ಯಕ್ಷಗಾನ ಶಿಬಿರ ಸಮಾರೋಪ: ಜನಮನ ಸೂರೆಗೊಂಡ “ವೀರ ಅಭಿಮನ್ಯು’
Team Udayavani, Jul 13, 2017, 2:40 AM IST
ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಎಡನೀರಿನಲ್ಲಿ ಒಂದು ತಿಂಗಳ ಕಾಲ ನಡೆದ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾಸರಗೋಡು ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಇದರ ಅಂಗವಾಗಿ “ವೀರ ಅಭಿಮನ್ಯು ‘ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಸಭಾಂಗಣದಲ್ಲಿ ಕಿಕ್ಕಿರಿದ ಜನಸಂದಣಿ ಕಂಡುಬಂತು. ಎಡನೀರು, ಬಪ್ಪನಾಡು, ಕಟೀಲು, ಧರ್ಮಸ್ಥಳ ಮೇಳದ ಹಲವು ಪ್ರಸಿದ್ಧ ಕಲಾವಿದರು ಹಾಗೂ ಕೆಲವು ಶಿಬಿರಾರ್ಥಿಗಳು ಯಕ್ಷಗಾನ ಬಯಲಾಟದಲ್ಲಿ ಭಾಗಿಯಾದರು.
ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಚೆಂಡೆಯಲ್ಲಿ ಅಡೂರು ಲಕ್ಷಿ$¾àನಾರಾಯಣ ರಾವ್, ಮದ್ದಳೆಯಲ್ಲಿ ನೇರೋಳು ಗಣಪತಿ ನಾಯಕ್ ಮತ್ತು ಉದಯ ಕಂಬಾರು, ಚಕ್ರತಾಳದಲ್ಲಿ ಶ್ರೀ ಸ್ಕಂದ ದಿವಾಣ ಸಹಕರಿಸಿದರು.
ಮುಮ್ಮೇಳದಲ್ಲಿ ರಾಧಾಕೃಷ್ಣ ನಾವಡ ಮಧೂರು (ದ್ರೋಣ), ಮೋಹನ ಶೆಟ್ಟಿ ಬಾಯಾರು (ಕೌರವ), ಹರಿನಾರಾಯಣ ಎಡನೀರು (ಸಂಶಪ್ತಕ), ಮೋಹನ ಬೆಳ್ಳಿಪ್ಪಾರೆ (ಅರ್ಜುನ), ಬಾಲಕೃಷ್ಣ ಮಣಿಯಾಣಿ ಮವ್ವಾರು (ಹಾಸ್ಯ), ಶಶಿಧರ ಕುಲಾಲ್ ಕನ್ಯಾನ (ಅಭಿಮನ್ಯು), ಶಭರೀಶ ಮಾನ್ಯ (ಸಂಶಪ್ತಕ), ಬಾಲಕೃಷ್ಣ ಸೀತಾಂಗೋಳಿ(ಸುಭದ್ರೆ), ಶ್ರೀಕೃಷ್ಣ ದೇವಕಾನ (ಧರ್ಮರಾಯ), ವಿಶ್ವನಾಥ ಎಡನೀರು (ಕರ್ಣ), ಪ್ರಕಾಶ್ ನಾಯ್ಕ ನೀರ್ಚಾಲು (ಸಾರಥಿ), ವಸುಂಧರ ಹರೀಶ್ (ಶ್ರೀಕೃಷ್ಣ), ಮನೀಶ್ ಪಾಟಾಳಿ ಎಡನೀರು (ಭೀಮ), ಮಧುರಾಜ್ ಪಾಟಾಳಿ ಎಡನೀರು (ದುಶಾÏಸನ), ಶಿಬಿರಾರ್ಥಿಗಳಾದ ಆದರ್ಶ್ (ನಕುಲ), ಪ್ರಜ್ವಲ್ (ಸಹದೇವ), ವಿನಯ್, ಗೌತಮ್, ನವೀನಚಂದ್ರ ಶರ್ಮ, ಯತೀಶ್, ಜನಾರ್ದನ, ಹೃಷಿಕೇಶ (ಕೋಟೆಯ ಬಲಗಳು) ಭಾಗವಹಿಸಿದ್ದರು.
ನಾಟ್ಯಗುರುಗಳಾದ ದಿವಾಣ ಶಿವಶಂಕರ ಭಟ್, ಸಬ್ಬಣಕೋಡಿ ರಾಮಭಟ್, ಸತೀಶ ಪುಣಿಂಚತ್ತಾಯ ಪೆರ್ಲ ಹಾಗೂ ಸರಕಾರಿ ಕಾಲೇಜಿನ ಸ್ನೇಹರಂಗ ಸಂಯೋಜನೆ ಮಾಡಿದರು.
ಪ್ರಶಾಂತ ಹೊಳ್ಳ ಎನ್., ರಂಗನಾಥ ಕೂಡ್ಲು, ರಕ್ಷಿತ್ ಪಿ.ಎಸ್, ಕೀರ್ತನ್ ಕುಮಾರ್, ಪ್ರದೀಪ್ ಕುಮಾರ್ ಬಿ.ಎಸ್., ಪ್ರಕಾಶ್ ಎಂ., ಮೋಹಿತ್ ಎ., ಅಜಿತ್ ಶೆಟ್ಟಿ, ರಾಜಾರಾಮ ಪಿ., ಬಾಲಕೃಷ್ಣ ಬೆಳಿಂಜ, ಅಭಿಷೇಕ್ ಬಲ್ಲಾಳ್, ಶ್ರೀಹರಿ, ಸುಜಿತ್ ಕುಮಾರ್, ಮಹೇಶ ಏತಡ್ಕ ಮುಂತಾದವರು ಸಹಕರಿಸಿದರು. ಡಾ| ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಡಾ| ರಾಜೇಶ್ ಬೆಜ್ಜಂಗಳ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.