ನಿಯಂತ್ರಣ ಕೊಠಡಿ ನಿಯಂತ್ರಿಸಲು ಮಹಿಳೆಯರು
Team Udayavani, Mar 28, 2019, 6:30 AM IST
ಕಾಸರಗೋಡು: ಲೋಕಸಭೆ ಚುನಾವಣೆ ಸಿದ್ಧತೆ ಅಂಗವಾಗಿ ಆರಂಭಿಸಲಾದ ಜಿಲ್ಲೆಯ ನಿಯಂತ್ರಣ ಕೊಠಡಿಯನ್ನು ನಿಯಂತ್ರಿಸುತ್ತಿರುವುದು ಮಹಿಳೆಯರು.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಹಿತ ದೂರುಗಳನ್ನು, ಮತದಾರರ ಸಹಾಯ ವಾಣಿ ಇತ್ಯಾದಿಗಳನ್ನು ನಿಯಂತ್ರಿಸುವ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಈ ನಿಯಂತ್ರಣ ಕೊಠಡಿ ಕಿರಿಯ ವರಿಷ್ಠಾಧಿಕಾರಿಗಳಾದ ಇಬ್ಬರು ಮಹಿಳೆಯರ ನೇತೃತ್ವದಲ್ಲಿ ಚಟುವಟಿಕೆ ನಡೆಸುತ್ತಿದೆ. ರಾಜ್ಯದಲ್ಲಿ ಮಹಿಳೆಯರೇ ನೇತೃತ್ವ ನೀಡುತ್ತಿರುವ ಏಕೈಕ ನಿಯಂತ್ರಣ ಕೊಠಡಿ ಇದಾಗಿದೆ.
ಕಿರಿಯ ವರಿಷ್ಠಾಧಿಕಾರಿಗಳಾದ ಸಿ.ಜಿ. ಶ್ಯಾಮಲಾ, ಇಂದೂ ಎಂ. ದಾಸ್ ಅವರನ್ನು ನೋಡಲ್ ಅಧಿಕಾರಿಗಳಾಗಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ನೇಮಕಗೊಳಿಸಿದ್ದಾರೆ. ಗುಮಾಸ್ತರಾದ ಷೀಜಾ ಎ., ನಮಿತಾ ಎ., ಸಜೀತಾ ಪಿ.ಎ. ಈ ಕೊಠಡಿಯಲ್ಲಿ ಸಕ್ರಿಯ ರಾಗಿದ್ದಾರೆ.
ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿದ ಸಂಬಂಧ ದೂರು ಸ್ವೀಕರಿಸುವ ಸಿ-ವಿಜಿಲ್(ಸಿಟಿಝನ್ ವಿಜಿಲ್) ಆಪ್ಲಿಕೇಷನ್, 04994-255825, 04994-255676 ದೂರವಾಣಿಗಳಿಗೆ ಲಭಿಸುವ ದೂರುಗಳು, ಮತದಾರರ ಸಹಾಯ ವಾಣಿಯಾಗಿರುವ “1950′ ಎಂಬ ನಂಬ್ರಕ್ಕೆ ಬರುವ ಸಾರ್ವಜನಿಕ ಸಂಶಯಗಳು ಇತ್ಯಾದಿಗಳ ಪರಿಹಾರ ಉದ್ದೇಶದಿಂದ ಈ ನಿಯಂತ್ರಣ ಕೊಠಡಿ ಚಟುವಟಿಕೆ ನಡೆಸುತ್ತಿದೆ.
ಸಿ-ವಿಜಿಲ್ ಆ್ಯಪ್‌ನಲ್ಲಿ ಈ ವರೆಗೆ 32 ದೂರುಗಳು ಲಭಿಸಿವೆ. ಅವುಗಳಿಗೆ ಪರಿಹಾರ ಲಭಿಸಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಸ್ಥಾಪಿಸಲಾದ ಭಿತ್ತಪತ್ರ, ಬ್ಯಾನರ್, ಪತಾಕೆಗಳು ಇತ್ಯಾದಿ ಸಂಬಂಧ ದೂರುಗಳು ಸಿ-ವಿಜಿಲ್‌ನಲ್ಲಿ ಅಧಿಕವಾಗಿ ಲಭಿಸಿವೆ. ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಮೊಬೈಲ್ ಫೋನ್ ಕೆಮರಾದಲ್ಲಿ ಫೋಟೋ ಯಾ ವೀಡಿಯೋ ಚಿತ್ರೀಕರಿಸಿ ಸಿ-ವಿಜಿಲ್‌ಗೆ ಕಳುಹಿಸಿದರೆ, ಆ ಮೂಲಕ ಜಿಲ್ಲಾ ಚುನಾವಣೆ ಕೇಂದ್ರಕ್ಕೆ ರವಾನಿಸಲಾಗುತ್ತದೆ. ತತ್‌ಕ್ಷಣ ಸ್ಕಾÌಡ್ ಪ್ರದೇಶಕ್ಕೆ ತಲಪಿ ಕ್ರಮ ಕೈಗೊಳ್ಳುತ್ತದೆ.
