ಎಂಥಾ ಮರಳಯ್ಯಾ ಇದು ಎಂಥಾ ಮರಳು ..?
Team Udayavani, Aug 2, 2018, 6:30 AM IST
ಕುಂಬಳೆ: ಹೊಳೆ ಮತ್ತು ಸಮುದ್ರ ಕಿನಾರೆಯಿಂದ ಮರಳು ತೆಗೆಯಲು ಸರಕಾರ ಕಾನೂನಿನ ಬಿಗಿ ನಿಲುವು ತಾಳಿದುದರಿಂದಾಗಿ ವ್ಯಾಪಕ ಮರಳು ಕ್ಷಾಮ ತಲೆದೋರಿದೆ. ಇದರಿಂದ ಬಡವರು ಸಂಕಷ್ಟಕ್ಕೀಡಾಗಿದ್ದಾರೆ. ಸ್ಥಳೀಯಾಡಳಿತದಿಂದ, ಇನ್ನಿತರ ಸಂಘ ಸಂಸ್ಥೆಗಳ, ದಾನಿಗಳ ನೆರವಿನಿಂದ ಕಡು ಬಡವರಿಗೆ ಮನೆ ಕಟ್ಟಲು ಅಸಾಧ್ಯವಾಗಿದೆ.
ಆದರೆ ಕಾಸರಗೋಡು ಜಿಲ್ಲೆಯ ಕೆಲ ಕಡೆಗಳಲ್ಲಿ ಸಮುದ್ರ ಮತ್ತು ಹೊಳೆ ದಡಗಳಿಂದ ಅಧಿಕೃತ ಮತ್ತು ಅನಧಿಕೃತ ಮರಳು ಎತ್ತುವ ಮತ್ತು ಸಾಗಾಟ ದಂಧೆ ನಡೆಯುತ್ತಿದೆ.
ಮರಳು ನೀತಿಯ ಬಿಗಿ ನಿಲುವಿನಲ್ಲೂ ಕರ್ನಾಟಕದಿಂದ ಬೆಳ್ಳಂಬೆಳ್ಳಗೆ ಗ್ರಾಮೀಣ ಪ್ರದೇಶದ ಒಳ ರಸ್ತೆಗಳಲ್ಲಿ ಮರಳು ಹೇರಿದ ಲಾರಿಗಳು ಯಥೇತ್ಛವಾಗಿ ರಾಜ್ಯದ ದೂರದೂರಿಗೆ ಸಾಗುತ್ತಿವೆ. ಇದರ ಹಿಂದೆ ಮುಂದೆ ಬೈಕ್ ಕಾರುಗಳಲ್ಲಿ ಮಾಹಿತಿದಾರರು ಬೆಂಗಾವಲಾಗಿರುತ್ತಾರೆ. ಮಾತ್ರವಲ್ಲದೆ ಕೆಲವು ಪೊಲೀಸರ ಮೌಖೀಕ ಸಮ್ಮತಿಯೊಂದಿಗೆ ಮರಳು ಲಾರಿಗಳ ಪ್ರಯಾಣ ಸುಗಮವಾಗಿ ಸಾಗುತ್ತಿವೆೆ. ತಿಂಗಳಿಗೆ ಇಂತಿಷ್ಟು ಎಂಬ ಕರಾರಿನೊಂದಿಗೆ ಅಕ್ರಮ ಹೊಯಿಗೆ ಸಾಗಾಟ ಸಾರಾಸಗಟಾಗಿ ನಡೆಯುತ್ತಿದೆ.ಜನರು ಹಾಸಿಗೆಯಿಂದ ಏಳುವ ಮೊದಲು, ಸೂರ್ಯನ ಬೆಳಕು ಹರಿಯುವ ಮುನ್ನವೇ ನಿರ್ದಿಷ್ಟ ಸಮಯದಲ್ಲಿ ಲಾರಿ ಸಾಗಲು ಕೆಲವು ಪೊಲೀಸರು ಅನುವು ಮಾಡಿಕೊಡುತ್ತಿರು ವರೆಂಬ ಆರೋಪ ಬಲವಾಗಿದೆ.
