ಶೇ.10 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್
ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಟಿಕಾರಾಮ್ ಮೀಣ
Team Udayavani, Oct 6, 2019, 5:34 AM IST
ಕಾಸರಗೋಡು: ಮಂಜೇಶ್ವರ ವಿಧಾನಸಭೆಗೆ ಅ.21 ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಶೇ.10 ರಷ್ಟು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಕ್ಯಾಮರಾಗಳನ್ನು ಅಳವಡಿಸಲಾಗುವು ದೆಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಟಿಕಾರಾಮ್ ಮೀಣ ಹೇಳಿದ್ದಾರೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 198 ಮತಗಟ್ಟೆಗಳಿವೆ. ಈ ಪೈಕಿ 101 ಮತಗಟ್ಟೆಗಳಲ್ಲಿ ಸಂಘರ್ಷ ಸ್ಥಿತಿ ಉಂಟಾ ಗುವ ಸಾಧ್ಯತೆ ಇದೆ ಎಂದು ಪೊಲೀಸರು ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಈ ಪೈಕಿ 17 ಮತಗಟ್ಟೆಗಳು ಕೇರಳ- ಕರ್ನಾಟಕ ರಾಜ್ಯಗಳ ಗಡಿ ಪ್ರದೇಶದಲ್ಲಿ ಇವೆ. ಅವುಗಳೂ ಸೇರಿದಂತೆ ಒಟ್ಟು ಮತಗಟ್ಟೆಗಳ ಪೈಕಿ ಶೇ.10 ರಷ್ಟು ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಕ್ಯಾಮರಾ ಗಳನ್ನು ಅಳವಡಿಸಲಾಗುವುದು. ಇಂತಹ ಮತಗಟ್ಟೆಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಗಳನ್ನು ಇಂಟರ್‌ನೆಟ್‌ನಲ್ಲಿ ನೇರ ಪ್ರಸಾರ ನಡೆಸಲಾಗುವುದು. ಇಂತಹ ಕ್ರಮದಿಂದ ನಕಲಿ ಮತದಾನ, ವ್ಯಕ್ತಿಪಲ್ಲಟ ನಡೆಸಿ ಮತ ಚಲಾಯಿಸುವಿಕೆ ಇತ್ಯಾದಿ ಗಳನ್ನು ತಡೆಯಲು ಸಾಧ್ಯವಾ ಗಲಿದೆ. ನಕಲಿ ಮತದಾನವನ್ನು ಇದರಿಂದ ತಡೆಯ ಬಹುದೆಂದು ಆಯುಕ್ತರು ತಿಳಿಸಿದರು.
ಕಾಸರಗೋಡಿನಲ್ಲಿ ನಡೆದ ಚುನಾವಣೆ ಮತ್ತು ಪೊಲೀಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿ ಟಿಕಾರಾಮ್ ಮೀಣ ಅವರು ಮಾತನಾಡಿ ಅತೀ ಸೂಕ್ಷ¾ ಸಂವೇದಿ ಮತಗಟ್ಟೆಗಳ ಬಗ್ಗೆ ಮುಂದೆ ವರದಿ ಲಭಿಸಿದ್ದಲ್ಲಿ ಅದಕ್ಕೆ ಹೊಂದಿಕೊಂಡು ಇನ್ನಷ್ಟು ಮತಗಟ್ಟೆ ಗಳಲ್ಲಿ ವೆಬ್‌ಕಾಸ್ಟಿಂಗ್ ಕ್ಯಾಮರಾ ಸ್ಥಾಪಿಸ ಲಾಗುವುದು. ಚುನಾವಣಾ ಪ್ರಕ್ರಿಯೆಗಳ ಮೇಲೆ ಜನರು ಹೊಂದಿರುವ ನಂಬುಗೆ ಯನ್ನು ಇನ್ನಷ್ಟು ಹೆಚ್ಚಿಸಲು ಇಂತಹ ಕ್ರಮಗಳಿಂದ ಸಾಧ್ಯವಾಗಲಿದೆ ಎಂದರು.
ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ಕೇರಳ-ಕರ್ನಾಟಕ ಗಡಿ ಪ್ರದೇಶ ಗಳಲ್ಲಿ ಪೊಲೀಸ್-ಅಬಕಾರಿ ಮತ್ತು ಕಂದಾಯ ಇಲಾಖೆಗಳ ಸಂಯುಕ್ತ ತಂಡ ಗಳಿಂದ ಬಿಗು ತಪಾಸಣೆ ನಡೆಸಲಾ ಗುವುದು. ಉಪಚುನಾವಣೆ ವೇಳೆ ಬಿಗಿ ಭದ್ರತೆ ಏರ್ಪಡಿಸಲು ಕೇಂದ್ರ ಸರಕಾರ ಕೇರಳಕ್ಕೆ 10 ತುಕಡಿ ಕೇಂದ್ರ ಸೇನಾ ಪಡೆ ಮಂಜೂರುಮಾಡಿದೆ. ಮಂಜೇಶ್ವರ ಕ್ಷೇತ್ರಕ್ಕೆ ಅಗತ್ಯದಷ್ಟು ಕೇಂದ್ರ ಪಡೆ ಮತ್ತು ಪೊಲೀಸ್ ಪಡೆಯನ್ನು ಮಂಜೂರು ಮಾಡಲಾಗುವುದೆಂದು ಆಯುಕ್ತರು ತಿಳಿಸಿದ್ದಾರೆ.
ನೇರ ಭೇಟಿ
ಸೂಕ್ಷ ಸಂವೇದಿ ಎಂದು ಗುರುತಿಸಲಾಗಿ ರುವ ಮಂಜೇಶ್ವರ ವಿಧಾನಸಭೆಯ ಹಲವು ಮತಗಟ್ಟೆ ಕೇಂದ್ರಗಳಿಗೂ ಟಿಕಾರಾಮ್ ಮೀಣ ನೇರವಾಗಿ ಭೇಟಿ ನೀಡಿದರು.
ಅಗತ್ಯದ ಎಲ್ಲಾ ಕ್ರಮ
ನಿಷ್ಪಕ್ಷ, ನ್ಯಾಯಯುತ ಹಾಗು ಭಯರಹಿತವಾಗಿ ಮತ ಚಲಾಯಿಸಲು ಅಗತ್ಯದ ಎಲ್ಲಾ ಕ್ರಮ ಮತ್ತು ಅದಕ್ಕೆ ಹೊಂದಿಕೊಂಡು ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುವುದೆಂದು ಎಂದು ಟಿಕಾರಾಮ್ ಮೀಣ ಅವರು ಈ ಸಂದರ್ಭದಲ್ಲಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.