂದಾಗಿರುವ ಜಾನುವಾರುಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಪ್ರಕೃತಿಯ ಏರುಪೇರಿಗೆ ಕಾರಣವಾಗುತ್ತಿದೆ ಎಂಬುದು ವಿಷಾದನೀಯ ವಿಚಾರ.
ಅಚ್ಯುತ ಚೇವಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Kasaragod Crime News: ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಮೂವರ ಬಂಧನ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.