ಬಾರ್ಕೂರು ನಾಗರಥ ಯಾತ್ರೆಗೆ ಸ್ವಾಗತ
Team Udayavani, Apr 10, 2017, 5:46 PM IST
ಕುಂಬಳೆ: ಬಾರ್ಕೂರು ಮಹಾಸಂಸ್ಥಾನಂ ಭಾರ್ಗವಬೀಡು ಇಲ್ಲಿ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದಂಗಳವರ ನೇತೃತ್ವದಲ್ಲಿ ಶ್ರೀ ನಾಗದೇವರ ಮತ್ತು ಮೂಲ ದೈವಗಳ ಪುನರ್ ಪ್ರತಿಷ್ಠಾಪನೆ ಮತ್ತು ಪರಮ ಪವಿತ್ರ ಮಹಾ ನಾಗಮಂಡಲೋತ್ಸವವು ಎ. 19ರಿಂದ 21ರ ತನಕ ಜರಗಲಿರುವ ಕಾರ್ಯಕ್ರಮದ ಪೂರ್ವಭಾವಿಯಾಗಿ ಎ. 9ರಂದು ನಾಗರಥ ಯಾತ್ರೆಯು ಕಾಸರಗೋಡು ಜಿಲ್ಲೆಯ ವಿವಿಧ ಕಡೆಗಳಲ್ಲಿ ಪರ್ಯಟನೆ ನಡೆಯಿತು.
ನಾಗರಥ ಯಾತ್ರೆಗೆ ತಲಪಾಡಿ ವಿಶ್ವಾಸ್ ಆಡಿಟೋರಿ ಯಂನ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಸಮಾರಂಭದಲ್ಲಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಗಳು ಆಶೀರ್ವಚನ ನೀಡಿದರು.
ಭೂತಾಳ ಪಾಂಡ್ಯನ ಪಟ್ಟಾಧಿಕಾರದ ಮೂಲಕ ಪ್ರಾರಂಭಗೊಂಡು ಬಾಕೂìರು ಸಾಮ್ರಾಜ್ಯವು ಕರ್ನಾ ಟಕ ಇತಿಹಾಸದಲ್ಲಿ ಮೆರೆದ ಪ್ರಾಚೀನ ಸಂಸ್ಥಾನವೆಂದು ಇತಿಹಾಸ ದಾಖಲೆಗಳು ಸಾರುತ್ತವೆ. ತುಳುನಾಡಿನಲ್ಲಿ ಇಂದಿಗೂ ಶಾಸನಬದ್ಧವಾಗಿ ನಡೆದುಕೊಂಡು ಬರುತ್ತಿ ರುವ ಅಳಿಯಕಟ್ಟು ಪರಂಪರೆ ಪ್ರಾರಂಭವಾದ ಮೂಲ ನೆಲೆವೀಡಾಗಿದೆ. ಇಲ್ಲಿ ಖನನ ಮಾಡಿದಾಗ 36 ನಾಗನ ಹೆಡೆಗಳ ಅವಶೇಷಗಳು ದೊರೆತಿದ್ದು ಇದರ ಮರು ಪ್ರತಿಷ್ಠಾಪನೆ ನಡೆಯಲಿದೆ ಎಂದರು.
ಸಮಾರಂಭದಲ್ಲಿ ಕುಳೂರುಬೀಡು ದಾಸಣ್ಣ ಆಳ್ವ, ವಳಮಲೆ ಪದ್ಮನಾಭ ಶೆಟ್ಟಿ, ನ್ಯಾಯವಾದಿ ವಿ., ಬಾಲಕೃಷ್ಣ ಶೆಟ್ಟಿ, ಕೆ. ಸುಬ್ಬಣ್ಣ ಶೆಟ್ಟಿ, ಶ್ರೀನಿವಾಸ ಮರಿ ಭಟ್, ಚಂದ್ರಹಾಸ ರೈ ಕುತ್ತಾರುಗುತ್ತು, ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿ.ಕೆ. ಶೆಟ್ಟಿ, ರಾಜೇಶ್ ಆಳ್ವ, ಮಧು ಸೂದನ ಆಚಾರ್ಯ, ಮೀರಾ ಆಳ್ವ, ಜಯಂತಿ ಶೆಟ್ಟಿ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ. ಸದಾನಂದ ರೈ ಸ್ವಾಗತಿಸಿದರು. ಸಂಚಾಲಕ ಅರಿಬೈಲು ಗೋಪಾಲ ಶೆಟ್ಟಿ ಪ್ರಸ್ತಾವನೆಯೊಂದಿಗೆ ವಂದಿಸಿದರು.
ಹೊಸಂಗಡಿ, ಐಲ, ಶಿರಿಯ, ಕುಂಬಳೆ, ಸೀತಾಂಗೋಳಿ, ಬದಿಯಡ್ಕ ಮೊದಲಾದೆಡೆ ಯಾತ್ರೆ ಪರ್ಯಟನೆ ನಡೆಸಿ ಸಂಜೆ ಪೆರ್ಲದಲ್ಲಿ ಸಮಾರೋಪಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.