ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ
ಯಾತ್ರಾರ್ಥಿಗಳು ಬೆಳಿಗ್ಗೆ ಎದ್ದು ನೋಡಿದಾಗ ಬಸ್ ಗೋವಾ ಸಮುದ್ರ ಕಿನಾರೆಯಲ್ಲಿತ್ತು
Team Udayavani, May 18, 2022, 10:00 AM IST
ಕಾಸರಗೋಡು : ಕೊಲ್ಲೂರು ಶ್ರೀ ಮುಕಾಂಬಿಕೆಯ ದರ್ಶನಕ್ಕೆ ತೆರಳಿದ್ದ ಯಾತ್ರಾರ್ಥಿಗಳು ತಲುಪಿದ್ದು ಗೋವಾದ ಬೀಚ್‌ಗೆ!
ಹೌದು… ಕೇರಳದ ರಾಜಧಾನಿ ತಿರುವನಂತಪುರದಿಂದ ಕೊಲ್ಲೂರು ದೇವಸ್ಥಾನ ದರ್ಶನ ಮಾಡಲು ಹೊರಟಿದ್ದ ಯಾತ್ರಾರ್ಥಿಗಳು ಗೋವಾ ತಲುಪಿದ್ದಾರೆ. ಮೇ 15ರ ಸಂಜೆ ತಿರುವನಂತಪುರದಿಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಕೆ-ಸ್ವಿಫ್ಟ್ ಬಸ್ ಕೊಲ್ಲೂರಿಗೆ ಹೊರಟಿತ್ತು. ಎರ್ನಾಕುಳಂ ವರೆಗೆ ಓರ್ವ ಚಾಲಕನಿದ್ದು, ಅಲ್ಲಿಂದ ಇನ್ನೋರ್ವ ಚಾಲಕ ಬಸ್ಸನ್ನೇರಿ ಕರ್ತವ್ಯ ಆರಂಭಿಸಿದ. ಬಸ್ ಮಂಗಳೂರು ಮೂಲಕ ಕುಂದಾಪುರಕ್ಕೆ ತಲುಪಿತು. ಅಲ್ಲಿಂದ ಕೊಲ್ಲೂರಿಗೆ ತೆರಳಲು ಬಲಕ್ಕೆ ತಿರುವು ಪಡೆದುಕೊಳ್ಳಬೇಕು. ಆದರೆ ಕೊಲ್ಲೂರು ಬಗೆಗೆ ಯಾವುದೇ ಮಾಹಿತಿ ಇಲ್ಲದ ಚಾಲಕ ನೇರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಬಸ್ಸನ್ನು ಚಲಾಯಿಸಿದ.
ಸೋಮವಾರ ಬೆಳಗ್ಗೆ ಬಸ್‌ನಲ್ಲಿದ್ದವರು ಎಚ್ಚೆತ್ತು ನೋಡಿದಾಗ ಬಸ್ ಸಮುದ್ರ ಕಿನಾರೆಯಲ್ಲಿತ್ತು. ಅರೆನಗ್ನ ವಿದೇಶೀಯರು ಓಡಾಡುತ್ತಿದ್ದರು. ಮೂಕಾಂಬಿಕೆಯ ದರ್ಶನಕ್ಕೆಂದು ಹೊರಟ ತಾವು ಗೋವೆಗೆ ತಲುಪಿದ್ದೇವೆ ಎಂಬುದು ತಿಳಿಯಿತು.
ಚಾಲಕನೊಂದಿಗೆ ಪ್ರಯಾಣಿಕರು ವಾಗ್ವಾದ ನಡೆಸಿದರು. ಗೂಗಲ್ ಮ್ಯಾಪ್ ದಾರಿ ತಪ್ಪಿಸಿದೆ ಎಂದು ಹೇಳಿ ಚಾಲಕ ಪಾರಾಗಲು ಯತ್ನಿಸಿದ. ಬಳಿಕ ಪ್ರಯಾಣಿಕರನ್ನು ಕೊಲ್ಲೂರಿಗೆ ಕರೆದೊಯ್ದ. ದೇವರ ದರ್ಶನ ಪಡೆದ ಪ್ರಯಾಣಿಕರು ಊರಿಗೆ ವಾಪಸಾಗಿದ್ದಾರೆ.
ಇದನ್ನೂ ಓದಿ : ಮುದ್ದೇಬಿಹಾಳದಲ್ಲಿ ಭಾರೀ ಗಾಳಿ ಮಳೆ: ಧರೆಗುರುಳಿದ ಮರಗಳು, ಅಂಗಡಿ, ವಾಹನಗಳು ಜಖಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.