ಅಡುಗೆಮನೆಗಳು ಔಷಧಾಲಯಗಳಾಗಲಿ: ಕೊಂಡೆವೂರು ಶ್ರೀ
ಕೊಂಡೆವೂರಿನಲ್ಲಿ ಆಯು ಸಂಭ್ರಮ ವಿಶೇಷ ಕಾರ್ಯಕ್ರಮ
Team Udayavani, Aug 5, 2019, 5:24 AM IST
ವಿದ್ಯಾನಗರ: ಶರೀರಮಾದ್ಯಂ ಎಂಬಂತೆ ಏನೇ ಸಾಧನೆ ಮಾಡಬೇಕಾದರೂ ನಮ್ಮ ಶರೀರ ಮೊದಲು ಬೇಕು. ನಾಲಿಗೆ ಚಪಲ, ಇಂದ್ರಿಯ ಚಪಲಗಳಿಂದಾಗಿ ಶರೀರದ ಕಡೆಗಿನ ಗಮನ ಕಡಿಮೆಯಾಗುತ್ತಿದ್ದು ಆಯುರ್ವೇದ ಶಾಸ್ತ್ರ ನಮ್ಮಿಂದ ದೂರವಾಗುತ್ತಿದೆ.
ಶರೀರದ ಸಂರಕ್ಷಣೆಗಾಗಿ ಕಾಲಕ್ಕನುಗುಣವಾಗಿ ಸೇವಿಸಬೇಕಾದ ಆಹಾರ ಪದಾರ್ಥಗಳನ್ನು ಪ್ರಕೃತಿಯೇ ನಮಗೆ ನೀಡುತ್ತದೆ. ಅದನ್ನು ಉಪಯೋಗಿಸಿಕೊಂಡು ಬದುಕುವ ಬುದ್ಧಿವಂತಿಕೆಯೂ ನಮಗಿದೆಯಾದರೂ ಅತ್ತ ಗಮನ ಕೊಡದೆ ಎಲ್ಲವನ್ನೂ ವಿಕೃತಗೊಳಿಸುವಲ್ಲಿ ಜನರು ಆಸಕ್ತರಾಗಿದ್ದಾರೆ. ಹಿಂದಿನ ಆಹಾರ ಪದ್ಧತಿಯು ಔಷಧವಾಗಿತ್ತು. ಅಡುಗೆ ಮನೆಗಳು ಔಷಧಾಲಯಗಳಾಗಿದ್ದುವು. ಆದರೆ ಬೇಜವಾಬ್ದಾರಿತನದಿಂದ ಇಂದು ಆಸ್ಪತ್ರೆಗಳೇ ನಮ್ಮ ಆಶ್ರಯ ತಾಣವಾಗಿ ಬದಲಾಗಿದೆ. ಶಾರೀರಿಕ ಸ್ವಾಸ್ಥ್ಯ ಸಂರಕ್ಷಣೆಗೆ ಆದ್ಯತೆ ನೀಡದಿರುವುದರಿಂದ ನೂರಾರು ರೋಗಗಳಿಗೆ ದಾಸರಾಗಬೇಕಾಗುತ್ತದೆ ಎಂದು ಕೊಂಡೆವುರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರಿನಲ್ಲಿ ಜರುಗಿದ ಆಯು ಸಂಭ್ರಮ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀವರ್ಚನ ನೀಡಿದರು.
ಭಾರತ ದೇಶದ ಆಹಾರ ಕ್ರಮವು ಇಡೀ ಜಗತ್ತಿಗೆ ಮಾದರಿ. ಅದರ ಒಳಮರ್ಮವನ್ನು ಅರಿತ ಪಾಶ್ಚಾತ್ಯರು ಭಾರತೀಯ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರೆ ನಾವು ಪಾಶ್ಚಾತ್ಯರು ತ್ಯಜಿಸುವ ವಸ್ತಗಳನ್ನೇ ನಮ್ಮ ಆಹಾರವನ್ನಾಗಿ ಸೇವಿಸುತ್ತಿ ದ್ದೇವೆ. ಆದುದರಿಂದ ಶರೀರದ ಮಹತ್ವ ವನ್ನರಿತು ಅದಕ್ಕೆ ಅಗತ್ಯವಿರುವ ಪೂರಕ ಆಹಾರವನ್ನು ಸೇವಿಸಬೇಕು. ಪ್ರತಿಯೊಂದು ಅಡುಗೆಮನೆಯೂ ಹಿಂದಿನಂತೆ ಇಂದೂ ಔಷಧಾಲಯವಾಗಲಿ ಎಂದರು.