ದೂರು ಆ್ಯಪ್ ಲೋಡ್ ನಡೆಸಿದ ತತ್‌ಕ್ಷಣ ಯೂನಿಕ್ ಐಡಿ ಯೊಂದು ಲಭಿಸುತ್ತದೆ. ಈ ಮೂಲಕ ದೂರಿನ ಫೋಲೋ ಅಪ್ ಮೊಬೈಲ್‌ನಲ್ಲೇ ಟ್ರಾಕ್ ನಡೆಸಬಹುದಾಗಿದೆ. ಒಬ್ಬರಿಗೆ ಒಂದಕ್ಕಿಂತ ಅಧಿಕ ದೂರುಗಳನ್ನು ದಾಖಲಿಸಬಹುದು ಎಂಬುದು ಈ ಸೌಲಭ್ಯದ ವಿಶೇಷತೆಯಾಗಿದೆ. ದೂರುದಾತನ ಮಾಹಿತಿಗಳನ್ನು ಗುಪ್ತವಾಗಿರಿಸಲಾಗುವುದು.
ಮೊಬೈಲ್ ಫೋನ್‌ನಲ್ಲಿ ಬಹಳ ಸುಲಭ ವಾಗಿ ಬಳಸಬಹುದಾದ ರೀತಿ ಆ್ಯಪ್ ರಚಿಸ ಲಾಗಿದೆ. ನೀತಿಸಂಹಿತೆ ಉಲ್ಲಂಘನೆ ನಡೆದಿ ರುವ ಪ್ರದೇಶಗಳಲ್ಲಿ ನೇರವಾಗಿ ತೆರಳಿ ಚಿತ್ರ ಪಡೆದರೆ ಮಾತ್ರ ಆ್ಯಪ್ ಮೂಲಕ ರವಾನಿಸ ಬಹುದಾಗಿದೆ. ಇತರರು ಪಡೆದ ಚಿತ್ರ ಪಡೆದು ಅಪ್ ಲೋಡ್ ಸಾಧ್ಯವಿಲ್ಲ. ಈ ಮೂಲಕ ಹುಸಿದೂರುಗಳನ್ನು ದಾಖಲಿಸಲು ಸಾಧ್ಯವಿಲ್ಲ. ನಿರಂತರ 5 ನಿಮಿಷಗಳ ಕಾಲ ಮಾತ್ರ ಈ ಆ್ಯಪ್ ಚಟುವಟಿಕೆ ನಡೆಸುತ್ತದೆ. ಮತ್ತೆ ಆ್ಯಪ್ ತೆರೆದು ದೂರು 5 ನಿಮಿಷಗಳ ಅವಧಿಯಲ್ಲಿ ಸೀಮಿತಗೊಳಿಸಿ ರವಾನಿಸಬೇಕಾಗುತ್ತದೆ. ಸಿ-ವಿಜಿಲ್ ಆ್ಯಪ್ ಪ್ಲೇಸೋrರ್‌ನಲ್ಲಿ ಲಭ್ಯವಿದೆ.
ದೂರುಗಳಿಗೆ ತತ್‌ಕ್ಷಣ ಪರಿಹಾರ
ಚುನಾವಣೆ ಸಂಬಂಧ ದೂರುಗಳಿದ್ದಲ್ಲಿ 04994-255825, 04994- 255676 ನಂಬ್ರಗಳಿಗೆ ನೀಡಬಹುದು. ಈ ದೂರುಗಳಿಗೂ ತತ್‌ಕ್ಷಣ ಪರಿಹಾರ ಲಭಿಸಲಿದೆ. ಮತದಾರರ ಸಹಾಯವಾಣಿ 1950 ನಂಬ್ರಕ್ಕೆ ಈಗಾಗಲೇ 175 ದೂರುಗಳು ಲಭಿಸಿವೆ. ಅನಿವಾಸಿ ಭಾರತೀಯರ ಮತದಾನ, ಗುರುತು ಚೀಟಿ ಪಡೆಯುವಿಕೆ ಇತ್ಯಾದಿಗಳ ಮಾಹಿತಿ ನೀಡುವಲ್ಲಿ ಈ ನಿಯಂತ್ರಣ ಕೊಠಡಿಯ ಸದಸ್ಯೆಯರು ತಾಳ್ಮೆಯಿಂದ ವ್ಯವಹರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.