ಚಿಲ್ಲರೆ ಸಾಗಾಟಕ್ಕೆ ಬಲಪ್ರಯೋಗ
ಪ್ರಕೃತ ಕಾಯಿದೆಯ ಬಿಗಿ ಮುಷ್ಟಿ ಯಲ್ಲಿರುವ ಹೊಯಿಗೆಗೆ ಚಿನ್ನದ ಬೆಲೆ ಲಭಿಸುತ್ತಿದೆ. ಆದರೆ ಅತಿ ಅಗತ್ಯದ ಮನೆ ಕೆಲಸಕ್ಕೆ ಕಾನೂನಿನ ಭಯದಲ್ಲಿ ಟೆಂಪೊ, ಅಟೊರಿಕ್ಷಾದಲ್ಲಿ ಕೆಲವು ಚೀಲಗಳನ್ನು ಸಾಗಿಸುವಾಗ ಪೊಲೀಸರು ಬೆಂಬತ್ತಿ ವಾಹನ ಸಮೇತ ಹೊಯಿಗೆ ವಶ ಪಡಿಸಿ ಕೊಳ್ಳುತ್ತಿ ದ್ದಾರೆ. ಈ ಸಾಗಾಟದಾರರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ಆದರೆ ಲಾರಿಗಟ್ಟಲೆ ಮರಳು ಸಾಗಿಸುವಾಗ ಕಣ್ಣು ಮುಚ್ಚಿ ಕಂಡೂ ಕಾಣದಂತೆ ನಟಿಸುತ್ತಾರೆ.
ಕಾಯಿದೆ ಸರಳಗೊಳಿಸಬೇಕಾಗಿದೆ
ಶ್ರೀಮಂತರು ಮನೆ ಇನ್ನಿತರ ಭವ್ಯ ಕಟ್ಟಡಗಳನ್ನು ನಿರ್ಮಿಸಲು ಚಿನ್ನದ ಬೆಲೆ ನೀಡಿ ಮರಳು ಪಡೆಯುತ್ತಾರೆ. ಆದರೆ ಹೊಯಿಗೆ ದೊರಕದೆ ಬಡವರ ಅದೆಷೋr ಮನೆಗಳು ಇನ್ನೂ ಪೂರ್ಣಗೊಳ್ಳದೆ ಅರ್ಧದಲ್ಲೇ ಉಳಿದಿವೆೆ.ಆದುದರಿಂದ ಮರಳು ತೆಗೆಯಲು ಮತ್ತು ಸಾಗಾಟಕ್ಕಿರುವ ಕಾನೂನನ್ನು ಸರಕಾರ ಸಡಿಲಗೊಳಿಸಬೇಕಾಗಿದೆ. ಬಡವರ ಮನೆ ನಿರ್ಮಾಣಕ್ಕೆ ಹೊಯಿಗೆ ಸಾಗಿಸಲು ಪರವಾನಿಗೆ ನೀಡಬೇಕಾಗಿದೆ. ಬಡವರಿಗೆ ಸರಕಾರದಿಂದ ಮನೆ ನಿರ್ಮಿಸಲು ಲಭಿಸುವ ಸವಲತ್ತಿಗೆ ಸರಕಾರ ಕಾನೂನಿನ ಬಿಗು ನಿಲುವನ್ನು ಸಡಿಲಿಸಿ ಹೊಯಿಗೆ ಖರೀದಿಸಲು ಪರವಾನಿಗೆ ನೀಡಬೇಕಾಗಿದೆ. ಹಾಗಾದಲ್ಲಿ ಬಡವರಿಗೆ ಸಹಕಾರಿಯಾಗಲಿದೆ. ಹೊಯಿಗೆ ಎತ್ತುವಲ್ಲಿ ಮತ್ತು ಸಾಗಾಟದಲ್ಲಿ ಸರಕಾರ ಈ ಕುರಿತು ಗಂಭೀರ ಚಿಂತನೆ ನಡೆಸಬೇಕಾಗಿದೆ.ಸಮಸ್ಯೆಗೆ ಪರಿಹಾರ ಕಾಣಬೇಕಾಗಿದೆ.
ಚಿತ್ರ : ಶ್ರೀಕಾಂತ್ ಕಾಸರಗೋಡು
ಸಾಗಾಟಕ್ಕಾಗಿ ಸಂಗ್ರಹಿಸಲಾಗಿರುವ ಮರಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
MRPL ನಲ್ಲಿ ಉದ್ಯೋಗ ಆಮಿಷ: ಯುವಕನಿಗೆ 1 ಲಕ್ಷ ರೂ.ವಂಚನೆ
Karkala; ಕೋರ್ಟ್‌ಗೆ ಹಾಜರಾದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.