ಆಯು ಸಂಭ್ರಮದ ಅಧ್ಯಕ್ಷತೆ ವಹಿಸಿದ್ದ ಕೇರಳ ಪ್ರಾಂತ ಸಂರಕ್ಷಣಾ ಸಮಿತಿ ಅಧ್ಯಕ್ಷ ರವೀಂದ್ರ ವೈದ್ಯರು ಮಾತನಾಡಿ ಆಯುರ್ವೇದ ಸ್ವಾಸ್ಥ್ಯ ಸಮಾಜದ ಮೂಲ. ನಾವು ಪ್ರಕೃತಿಗೆ ಹತ್ತಿರಾದಂತೆ ಸುಖ, ಸಂತೋಷ, ನೆಮ್ಮದಿ ಮತ್ತು ಆರೋಗ್ಯವಂತ ಬದುಕು ನಮ್ಮದಾಗುತ್ತದೆ. ಆ ನಿಟ್ಟಿನಲ್ಲಿ ಈ ಕಾಲಘಟ್ಟದ ಜನಜೀವನವನ್ನು ಸಂರಕ್ಷಿಸುವ ಮತ್ತು ಜನಜಾಗೃತಿ ಮೂಡಿಸುವ ಕಾರ್ಯ ಸ್ವಾಮೀಜಿ ನೇತƒತ್ವದಲ್ಲಿ ನಡೆಯುತ್ತಿರುವುದು ಸಂತಸ ನೀಡಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ಮಾತನಾಡಿದರು.
ಪ್ರೇಮಾನಂದ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಸಂಘಟಕ ಪ್ರೇಮಾನಂದ ಶೆಟ್ಟಿ ಕುಂದಾಪುರ ಮುಖ್ಯ ಅತಿಥಿಗಾಳಗಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಶಿಧರ ಶೆಟ್ಟಿ ಮುಟ್ಟ, ಡಾ,ಸಜೀವನ್ ಪಾಲಕ್ಕಾಡ್. ಹರಿಪ್ರಸಾದ್ ಶೆಟ್ಟಿ ಉದ್ಯಮಿ ಕುಂದಾಪುರ, ಡಾ| ಶ್ರೀಧರ ಬಾಯಿರಿ ಉಡುಪಿ ಉಪಸ್ಥಿತರಿದ್ದರು.
ಗಾಯತ್ರಿ ಪ್ರಾರ್ಥನೆ ಗೀತೆ ಹಾಡಿದರು. ಹರೀಶ್ ಮಾಡ ಸ್ವಾಗತಿಸಿ ಪುಷ್ಪರಾಜ ಐಲ ಧನ್ಯವಾದ ಸಮರ್ಪಿಸಿದರು. ನಾಗನ ಕಟ್ಟೆಯಲ್ಲಿ ವಿಶೇಷ ನಾಗಪೂಜೆ ಜರಗಿತು. ಅನ್ನ, ಅಕ್ಷರ, ಆಹಾರ, ಆಧಾರ ಮತ್ತು ಆರೋಗ್ಯ ಎಂಬ ಐದು ತತ್ವಗಳ ಮೂಲಕ ಜನರಿಗೆ ನೆರವಾಗುವ ರೀತಿಯಲ್ಲಿ ವಿದ್ಯಾದಾನ, ಮನೆದಾನ ಮುಂತಾದ ಚಟುವಟಿಕೆಗಳು ಆಶ್ರಮದ ಆಶ್ರಯದಲ್ಲಿ ನಡೆಯುತ್ತಿದೆ. ಧ್ಯಾನಿ, ಜ್ಞಾನಿ ಮತ್ತು ದಾನಿಗಳಿಂದ ಸಂಪನ್ನವಾದ ವೇದಿಕೆಯನ್ನು ವಿವಿಧ ಔಷಧೀಯ ಗಿಡಮೂಲಿಕೆಗಳಿಂದ ಅಲಂಕರಿಸಲಾಗಿತ್ತು.
ಆಯು ಸಂಭ್ರಮದಲ್ಲಿ ಔಷಧಯುಕ್ತ ಆಹಾರ ಕಾರ್ಯಾಗಾರವನ್ನು ಡಾ| ಶ್ರೀಧರ ಬಾ„ರಿ ಉಡುಪಿ ಹಾಗೂ ಕೇರಳ ನಿತ್ಯಾನಂದ ಆಯುರ್ವೇದಸಂರಕ್ಷಣಾ ಸಮಿತಿಯ ರವೀಂದ್ರ ವೈದ್ಯರು ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಉಂಟಾಗುವ ಪ್ರಯೋಜನಗಳು, ತೆಂಗಿನ ಕಾಯಿಯ ಪ್ರತ್ಯೇಕತೆ ಮತ್ತು ಉಪಯೋಗಗಳು, ಭಾರತೀಯ ಆಹಾರ ಪದ್ಧತಿ ಮತ್ತು ವೈಜ್ಞಾನಿಕ ಹಿನ್ನೆಲೆ, ಮಳೆ ನೀರಿನ ಮಹತ್ವ, ತೆ„ಲ ಅಭ್ಯಂಗ, ಸ್ನಾನ, ವ್ಯಾಯಾಮ, ತಾಯಿ ಹಾಲಿನ ಬಗ್ಗೆ ಮಾಹಿತಿ ನೀಡಲಾಯಿತು. ಡಾ.ಸಜೀವನ್ ಔಷಧೀಯ ಸಸ್ಯಗಳ ಪರಿಚಯ ಮತ್ತು ಉಪಯೋಗಗಳನ್ನು ಮಲಯಾಳಂನಲ್ಲಿ ವಿವರಿಸಿದರು. ಡಾ| ಗೋಪಿನಾಥ್ ಕನ್ನಡಲ್ಲಿ ಮಾಹಿತಿ ನೀಡಿದರು.
