ಮೀನುಗಾರಿಕಾ ಪುನರ್ವಸತಿ ಯೋಜನೆ ಭರದ ಕಾಮಗಾರಿ
Team Udayavani, May 25, 2019, 6:05 AM IST
ವಿದ್ಯಾನಗರ: ರಾಜ್ಯದಲ್ಲಿ ಮೀನುಗಾರರಿಗೆ ಎದುರಾಗುವ ವಾಸ್ತವ್ಯ ಸಮಸ್ಯೆಯನ್ನು ಹೋಗಲಾಡಿಸಿ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆಯು ಪುನರ್ವಸತಿ ಯೋಜನೆ ಕೈಗೊಂಡಿದ್ದು ಜಿಲ್ಲೆಯಲ್ಲಿ ಮನೆಗಳ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ.
ಪಾರೆಕಟ್ಟ್ ಸಮೀಪ ಮೀನುಗಾರರಿಗಾಗಿ 35 ಮನೆಗಳ ನಿರ್ಮಾಣ ಕಾರ್ಯವು ಈಗಾಗಲೇ ಪ್ರಾರಂಭವಾಗಿದ್ದು ಇಲಾಖೆಯು ಪ್ರತಿಯೊಂದು ಮನೆಗೆ 10ಲಕ್ಷ ರೂ.ನಂತೆ 3.50 ಕೋಟಿ ಮೊತ್ತವನ್ನು ಮೀಸಲಿಟ್ಟಿದೆ. ಮೂರು ತಿಂಗಳಿಂದ ಮನೆಗಳ ಕಾಮಗಾರಿಯು ಗುತ್ತಿಗೆದಾರರ ನೇತƒತ್ವದಲ್ಲಿ ನಡೆಯುತ್ತಿದೆ. ಎಲ್ಲಾ 35 ಮನೆಗಳ ಕಾಮಗಾರಿಯು ಒಂದೇ ಹಂತದಲ್ಲಿ ನಡೆಯುತ್ತಿದ್ದು 8 ತಿಂಗಳೊಳಗೆ ಕೆಲಸ ಪೂರ್ತಿ ಗೊಳಿಸಿ ಮನೆಯನ್ನು ಮೀನುಗಾರರಿಗೆ ಬಿಟ್ಟುಕೊಡುವಂತೆ ಇಲಾಖೆ ಆದೇಶಿಸಿದೆ. ಇನ್ನು 5 ತಿಂಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ಪೂರ್ತಿಯಾಗಲಿದೆ.
ಕಡಲ್ಕೊರೆತ, ಜಲಪ್ರಳಯದಿಂದ ಉಂಟಾದ ನಾಶದಿಂದಾಗಿ ಹಲವರು ವಸತಿರಹಿತರಾಗಿದ್ದಾರೆ. ಇನ್ನು ಕೆಲವರ ಮನೆಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆೆ. ಮೀನುಗಾರಿಕಾ ಇಲಾಖೆಯು ಪ್ರತಿ ಫಲಾನುಭವಿಗೂ ರೂ. 10 ಲಕ್ಷದಂತೆ ಧನಸಹಾಯ ಒದಗಿಸಲು ಮುಂದಾಗಿದ್ದು ಈಗಾಗಲೇ ಮೊದಲ ಸುತ್ತಿನ ಮೊತ್ತ ಖಾತೆಗೆ ಜಮಾ ಮಾಡಲಾಗಿದೆ. ಇದರಿಂದಾಗಿ ಮನೆಗಳ ನಿರ್ಮಾಣ ಕಾರ್ಯವೂ ವೇಗವಾಗಿ ಸಾಗುತ್ತಿದೆ. ಒಂದೇ ಪ್ರದೇಶದಲ್ಲಿ 35 ಮನೆಗಳ ನಿರ್ಮಾಣವಾಗುತ್ತಿದೆ. ಫಿಶರೀಸ್ ಕಾಲನಿಯಾಗಿ ಅಭಿವೃದ್ದಿ ಹೊಂದುತ್ತಿರುವ ಈ ಪ್ರದೇಶದಲ್ಲಿ ಬೋರ್‌ವೆಲ್ ಸ್ಥಾಪಿಸಿ ಆ ಮೂಲಕ ಪ್ರತಿಯೊಂದು ಮನೆಗೂ ನೀರಿ ಸರಬರಾಜು ಮಾಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Udupi: “ವಕ್ಫ್ ‘ ಸಮಸ್ಯೆ ಶೀರ್ಘ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.