ಔಷಧೀಯ ಆಹಾರ
ಬೆಳಗ್ಗಿನ ಉಪಹಾರದಲ್ಲಿ ದಾಸವಾಳದ ಚಹಾ, ಕಡಿಗೋಧಿಯ ಉಪ್ಪಿಟ್ಟು, ಹೆಸರಿನ ಉಸ್ಲಿ ಹಾಗೂ ಮಧ್ಯಾಹ್ನದ ಊಟಕ್ಕೆ ದಾಸವಾಳ ಎಲೆ ಸಾಂಬಾರ್, ಬಾಳೆ ಎಲೆ ಉಪ್ಪಿನಕಾಯಿ, ಹಾಗಲ ಕಾಯಿ ಇಂಚಿ ಥೆ„ರು, ಅಗ್ನಿ ಬಳ್ಳಿ ರಸ, ತುಳಸಿ ಮಸಾಲಾ, ಬಾಳೆದಿಂಡು ಸಲಾಡ್, ಕುಂಬಳ ಕಾಯಿ ಚಟ್ನಿ, ಕುಂಬಳಕಾಯಿ ಫ್ರೈ, ಕುಂಬಳಕಾಯಿ ಪಾಯಸ ವಿಶೇಷವಾಗಿತ್ತು.
ಪಾರಂಪರಿಕ ವೈದ್ಯರು ಸಿದ್ಧಪಡಿಸಿದ ಆಹಾರವನ್ನು ಸೇವಿಸಿದ ಭಕ್ತರಲ್ಲಿ ಧನ್ಯತಾ ಭಾವ ಮೂಡಿತು. ಸಭಾಂಗಣದಲ್ಲಿ ನೆರೆದಿದ್ದ ಜನಸಾಗರ ಆಯುರ್ವೇದ ಔಷಧಗಳನ್ನು ಮತ್ತು ಆಹಾರ ವಸ್ತುಗಳನ್ನು ಮಾರಾಟಮಾಡುತ್ತಿದ್ದ ಸ್ಟಾಲ್‌ಗಳತ್ತ ಆಕರ್ಷಿತರಾದರು.
ಸಂಸ್ಕೃತಿ ನೆನಪಿಸುವ ಕಾರ್ಯ
ಅತಿರಾತ್ರ ಸೋಮಯಾಗ ಮೊದಲಾದ ಅತ್ಯಪೂರ್ವವಾದ ಹೋಮ, ಯಾಗಾದಿ ಗಳಿಗೆ ಹೆಸರಾದ ಗಾಯತ್ರಿ ಮಾತೆ ನೆಲೆಸಿರುವ ಈ ಆಶ್ರಮದಲ್ಲಿ ನಡೆಯುವ ಪುಣ್ಯ ಕಾರ್ಯಗಳು ನಮ್ಮನ್ನು ಈ ಆಶ್ರಮಕ್ಕೆ ಬರುವಂತೆ ಮಾಡಿದೆ. ಗೋಸೇವೆ, ಜನಸೇವೆಯೊಂದಿಗೆ ಭಾರತೀಯ ಸಂಸ್ಕೃತಿ ಯನ್ನು ಎತ್ತಿಹಿಡಿಯುವ ಕೆಲಸ ಇಲ್ಲಿ ನಡೆಯುತ್ತಿದೆ. ವಿದ್ಯಾದಾನ, ಮನೆದಾನ ಸೇರಿದಂತೆ ನೊಂದವರ ಆಶಾಕಿರಣವಾಗಿ ಬೆಳಗುತ್ತಿರುವ ಈ ಕ್ಷೇತ್ರವು ಆರೋಗ್ಯ ಸಂರಕ್ಷಣೆಯತ್ತ ಜನರ ಚಿತ್ತವನ್ನು ಸೆಳೆಯುತ್ತಿರುವುದು ಇನ್ನೊಂದು ವಿಶೇಷ
-ಪ್ರೇಮಾನಂದ ಶೆಟ್ಟಿ,
ಕುಂದಾಪುರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Dharmasthala: ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್ ಧನ್‌ಕರ್
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
Yuzi Chahal: ಡಿವೋರ್ಸ್ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್; ಯಾರೀಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.